Ad Widget

ದ.ಕ ಜಿಲ್ಲಾ ಸಾಮಾನ್ಯ ಸೇವಾಕೇಂದ್ರದ ಸುಳ್ಯ ತಾಲೂಕು ಸಭೆ


. . . . . . . . .

. . . . . . .

ದಕ್ಷಿಣ ಕನ್ನಡ ಜಿಲ್ಲಾ ಸಾಮಾನ್ಯ ಸೇವಾಕೇಂದ್ರ (ವಿಎಲ್‌ಇ) ಸೊಸೈಟಿ ಇದರ ಸುಳ್ಯ ತಾಲೂಕು ಸಭೆ ಸೆ.೨೬ರಂದು ಸಿ.ಎ ಬ್ಯಾಂಕ್‌ನ ಸಭಾಭವನದಲ್ಲಿ ನಡೆಯಿತು. ಸಭಾ ಅಧ್ಯಕ್ಷತೆಯನ್ನು ಸಂಘದ ಜಿಲ್ಲಾಧ್ಯಕ್ಷ ರೋಹಿತ್ ಕುಮಾರ್ ವಹಿಸಿದ್ದರು. ಮಾಹಿತಿ ಕಾರ್ಯಗಾರವನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಜಿ ಎಸ್. ಅಬೂಬಕ್ಕರ್ ಆರ್ಲಪದವು ನೀಡಿದರು. ವೇದಿಕೆಯಲ್ಲಿ ಸಮಿತಿಯ ಜಿಲ್ಲಾ ಕಾರ್ಯಾಧ್ಯಕ್ಷ ಹೇಮಚಂದ್ರ, ಜಿಲ್ಲಾ ಉಪಾಧ್ಯಕ್ಷ ನವೀನ್ ಸುಳ್ಯ ಉಪಸ್ಥಿತರಿದ್ದರು. ಸಭೆಯಲ್ಲಿ ಸರಕಾರಗಳಿಂದ ಸಾರ್ವಜನಿಕರಿಗೆ ದೊರೆಯುವ ಸೇವಾ ಮಾಹಿತಿಯನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಯಾವ ರೀತಿ ಚಟುವಟಿಕೆಗಳನ್ನು ತಮ್ಮತಮ್ಮ ಸೇವಾ ಕೇಂದ್ರದಲ್ಲಿ ನಡೆಸಬೇಕು ಎಂಬುವುದರ ಬಗ್ಗೆ ಚರ್ಚೆ ನಡೆಯಿತು. ವಿವಿಧ ಸಂಘ ಸಂಸ್ಥೆಗಳು ಆಯೋಜಿಸುವ ಶಿಬಿರಗಳಲ್ಲಿ ಅನಧಿಕೃತ ಸಂಸ್ಥೆಗಳನ್ನು ತಡೆಯುವ ಉದ್ದೇಶದಿಂದ ನೋಂದಾಯಿತ ಸೇವಾ ಕೇಂದ್ರದ ಸದಸ್ಯರುಗಳಿಗೆ ಖಾಯಂ ಗುರುತಿನ ಚೀಟಿ ನೀಡುವ ಕುರಿತು ಮುಂದಿನ ದಿನದಲ್ಲಿ ಜಿಲ್ಲಾ ಮಟ್ಟದ ಸಮಾವೇಶ ನಡೆಸುವ ಕುರಿತು ಚರ್ಚೆಗಳು ನಡೆದವು. ಸುಳ್ಯ ತಾಲೂಕಿನ ವಿವಿಧ ಗ್ರಾಮಗಳ ಮಾಹಿತಿಯನ್ನು ಹಳೆಗೇಟು ಡೋಝಾರ್ ಟೆಕ್ನಿಕಲ್ ಸೊಲಿಶನ್ ಇದರ ಮಾಲಕ ಇತ್‌ಬಾನ್‌ರವರು ನೀಡಿದರು.
 ಈ ಸಭೆಯಲ್ಲಿ ಸುಳ್ಯ ತಾಲೂಕಿನ ವಿವಿಧ ಸಾಮಾನ್ಯ ಸೇವಾ ಕೇಂದ್ರಗಳ ಮಾಲಕರುಗಳು ಹಾಗೂ ತಾಲೂಕಿನ ವಿವಿಧ ಗ್ರಾಮಗಳ ವಿ.ಎಗಳು ಭಾಗವಹಿಸಿದ್ದರು. ಸುಳ್ಯ ನಗರದ ಸೇವಾ ಕೇಂದ್ರದ ರಶೀದ್ ಜಟ್ಟಿಪಳ್ಳ, ಭವಾನಿಶಂಕರ್ ಕಲ್ಮಡ್ಕ ಮೊದಲಾದವರು ಉಪಸ್ಥಿತರಿದ್ದರು.  


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading