ಕುಕ್ಕೆ ಸುಬ್ರಹ್ಮಣ್ಯದಲ್ಲಿ ತೆಂಗಿನ ಎಣ್ಣೆಯ ಮಿಲ್ ಆರಂಭಿಸಿ ಯಶಸ್ವಿಯಾಗಿ ಉದ್ಯಮ ನಡೆಸಿಕೊಂಡು, ಸಮಾಜಸೇವಕರಾಗಿ ಜನಾನುರಾಗಿಯಾಗಿದ್ದ ಗುರುಪ್ರಸಾದ್ ಪಂಜರವರು ಇತ್ತೀಚೆಗೆ ಮಹಾರಾಷ್ಟ್ರ ರಾಜ್ಯದ ನವೀಮುಂಬೈಯ ನೆರುಲ್ ನಲ್ಲಿ ಬಾಲಾಜಿ ಕೊಬ್ಬರಿ ಎಣ್ಣೆಮಿಲ್ ವ್ಯಾಪಾರವನ್ನು ಪ್ರಾರಂಭಿಸಿದ್ದಾರೆ. ಸುಳ್ಯದ ಉತ್ಪನ್ನವನ್ನು ಮುಂಬೈಗೆ ಪರಿಚಯಿಸುವ ಕೆಲಸ ಮಾಡಿದ್ದಾರೆ. ಲೋಕಲ್ ಉತ್ಪನ್ನವನ್ನು ಗ್ಲೋಬಲ್ ಉತ್ತನ್ನವಾಗಿರಿಸುವ ಆತ್ಮನಿರ್ಭರ ಬಾರತದ ಪರಿಕಲ್ಪನೆಯನ್ನು ಸಾಕಾರಗೊಳಿಸುತ್ತ ಪ್ರಯತ್ನ ನಡೆಸಿದ್ದಾರೆ.
ಮುಂಬೈಯಲ್ಲಿ ಹೊಸ ವ್ಯಾಪಾರ ಆರಂಭಿಸಿದ ಗುರುಪ್ರಸಾದ್ ಅವರ ಸಮಾಜಸೇವೆಯನ್ನು ಗುರುತಿಸಿದ ನೆರುಲ್ ಶಿವಸೇನೆ ಶಾಖೆಯು ಸನ್ಮಾನಿಸಿದೆ. ಈ ಶುಭ ಸಂದರ್ಭದಲ್ಲಿ ಸ್ಥಳೀಯ ಶಿವಸೇನಾ ನಗರಸೇವಕರಾದ ರಂಗನಾಥ್ ಅವಟಿ ಹಾಗೂ ಶಾಖಾ ಪ್ರಮುಖ್ ರಾಜೇಶ್ ಸಂಜೀವ ಪೂಜಾರಿ, ಉಪ ಶಹರ್ ಪ್ರಮುಖ್ ಗಣೇಶ್ ಗಾಗ್, ಶಿವಸೈನಿಕರು, ಅಭಿನಂದನ್ ಬ್ಯಾಂಕ್ವೆಟ್ ನ ಮಾಲೀಕರಾದ ಸತೀಶ್ ಎರ್ಮಾಲ್, ಸುಕೇಶ್ ಶೆಟ್ಟಿ ಗುಬ್ಬಿಗ, ದೀಕ್ಷಿತ್ ಪಲಗೇಣಿ ಹಾಗೂ ಪಂಜ ಮೂಲದ ಉದ್ಯಮಿ ಸಿಂಧೂರ್ ರಾಜೇಶ್ ಗೌಡ ಉಪಸ್ಥಿತರಿದ್ದರು.