ಕೂತ್ಕುಂಜ ಗ್ರಾಮದ ಹೆಬ್ಬಾರಹಿತ್ಲು ಕಾಲೋನಿಯಲ್ಲಿ ಸುಮಾರು 20 ದಲಿತ ಕುಟುಂಬಗಳು ತಮ್ಮ ಮನೆಗಳ ಸಂಪರ್ಕಕ್ಕೆ ಯೋಗ್ಯವಾದ ರಸ್ತೆ ಇಲ್ಲದಿರುವ ಬಗ್ಗೆ ಕೂತ್ಕುಂಜ ಗ್ರಾಮ ಸಮಿತಿ ಸುಳ್ಯ ತಾಲೂಕು ದಲಿತ್ ಸೇವಾ ಸಮಿತಿಯ ಗಮನಕ್ಕೆ ತಂದರು.ಈ ಹಿನ್ನೆಲೆಯಲ್ಲಿ ಸದ್ರಿ ರಸ್ತೆಯನ್ನು ತಾಲೂಕು ಸಮಿತಿಯ ಅಧ್ಯಕ್ಷರ ವಸಂತ ಕುದ್ಪಾಜೆ , ಸಂಚಾಲಕ ನಾರಾಯಣ ತೋಡಿಕಾನ, ಉಪಾಧ್ಯಕ್ಷ ಕುಮಾರ ಬಳ್ಳಕ್ಕ ರವರ ನೇತೃತ್ವದಲ್ಲಿ ಹೆಬ್ಬಾರಹಿತ್ಲು ಕಾಲೋನಿ ನಿವಾಸಿಗಳ ಸಮ್ಮುಖದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪಂಜ. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಕಾರ್ಯನಿರ್ವಾಹಣಧಿಕಾರಿ ತಾಲೂಕು ಪಂಚಾಯತ್ ಸುಳ್ಯ ಆಡಳಿತ ಅಧಿಕಾರಿಗಳು ಗ್ರಾಮ ಪಂಚಾಯತ್ ಪಂಜ ಇವರಿಗೆ ಮನವಿ ಸಲ್ಲಿಸಿದರು. ಮನವಿಯಲ್ಲಿ ತೀರಹದಗೆಟ್ಟ ಮಣ್ಣಿನ ರಸ್ತೆಯನ್ನು ಕಾಂಕ್ರೀಟ್ ರಸ್ತೆಯನಾಗಿ ಅಭಿವೃದ್ಧಿ ಪಡಿಸಲು ಒತ್ತಾಯಿಸಲಾಗಿದೆ.
ಮುಂದಿನ ಗ್ರಾಮ ಪಂಚಾಯತ್ ಚುನಾವಣೆಗೆ ಮೊದಲು ಈ ರಸ್ತೆ ಕಾಮಗಾರಿ ಮಾಡದಿದ್ದರೆ ಮುಂದೆ ಚುನಾವಣೆ ಬಹಿಷ್ಕರಿಸಲು ಗ್ರಾಮ ಸಮಿತಿ ತಿಮಾ೯ನಿಸಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕೂತ್ಕುಂಜ ಗ್ರಾಮ ಸಮಿತಿಯ ಕಾರ್ಯದರ್ಶಿ ಪುಷ್ಪವಾತಿ ಹಾಗೂ ಹೆಬ್ಬಾರಹಿತ್ಲು ಕಾಲೋನಿ ನಿವಾಸಿ ಉಪಸ್ಥಿತರಿದ್ದದರು.
- Friday
- November 1st, 2024