ಕೊಡಗು ಭಾಗದ ಭೂತಾರಾಧನೆ ಬಗ್ಗೆ ಜಾಲತಾಣದಲ್ಲಿ ಅವಹೇಳನ ಮಾಡಿರುವುದು ಸರಿಯಲ್ಲ ಎಂದು ಅಜಿತ್ ಐವರ್ನಾಡು ಹೇಳಿದರು. ಅವರು ಜೂ.17 ರಂದು ಗೋಷ್ಠಿಯಲ್ಲಿ ಮಾತನಾಡಿ ಮೇ.28 ರಂದು ಮುರ್ನಾಡುವಿನಲ್ಲಿ ನಡೆದ ಶಿರಾಡಿ ದೈವದೊಂದಿಗೆ ಇತರರು ನರ್ತನ ಮಾಡಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನವೆಂದು ಪ್ರಚಾರ ಮಾಡಿದ್ದು ತಪ್ಪು. ಇದಲ್ಲದೆ ಕೊಡಗು ಹಾಗೂ ದಕ್ಷಿಣ ಕನ್ನಡದ ದೈವಾರಾಧನೆ ಪದ್ಧತಿಯಲ್ಲಿ ಹಲವು ಬದಲಾವಣೆಗಳಿರಬಹುದು ಆದರೆ ಅವುಗಳು ಆಯಾಯ ಊರಿನ ಕಟ್ಟು ಕಟ್ಟಳೆಯಂತೆ ನಡೆಯುತ್ತಿದೆ. ದೈವಕ್ಕೆ ಇಂತದ್ದೆ ಕೊಡಬೇಕೆಂಬ ಪದ್ಧತಿ ಇರದೆ ಭಕ್ತಿಯಿಂದ ಯಾವುದು ಕೊಟ್ಟರು ದೈವ ಸ್ವೀಕರಿಸಬೇಕು. ಅದೇ ರೀತಿ ನರ್ತನ ಮಾಡುವ ಹರಕೆ ಹೊತ್ತು ತೀರಿಸಲು ದೈವದೊಂದಿಗೆ ಕುಣಿತ ಮಾಡುವುದು ಅವಹೇಳನ ಅಲ್ಲ. ಹಾಗೆ ಕೊಡಗಿನ ವಾದ್ಯ ಹಾಗೂ ಇಲ್ಲಿಯ ವಾದ್ಯಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಹಾಗಾಗಿ ಅವಹೇಳನ ಎಂದು ಸಾಮಾಜಿಕ ಜಾಲತಾಣದಲ್ಲಿ ನೇರವಾಗಿ ಹರಿದಾಡಿಸಿದ್ದು ತಪ್ಪು ಎಂದು ಹೇಳಿದರು. ಗೋಷ್ಠಿಯಲ್ಲಿ ಅಜಿತ್ ಐವರ್ನಾಡು, ಉಮೇಶ್ ಬೊಳಿಯಮಜಲು, ಶ್ರೀಧರ ಅಜಲ ಮೈತಡ್ಕ, ಮೊನಪ್ಪ ಅಜಲ ಮಾಡವು, ಕುಂಞ ಅಜಲ ಬೊಳಿಯಮಜಲು ಉಪಸ್ಥಿತರಿದ್ದರು.
- Thursday
- November 21st, 2024