Ad Widget

ಕೆವಿಜಿ ಐಪಿಎಸ್‌ ನೂತನ ಪ್ರಾಂಶುಪಾಲರಾಗಿ ಅರುಣ್ ಕುಮಾರ್

ಸುಳ್ಯದ ಪ್ರತಿಷ್ಠಿತ ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ನೂತನ ಪ್ರಾಂಶುಪಾಲರಾಗಿ ಅರುಣ್ ಕುಮಾರ್ ಎಸ್ . ಅಧಿಕಾರ ವಹಿಸಿಕೊಂಡರು . ಇಂಗ್ಲಿಷ್ ಎಂ.ಎ. , ಬಿ.ಎಡ್ ಪದವೀಧರರಾಗಿರುವ ಅವರು ಕರ್ನಾಟಕ , ಕೇರಳ ಹಾಗೂ ತಮಿಳುನಾಡು ರಾಜ್ಯಗಳ ವಿವಿಧ ಶಾಲೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ . ಮೈಸೂರಿನ ಪ್ರತಿಷ್ಠಿತ ಕೈಸ್ಟ್ ಶಾಲೆಯಲ್ಲಿ ಸೇವೆ ಸಲ್ಲಿಸಿದ ಅನುಭವವಿದೆ . ಕೊಡಗಿನ ನ್ಯಾಷನಲ್ ಅಕಾಡೆಮಿಯಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಪ್ರಸ್ತುತ ಕೆ.ವಿ.ಜಿ.ಐ.ಪಿ.ಎಸ್‌ನ ಪ್ರಾಂಶುಪಾಲರಾಗಿದ್ದಾರೆ . ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಡಾ | ರೇಣುಕಾ ಪ್ರಸಾದ್ ಕೆ.ವಿ. ಅವರು ನೂತನ ಪ್ರಾಚಾರ್ಯರಿಗೆ ಪುಷ್ಪಗುಚ್ಛನೀಡಿ ಸ್ವಾಗತಿಸಿದರು . ಉಪಪ್ರಾಚಾರ್ಯ ಶಿಲ್ಪಾ ಬಿದ್ದಪ್ಪ ಹಾಗೂ ಶಾಲಾ ಸಿಬಂದಿ ವರ್ಗದವರು ಉಪಸ್ಥಿತರಿದ್ದರು .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!