ಕೇಂದ್ರ ಸರಕಾರ ಜಾರಿಗೆ ತಂದ ರೈತ ಮಸೂದೆ ತಿದ್ದುಪಡಿಯನ್ನು ವಿರೋಧಿಸಿ ಸೋಷಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ಸುಳ್ಯ ನಗರ ಸಮಿತಿಯ ವತಿಯಿಂದ ಸುಳ್ಯ ತಾಲೂಕು ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನಾ ಸಭೆಯನ್ನು ನಡೆಸಲಾಯಿತು.
ಸುಳ್ಯ ವಿಧಾನ ಸಭಾ ಕ್ಷೇತ್ರದ ಎಸ್.ಡಿ.ಪಿ.ಐ ಅಧ್ಯಕ್ಷ ಅಬ್ದುಲ್ ಕಲಾಂ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಎಸ್‌ಡಿಪಿಐ ಮುಖಂಡ ಶಾಫಿ ಬೆಳ್ಳಾರೆ ಮುಖ್ಯ ಭಾಷಣಕಾರರಾಗಿ ಮಾತನಾಡಿ ಕೇಂದ್ರ ಸರಕಾರವು ಬಂಡವಾಳಶಾಹಿಗಳನ್ನು ಬೆಳೆಸುವ ಉದ್ದೇಶದಿಂದ ನಮ್ಮ ದೇಶದ ಬೆನ್ನೆಲುಬಾಗಿರುವ ರೈತರ ಕೃಷಿ ಮಸೂದೆಗಳನ್ನು ತಿದ್ದುಪಡಿ ಮಾಡುವ ಮೂಲಕ ದೇಶವನ್ನೇ ಹದಪತನದತ್ತ ಕೊಂಡೋಯ್ಯುತ್ತಿದ್ದಾರೆ. ಬಂಡವಾಳಶಾಹಿ ಮತ್ತು ಸರಕಾರದ ನಡುವೆ ಅಪವಿತ್ರ ಮೈತ್ರಿಯನ್ನು ಮಾಡಿಕೊಂಡು ದೇಶದ ಜನತೆಯನ್ನು ಬಂಡವಾಳಶಾಹಿಯವರ ಗುಲಾಮರನ್ನಾಗಿ ಮಾಡಿಸುತ್ತೀದೆ. ರೈತರು ಈಗಾಗಲೇ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸರಕಾರಗಳು ರೈತರ ಅಭಿವೃದ್ಧಿ ಕಡೆ ಯೋಚಿಸದೇ ಅವರನ್ನು ಇನ್ನು ಅಧಿಕ ಸಂಕಷ್ಟಕ್ಕೆ ತಳ್ಳಲು ಮುಂದಾಗಿರುವುದು ದೇಶದ ದುರಂತವೇ ಸರಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರ ಸಮಿತಿಯ ಅಧ್ಯಕ್ಷ ಇಕ್ಬಾಲ್ ಸುಳ್ಯ, ಪಿಎಫ್‌ಐ ಸುಳ್ಯ ಡಿವಿಜನ್ ಅಧ್ಯಕ್ಷ ಪೈಝಲ್ ಬೆಳ್ಳಾರೆ, ಎಸ್‌ಡಿಪಿಐ ಅಟೋ ಚಾಲಕರ ಸಂಘದ ಅಧ್ಯಕ್ಷ ಶಾಫಿ ಎಂ.ಆರ್, ಕ್ಯಾಂಪಸ್ ಫ್ರೆಂಟ್ ಸುಳ್ಯ ತಾಲೂಕು ಅಧ್ಯಕ್ಷ ಹರ್ಷಿದ್, ಸುಳ್ಯ ಡಿವಿಜನ್ ಅಧ್ಯಕ್ಷ ಫೈಝಲ್ ಬೆಳ್ಳಾರೆ, ಜಾಲ್ಸೂರು ವಿಭಾಗದ ಅಧ್ಯಕ್ಷ ಹಬೀದ್ ಪೈಚಾರ್ ಹಾಗೂ ಸಂಘಟನೆಯ ಸದಸ್ಯರುಗಳು ಉಪಸ್ಥಿತರಿದ್ದರು. ಸಮಿತಿಯ ಪ್ರ.ಕಾರ್ಯದರ್ಶಿ ಮುಸ್ತಾಫ ಎಂ.ಕೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಅಬ್ದುಲ್ ಕಲಾಂ ವಂದಿಸಿ, ಕಾಯಿದೆ ತಿದ್ದುಪಡಿಯ ವಿರೋಧಿಸಿ ರೈತ ಮತ್ತು ದೇಶದ ಹಿತಕ್ಕಾಗಿ ಮಸೂದೆ ತಿದ್ದುಪಡಿಯನ್ನು ಸರಿಪಡಿಸಬೇಕೆಂದು ಆಗ್ರಹಿಸಿ ಸುಳ್ಯ ತಹಶೀಲ್ದಾರ್ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಮನವಿಯನ್ನು ಸಲ್ಲಿಸಲಾಯಿತು.
- Saturday
- November 23rd, 2024