ಸುಳ್ಯದ ಕೆವಿಜಿ ಅಮರಜ್ಯೋತಿ ಪಿಯು ಕಾಲೇಜಿನಲ್ಲಿ “ಮಾದಕ ವಸ್ತು ವಿರೋಧಿ ಜಾಗೃತಿ ಕಾರ್ಯಕ್ರಮ”

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಡಿಯಲ್ಲಿ ಮಾದಕ ವಸ್ತು ವಿರೋಧಿ ದಿನಾಚರಣೆಯ ಪ್ರಯುಕ್ತ ರಾಜ್ಯದಾದ್ಯಂತ ಆನ್ಲೈನ್ ಜಾಗೃತಿ ಕಾರ್ಯಕ್ರಮದ ಪ್ರಯುಕ್ತ ಸುಳ್ಯದ ಕೆವಿಜಿ ಅಮರಜ್ಯೋತಿ ಪಿಯು ಕಾಲೇಜಿನಲ್ಲಿ ಮಾದಕ ವಸ್ತು ವಿರೋಧಿ ಜಾಗೃತಿ ಕಾರ್ಯಕ್ರಮ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದ ಪೂಜ್ಯ ವೀರೇಂದ್ರ ಹೆಗ್ಗಡೆಯವರು “ಜನಜಾಗೃತಿ ಮೂಲಕ ಏಕಕಾಲದಲ್ಲಿ ಲಕ್ಷಾಂತರ ಮಕ್ಕಳಿಗೆ ಜಾಗೃತಿ ಮೂಡಿಸುವಂತಹ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡು ಉತ್ತಮ ಪ್ರಜೆಗಳಾಗಿ ಬಾಳಬೇಕು” ಎಂದರು. ತಾಲ್ಲೂಕು ಜನಜಾಗೃತಿ ಅಧ್ಯಕ್ಷರಾದ ವೆಂಕಪ್ಪ ಗೌಡ ರವರು “ಮಾದಕ ವಸ್ತು ವಸ್ತು ಸೇವನೆಯಿಂದ ಅಪರಾಧಗಳೇ ಹೆಚ್ಚಾಗುತ್ತಿದೆ, ಮಾದಕ ವಸ್ತು ಸೇವನೆ ಮಾಡುವವರು ಅವರ ಮನಸ್ಸು, ದೇಹ ಅವರ ಸ್ಥಿಮಿತದಲ್ಲಿ ಇರುವುದಿಲ್ಲ ಯಾರು ಕೂಡ ಮಾದಕವಸ್ತು ಸೇವನೆ ಮಾಡಬಾರದು, ದುಶ್ಚಾಟ ಮುಕ್ತ ಜೀವನ ಮಾಡಬೇಕು” ಎಂದರು. ಪ್ರಾಂಶುಪಾಲರಾದ ಡಾ.ಯಶೋಧ ರಾಮಚಂದ್ರ ರವರು “ವಿದ್ಯಾರ್ಥಿಗಳಿಗೆ ಈ ಮಾಹಿತಿ ಉಪಯುಕ್ತ ವಾಗಬಹುದು” ಎಂದರು. 

. . . . . . . . .

ಕಾರ್ಯಕ್ರಮದಲ್ಲಿ ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕ, ಜನಜಾಗೃತಿ ನಿಕಟ ಪೂರ್ವ ಅಧ್ಯಕ್ಷರಾದ ಲೋಕನಾಥ ಆಮೆಚೂರು, ಸುಳ್ಯ ವಲಯ ಜನಜಾಗೃತಿ ಅಧ್ಯಕ್ಷರಾದ ವಿಜಯ ಕುಮಾರ್ ಉಬರಡ್ಕ, ಜನಜಾಗೃತಿ ಸದಸ್ಯರಾದ ಬೂಡು ರಾಧಾಕೃಷ್ಣ ರೈ, ಜಿನ್ನಪ್ಪ ಪೂಜಾರಿ ಸುಳ್ಯ ಭಾಗವಹಿಸಿದ್ದರು. ಉಪ ಪ್ರಾಂಶುಪಾಲರಾದ ದೀಪಕ್.ವೈ.ಆರ್ ಸ್ವಾಗತಿಸಿ ಮೇಲ್ವಿಚಾರಕರಾದ ದಿನೇಶ್.ಡಿ ವಂದಿಸಿದರು, ಶಿಕ್ಷಕಿ ಮಲ್ಲಿಕಾ ರವರು ಕಾರ್ಯಕ್ರಮ ನಿರೂಪಿಸಿದರು ಸೇವಾಪ್ರತಿನಿಧಿ ಸೌಜನ್ಯ, ಕಾಲೇಜಿನ 233 ವಿದ್ಯಾರ್ಥಿಗಳು ಮಾಹಿತಿ ಪಡೆದು ಕೊಂಡರು. ಆನ್ಲೈನ್ ಕಾರ್ಯಕ್ರಮದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು “ದುಶ್ಚಟ ಮುಕ್ತ ಜೀವನ ನಡೆಸಿ” ಎಂದು ಶುಭ ಹಾರೈಸಿದರು. ಹೇಮಾವತಿ.ವಿ ಹೆಗ್ಗಡೆಯವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಡಾ.ವೆಂಕಟೇಶ್ ಪ್ರಸನ್ನ ಎಸ್.ಪಿ ಬೆಂಗಳೂರು ಹಾಗೂ ಡಾ. ದೇವಿಪ್ರಸಾದ್ ಶೆಟ್ಟಿ ಖ್ಯಾತ ಹೃದ್ರೋಗ ತಜ್ಞರು ಮಾಹಿತಿ ಮಾರ್ಗದರ್ಶನ ನೀಡಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading