Ad Widget

ಕ್ಯಾಂಪಸ್ ಫ್ರಂಟ್ ವಿದ್ಯಾರ್ಥಿ ಶಿಬಿಲಿಯ ಸಾಧನೆಗೆ ಶಿಕ್ಷಣಾಧಿಕಾರಿಯಿಂದ ಪ್ರಶಂಸೆ

ಕೊರೊನಾ ತಡೆಗಟ್ಟಲು ಇಲ್ಲಿನ ಆಡಳಿತ ವ್ಯವಸ್ಥೆ ಹರಸಾಹಸ ಪಡುತ್ತಿರುವಾಗ ಗಾಂಧಿನಗರ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ, ಸುಳ್ಯದ ಇಕ್ಬಾಲ್ ಜಿ ಎ ರವರ ಪುತ್ರ ಮೊಹಮ್ಮದ್ ಶಿಬಿಲಿ  ತನ್ನ ಕೈ ಚಳಕದ ಮೂಲಕ ಸ್ಯಾನಿಟೈಝರ್ ಸ್ಟ್ಯಾಂಡ್ ತಯಾರಿಸುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಸ್ಟ್ಯಾಂಡ್‌ನ ಪ್ರಾತ್ಯಕ್ಷಿಕೆ – ಕೊರೊನಾ ಮಹಾಮಾರಿಯನ್ನು ತಡೆಗಟ್ಟಲು ಸಾಮಾಜಿಕ ಅಂತರ ಕಾಪಾಡುವುದು ಮತ್ತು ಕೈಯನ್ನು ಆವಾಗವಾಗ ಸ್ಯಾನಿಟೈಝ್ ಮಾಡುವುದು ಬಹಳ ಮುಖ್ಯ. ಹೀಗಾಗಿ ಕಾಲಿನ ಮೂಲಕ ಅದುಮಿ ಸ್ಯಾನಿಟೈಝರನ್ನು ಕೈಗೆ ಹಾಕಿ ಕೈಯನ್ನು ಶುಚಿಯಾಗಿ ಇರಿಸುವುದು ಈ ಸ್ಟ್ಯಾಂಡ್‌ನ ವೈಶಿಷ್ಟ್ಯ. 
“ಸಾರ್ವಜನಿಕ ಸ್ಥಳಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಎಲ್ಲರೂ ಒಂದೇ ಬಾಟಲಿಯ ಸ್ಯಾನಿಟೈಝರನ್ನು ಬಳಸುವ ಸಂದರ್ಭದಲ್ಲಿ ಇತರರು ಮುಟ್ಟಿದ ಅದೇ ಸ್ಯಾನಿಟೈಝರ್ ಬಾಟಲ್ ನಾವು ಮುಟ್ಟುವುದರಿಂದ ವೈರಸ್ ಹರಡಲು ಸಾಧ್ಯತೆಯಿರುವುದರಿಂದ ನಾನು ಇಂತಹ ಒಂದು ವಿಭಿನ್ನ ರೀತಿಯ ಯೋಚನೆಯನ್ನು ಮಾಡಿ ಈ ಉಪಕರಣವನ್ನು ತಯಾರಿಸಿದೆ” ಎನ್ನುತ್ತಾರೆ ಮೊಹಮ್ಮದ್ ಶಿಬಿಲಿ.
ತಾನು ವಿನೂತನ ನಿರ್ಮಿಸಿದ ಸ್ಟ್ಯಾಂಡನ್ನು ಕ್ಯಾಂಪಸ್ ಫ್ರಂಟ್ ಸುಳ್ಯ ನಾಯಕರೊಂದಿಗೆ ತೆರಳಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಸುಳ್ಯ ಕ್ಷೇತ್ರ  ಶಿಕ್ಷಣಾಧಿಕಾರಿ‌ಯವರಾದ ಮಹಾದೇವ್‌ರವರು ಮಾತನಾಡಿ ವಿದ್ಯಾರ್ಥಿಯಿಂದ ಇದೊಂದು ವಿಶಿಷ್ಠ‌ ಸಾಧನೆ, ಮುಂದಿನ ದಿನಗಳಲ್ಲಿ ಉತ್ತಮ ಸಂಶೋಧಕ, ವಿಜ್ಞಾನಿಯಾಗಿ ಮೂಡಿ ಬರಲಿ ಎಂದು ಹಾರೈಸಿ, ಸನ್ಮಾನ ಮಾಡಿದರು.
ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಅನ್ಸಾರ್ ಬೆಳ್ಳಾರೆ, ಕ್ಯಾಂಪಸ್ ಫ್ರಂಟ್ ಸುಳ್ಯ ಅಧ್ಯಕ್ಷರಾದ ಅರ್ಫೀದ್ ಅಡ್ಕಾರ್,ಕಾರ್ಯದರ್ಶಿ ಸಾಜಿದ್ ಸುಳ್ಯ, ಸದಸ್ಯರಾದ ಶಮಾಲ್ ಸುಳ್ಯ, ಅಜ್‌ನಾಸ್ ಪೈಚಾರ್  ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!