Ad Widget

ಮಂಡೆಕೋಲು ಗ್ರಂಥಾಲಯದಲ್ಲಿ ಪ್ರತಿಭಾ ಅನಾವರಣ ಹಾಗೂ ಸನ್ಮಾನ ಕಾರ್ಯಕ್ರಮ

ಮಂಡೆಕೋಲು ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಕಳೆದ ಆರು ತಿಂಗಳಿನಿಂದ ಗ್ರಾಮೀಣ ಕನ್ನಡ ಮಾಧ್ಯಮ ಶಾಲಾ ಮಕ್ಕಳಿಗೆ ಉಚಿತ ಸ್ಪೋಕನ್ ಇಂಗ್ಲಿಷ್ ಹಾಗೂ ಕಮ್ಯುನಿಕೇಷನ್ ಸ್ಕಿಲ್ ತರಗತಿ ನಡೆಸಿಕೊಂಡು ಬರುತ್ತಿದ್ದು, ಈ ವಾರ್ಷಿಕ ಅವಧಿಯ ಕೊನೆಯ ಹಿನ್ನೆಲೆಯಲ್ಲಿ ತರಗತಿಗೆ ಬರುತ್ತಿದ್ದ ಮಕ್ಕಳ ಪ್ರತಿಭಾ ಅನಾವರಣ ಕಾರ್ಯಕ್ರಮ ನಡೆಯಿತು. 

. . . . . . . . .

     ಕಾರ್ಯಕ್ರಮದ ಉಧ್ಘಾಟನೆಯನ್ನು ನಿವೃತ್ತ ಯೋಧ ಹರಿಶ್ಚಂದ್ರ‌ ಬೊಳುಗಲ್ಲು ನೆರವೇರಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಂಥಾಲಯ ಸಮಿತಿ ಸದಸ್ಯರೂ ಮಂಡೆಕೋಲು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸುರೇಶ್‌ ಕಣೆಮರಡ್ಕ ವಹಿಸಿದ್ದರು. ವೇಧಿಕೆಯಲ್ಲಿ ಸ್ಪೋಕನ್ ಇಂಗ್ಲಿಷ್ ಶಿಕ್ಷಕಿ ಹಾಗೂ ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಿರ್ದೇಶಕರಾದ ಗೀತಾಂಜಲಿ ಬಿ.ಎಸ್, ಮಂಡೆಕೋಲು ಶಾಲಾ ಆಂಗ್ಲ ಭಾಷಾ ಶಿಕ್ಷಕರಾದ ರಮೇಶ್, ಮಾಜಿ ಗ್ರಾ.ಪಂ ಉಪಾಧ್ಯಕ್ಷರಾದ ಅನಿಲ್ ತೋಟಪ್ಪಾಡಿ, ಗ್ರಂಥಾಲಯ ಮೇಲ್ವಿಚಾರಕಿ ಸಾವಿತ್ರಿ ಕಣೆಮರಡ್ಕ ಉಪಸ್ಥಿತರಿದ್ದರು. 

. . . . . . .

   ಈ ಸಂದರ್ಭದಲ್ಲಿ ಮಕ್ಕಳಿಗೆ ಪ್ರತೀ ವಾರ ಉಚಿತ ಆಂಗ್ಲ ಭಾಷಾ ಸಂವಹನ ಶಿಕ್ಷಣ ನೀಡುತ್ತಿರುವ ಗೀತಾಂಜಲಿ ಬಿ.ಎಸ್‌ ರವರನ್ನು ಸನ್ಮಾನಿಸಲಾಯಿತು.

   ಪೂರ್ತಿ ಕಾರ್ಯಕ್ರಮದ ನಿರ್ವಹಣೆ, ನಿರೂಪಣೆ ಎಲ್ಲವನ್ನೂ ಮಕ್ಕಳೇ ಆಂಗ್ಲ ಭಾಷೆಯಲ್ಲಿ ನಿರ್ವಹಿಸಿದ್ದು ವಿಶೇಷವಾಗಿತ್ತು. ಸಭಾ ಕಾರ್ಯಕ್ರಮದ ಬಳಿಕ ಮಕ್ಕಳಿಂದ ವಿವಿಧ ಪ್ರತಿಭಾ ಪ್ರದರ್ಶನ ನಡೆಯಿತು. 

  ಮಾ.ವರುಣ್ ಸ್ವಾಗತಿಸಿ ಮಾ.ಮನ್ವಿತ್ ವಂದನಾರ್ಪಣೆ ಗೈದರು. ಕು.ಶ್ರದ್ಧಾ ಹಾಗೂ ಮಾ.ತನ್ವಿತ್ ರೈ ಅನಿಸಿಕೆ ವ್ಯಕ್ತ ಪಡಿಸಿದರು. ಕು.ವೃಶಾಲಿ ಕೆ.ಎಸ್ ಕಾರ್ಯಕ್ರಮ ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading