Ad Widget

ಅಜ್ಜಾವರ ಮೆನಾಲ ಜಮಾತ್ ವತಿಯಿಂದ ಮಂಜುನಾಥ ರೈ ಬೆಲ್ಯ ಅವರಿಗೆ ಸನ್ಮಾನ

ಅಜ್ಜಾವರ ಮೇನಾಲ ಜಮಾತ್ ವತಿಯಿಂದ ದಿನಾಂಕ ದಿನಾಂಕ 26ನೇ ಸೋಮವಾರ ಸಂಜೆ ಮೇನಲದ ವಲಿಯುಲ್ಲಾಹಿ ದುರ್ಗಾ ಶರೀಫ್ ಇದರ ಅಂಕಣದಲ್ಲಿ ಮಂಜುನಾಥ ರೈ ಬೇಲ್ಯ ಇವರನ್ನು ಸನ್ಮಾನಿಸಲಾಯಿತು.

. . . . . . . . .

ಅಜ್ಜಾವರ ಮೇಲದ ಊರೂಸ್ ಸಂದರ್ಭದಲ್ಲಿ ವಿಶೇಷ ಸಹಾಯವನ್ನು ನೀಡುತ್ತಿದ್ದ, ನೀಡುತ್ತಿರುವ ಮಂಜುನಾಥ್ ಬೇಲ್ಯ ಅವರು ಇತ್ತೀಚೆಗೆ ರಂಜಾನ್ ಸಮಯದಲ್ಲಿ ಇಫ್ತಾರ್ ಕೂಟವನ್ನು ಏರ್ಪಡಿಸಿ ಸೌಹಾರ್ದತೆಯನ್ನು ಮೆರೆದಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಮಂಜುನಾಥ್ ರವರು “ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ನಾನು ಇಫ್ತಾರ್ ಕೂಟವನ್ನು ಏರ್ಪಡಿಸಿದ್ದೇನೆ. ಆದರೆ ನಾನು ಯಾವುದೇ ಸನ್ಮಾನವನ್ನು ಅಪೇಕ್ಷೆ ಮಾಡಿರಲಿಲ್ಲ. ಅವರು ನನಗೆ ಒಳ್ಳೆಯ ರೀತಿಯಲ್ಲಿ ಸನ್ಮಾನಿಸಿ ನನ್ನನ್ನು ಗೌರವಿಸಿದ್ದಾರೆ. ಅವರಿಗೆ ನಾನು ಕೂಡ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಮುಂದೆ ಇನ್ನಷ್ಟು ಒಳ್ಳೆಯ ರೀತಿಯಲ್ಲಿ ಕಾರ್ಯಕ್ರಮ ಮಾಡುವಲ್ಲಿ ಸಹಕಾರಿಗಳಾಗಲಿ ಎಂಬ ಆಶಯ ನನ್ನದು” ಎಂದು ಹೇಳಿದರು.

. . . . . . .

ಈ ಸಂದರ್ಭದಲ್ಲಿ ಸಂದರ್ಭದಲ್ಲಿ ಜಮಾತಿನ ಅಧ್ಯಕ್ಷರಾದ ರಜಾಕ್ ಪಳ್ಳಿಕೆರೆ, ಕಾರ್ಯದರ್ಶಿ ಸೌಕರ್ತಲಿ, ಉಸ್ತಾದ ಅಬ್ದುಲ್ ರಹಿಮಾನ್ ಹಾಗೂ ಇತರರು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading