Ad Widget

ಮಾ.14 – 15: ಪೈಚಾರು – ಶಾಂತಿನಗರ ಶ್ರೀ ಮುತ್ತಪ್ಪ – ತಿರುವಪ್ಪ ದೈವಸ್ಥಾ‌ನದಲ್ಲಿ ಕಾಲಾವಧಿ ನೇಮೋತ್ಸವ

. . . . . . . . .

ಪೈಚಾರು – ಶಾಂತಿನಗರದ ಶ್ರೀ ಮುತ್ತಪ್ಪ – ತಿರುವಪ್ಪ ದೈವಸ್ಥಾನದಲ್ಲಿ ಶ್ರೀ ಮುತ್ತಪ್ಪ – ತಿರುವಪ್ಪ ದೈವಗಳ ಕಾಲಾವಧಿ ನೇಮೋತ್ಸವವು ಮಾ.14 ಮತ್ತು 15ರಂದು ಜರುಗಲಿದೆ.

. . . . . . .

ಮಾ.14ರಂದು ಬೆಳಿಗ್ಗೆ ಗಣಪತಿ ಹವನ, ಭಜನೆ, ಸಂಜೆ ಶ್ರೀ ದೈವದ ಪೈಂಗುತ್ತಿ ಹಾಗೂ ಮುತ್ತಪ್ಪ ದೈವದ ಮಲೆಯರ್ಕಲ್, ಸಂಜೆ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ‌
ರಾತ್ರಿ ಶ್ರೀ ಮುತ್ತಪ್ಪ ದೈವದ ನೇಮ (ಬೆಳ್ಳಾಟಂ), ಅನ್ನಸಂತರ್ಪಣೆ, ರಾತ್ರಿ ಕಳಿಕಪಾಟ್, ಕಳಸ ಶೃಂಗಾರ, ರುಮಾಲು ಕಟ್ಟುವುದು ನಡೆಯಲಿದೆ.
ಮಾ.15ರಂದು ಬೆಳಿಗ್ಗೆ ಶ್ರೀ ಮುತ್ತಪ್ಪ – ತಿರುವಪ್ಪ ದೈವಗಳ ನೇಮೋತ್ಸವ, ಮಧ್ಯಾಹ್ನ ಮಲೆಕೇಟಲ್, ಅನ್ನಸಂತರ್ಪಣೆ ನಡೆಯಲಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading