Ad Widget

ವಿಕಲಚೇತನರಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಸಂತ್ರಸ್ತರಿಂದ ದೂರು- ಟ್ರಸ್ಟ್ ಸಂಚಾಲಕರಿಂದ ಸ್ಪಷ್ಟನೆ


ಸೌಭಾಗ್ಯ ವಿಕಲಚೇತನ ಸೇವಾ ಟ್ರಸ್ಟ್ ಸುಳ್ಯ ಈ ಸಂಸ್ಥೆಯ ಹೆಸರಿನಲ್ಲಿ ವಿಕಲಚೇತನರಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಅಜ್ಜಾವರ ಮತ್ತು ಮರ್ಕಂಜ ಗ್ರಾಮಗಳಿಂದ ಕೆಲವು ಸಂತ್ರಸ್ತರು ಸುಳ್ಯ ಅಧಿಕಾರಿಗಳಿಗೆ ದೂರು ನೀಡಿರುವ ಘಟನೆ ಇಂದು ನಡೆದಿದೆ.ದೂರಿನಲ್ಲಿ ಸೌಭಾಗ್ಯ ವಿಕಲಚೇತನ ಸೇವಾ ಟ್ರಸ್ಟ್ ಎಂಬ ಹೆಸರಿನಲ್ಲಿ ತಾಲೂಕಿನಾದ್ಯಂತ ಅದೇ ರೀತಿ ಮರ್ಕಂಜ ಗ್ರಾಮದಲ್ಲಿ ವಿಕಲಚೇತನರಿಂದ ಎಂಬ ಹೆಸರಿನಲ್ಲಿ ಪ್ರತಿ ವಿಕಲಚೇತನರಿಂದ 1 ಸಾವಿರ , ಕೆಲವು ಕಡೆಗಳಲ್ಲಿ 1200 1500ರೂ ನೀಡಬೇಕೆಂದು ಹಣ ವಸೂಲಿ ಮಾಡಿರುವುದು ಕಂಡುಬರುತ್ತದೆ . ಈ ಬಗ್ಗೆ ಗ್ರಾಮ ಪಂಚಾಯಿತಿಗೆ ಯಾವುದೇ ಮಾಹಿತಿಯನ್ನು ನೀಡಿರುವುದಿಲ್ಲ. ಮತ್ತು ಅವರು ಮನೆ ಭೇಟಿ ಮಾಡುವ ಸಂದರ್ಭದಲ್ಲಿ ಕೊರೋನಾ ಹಿನ್ನೆಲೆಯಲ್ಲಿ ಆತಂಕದಲ್ಲಿರುವ ಸಂದರ್ಭಗಳಲ್ಲಿ ಮಾಸ್ಕ್ ಗಳನ್ನು ಧರಿಸುವುದಿಲ್ಲ. ಕೋವಿಡ್ 19ರ ಸಮಯದಲ್ಲಿ ವಿಕಲಚೇತನರ ಮನೆಯವರು ಕಷ್ಟದ ಜೀವನ ನಡೆಸುತ್ತಿರುವಾಗ ಅವರ ಪಿಂಚಣಿ ಹಣದಿಂದ ವಿಕಲಚೇತನರನ ಸದಸ್ಯತ್ವ ಸ್ವೀಕರಿಸಿ ಎಂದು ಕೇಳುವುದು ಸರಿಯಲ್ಲ ಇದರ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ವಿನಂತಿಸುತ್ತೇವೆ ಎಂದು ದೂರಿ ಅಧಿಕಾರಿಗಳಿಗೆ ಮನವಿ ನೀಡಿರುವುದಾಗಿ ತಿಳಿದುಬಂದಿದೆ.ಈಗಾಗಲೇ ಸಂತ್ರಸ್ತರು ದೂರುಗಳನ್ನು ಸುಳ್ಯ ತಹಸೀಲ್ದಾರರ ಬಳಿ ನೀಡಲು ಮುಂದಾದಾಗ ಮತ್ತೊಮ್ಮೆ ಸಂಘದವರ ಬಳಿ ಚರ್ಚಿಸಿ ಬನ್ನಿ ಎಂದು ತಾಸಿಲ್ದಾರರು ಹೇಳಿರುವುದಾಗಿ ಸಂತ್ರಸ್ತರು ಹೇಳಿದ್ದಾರೆ ಹಾಗೂ ಸುಳ್ಯ ಪೊಲೀಸ್ ಠಾಣೆಗೆ ಹೋದಾಗ ಇದು ಸಹಕಾರ ಸಂಘಗಳಿಗೆ ಸೇರಿರುವ ಕಾರಣ ಸಹಕಾರ ಸಂಘಗಳ ಅಧಿಕಾರಿಗಳಿಗೆ ದೂರನ್ನು ನೀಡಲು ಸೂಚಿಸಿರುತ್ತಾರೆ. ನಂತರ ಅವರು ಸುಳ್ಯ ತಾಲೂಕು ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಅವರ ಬಳಿ ಸುಳ್ಯ ತಾಲೂಕು ವಿಕಲಚೇತನರ ಸಂಘ ಹಾಗೂ ವಿ ಆರ್ ಡಬ್ಲ್ಯೂ ಚಂದ್ರಶೇಖರ್ ರವರಿಗೆ ದೂರನ್ನು ನೀಡಿರುವುದಾಗಿ ತಿಳಿದು ಬಂದಿದೆ.

ಈ ವಿಚಾರವಾಗಿ ಸೌಭಾಗ್ಯ ವಿಕಲಚೇತನರ ಸೇವಾ ಟ್ರಸ್ಟ್ ಇದರ ಸಂಚಾಲಕ ಭರತ್ ಹೊಸೊಳಿಕೆ ಜತೆ ಕೇಳಿದಾಗ ಅವರು “ಸೌಭಾಗ್ಯ ವಿಕಲಚೇತನರ ಸೇವಾ ಟ್ರಸ್ಟ್ (ರಿ) ಸುಳ್ಯ ಇದರ ಆಶ್ರಯದಲ್ಲಿ ಸೌಭಾಗ್ಯ ವಿಕಲಚೇತನರ ಪತ್ತಿನ ಸೊಸೈಟಿ (ರಿ) ರಚಿಸಲಾಗಿದೆ. ಇದು ಕಾನೂನಾತ್ಮಕವಾಗಿ ಸೊಸೈಟಿ ಕಾಯಿದೆ ಪ್ರಕಾರ ರಚಿಸಿದ್ದು ಚಟುವಟಿಕೆಗಳು ಕೂಡ ಕಾನೂನು ಚೌಕಟ್ಟಿನಲ್ಲೇ ನಡೆಯುತ್ತಿದ್ದು, ಎಲ್ಲಾ ಲೆಕ್ಕಾಚಾರಗಳು ಸಮರ್ಪಕವಾಗಿವೆ. ಹಾಗೂ ಯಾವುದೇ ರೀತಿಯ ಅವ್ಯವಹಾರ ನಡೆಯಲು ಸಾಧ್ಯವಿಲ್ಲ. ‌ನಮ್ಮ ಸೊಸೈಟಿಯು ಎಪ್ರಿಲ್ 17 ರಂದು ಉದ್ಘಾಟನೆಗೊಳ್ಳಲು ಸಿದ್ದವಾಗಿತ್ತು. ಆದರೇ ಕೊರೊನ ದಿಂದಾಗಿ ಲಾಕ್ ಡೌನ್ ಜಾರಿಯಾಗಿದ್ದರಿಂದ ನಡೆಯಲಿಲ್ಲ. ನಮ್ಮ ಸಂಸ್ಥೆಯ ಸದಸ್ಯರು ಪ್ರತಿ ಗ್ರಾಮದ ವಿಕಲಚೇತನರ ಮಾಹಿತಿ ಸಂಗ್ರಹ ಮತ್ತು ಕುಟುಂಬ ಸದಸ್ಯರ ಷೇರು, ಶುಲ್ಕ ಸಂಗ್ರಹಿಸುವ ಸಂದರ್ಭ ಕೋವಿಡ್ 19 ರ ನಿಯಮಾವಳಿಗಳ ಪಾಲನೆ ಮಾಡಿರುತ್ತೇವೆ. ಈ ಸಹಕಾರಿ ಸೊಸೈಟಿ ವಿಕಲಚೇತನರ ಸ್ವಾವಲಂಬಿ ಬದುಕು ಕಟ್ಟಿ ಬೆಳೆಸುವ ನಿಟ್ಟಿನಲ್ಲಿ ವಿಕಲಚೇತನರಿಂದ ವಿಕಲಚೇತನರಿಗಾಗಿ ನಡೆಸುವ ಸೊಸೈಟಿಯಾಗಿರುತ್ತದೆ.ಆದುದರಿಂದ ಯಾವುದೇ ವಿಕಲಚೇತನ ಸದಸ್ಯರು ಕೂಡ ಸುಳ್ಳು ವದಂತಿಗಳಿಗೆ ತಲೆಕಡಿಸಿಕೊಳ್ಳದೇ ಜಾಗೃತರಾಗಿರಬೇಕೆಂದು ಹಾಗೂ ಲಾಕ್ ಡೌನ್ ಸಡಿಲಿಕೆ ಬಳಿಕ ಸೊಸೈಟಿಯು ಉದ್ಘಾಟನೆ ನಡೆಯಲಿದೆ ಎಂದು ತಿಳಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!