Ad Widget

ಕೆ.ವಿ.ಜಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಕೆ.ವಿ.ಜಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್‌ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಾ.04 ರಂದು ನಡೆಯಿತು. ಎನ್‌ಎಂಸಿಯ ಆವರಣದ ಮೈದಾನದಲ್ಲಿ ಜುಂಬಾ(Zumba)ಶೋ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

. . . . . . . . .

ಬಳಿಕ ಸಭಾ ಕಾರ್ಯಕ್ರಮವು ಕೆ.ವಿ.ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ

. . . . . . .

ಸಭಾಂಗಣದಲ್ಲಿ ನೆರವೇರಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ.) ಸುಳ್ಯ ಅಧ್ಯಕ್ಷರು ಡಾ ಕೆ.ವಿ ಚಿದಾನಂದ ವಹಿಸಿ ಮಾತನಾಡುತ್ತಾ “ಮಹಿಳೆ ಕುಟುಂಬದಲ್ಲಿ ಅನೇಕ ಪಾತ್ರಗಳನ್ನು ಒಂದೇ ಸಮಯದಲ್ಲಿ ಯಶಸ್ವಿಯಾಗಿ ನಿರ್ವಹಿಸುತ್ತಾಳೆ. ಮನೆಯ ಆರ್ಥಿಕ ವ್ಯವಹಾರಗಳನ್ನು ಸಮರ್ಥವಾಗಿ ನೋಡಿಕೊಳ್ಳುವುದರಿಂದ ಹಿಡಿದು, ಮಕ್ಕಳ ಶಿಕ್ಷಣ, ಹಿರಿಯರ ಆರೈಕೆ ಹಾಗೂ ದೈನಂದಿನ ವ್ಯವಸ್ಥೆಯನ್ನು ನಿರ್ವಹಿಸುವವರೆಗೆ ಎಲ್ಲಾ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುತ್ತಾಳೆ. ಆದರೂ ಅವಳ ಪರಿಶ್ರಮ ಅನೇಕ ಬಾರಿ ಗಮನಿಸದೇ ಹೋಗುತ್ತದೆ. ಆದ್ದರಿಂದ ಮಹಿಳೆಯ ಕೊಡುಗೆಯನ್ನು ಗುರುತಿಸಿ ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ” ಎಂದರು.

 ಈ ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ.) ಸುಳ್ಯ ಕಾರ್ಯದರ್ಶಿ ಡಾ. ಐಶ್ವರ್ಯ ಕೆ.ಸಿ ಕಾರ್ಯಕ್ರಮದ ಧ್ಯೇಯೋದ್ದೇಶದ ಕುರಿತು ಮಾತನಾಡಿ “ಮಹಿಳೆ ಎಂದರೆ ಕೇವಲ ಒಂದು ಸಂಬಂಧವಲ್ಲ, ಆಕೆ ಶಕ್ತಿ, ಸಹನೆ ಮತ್ತು ಸಾಧನೆಯ ಪ್ರತೀಕ. 

ಇಂದಿನ ಕಾಲಘಟ್ಟದಲ್ಲಿ ಮಹಿಳೆಯರಿಗೆ ಫಿಟ್ನೆಸ್ ಮತ್ತು ಆರೋಗ್ಯ ಅತ್ಯಂತ ಮುಖ್ಯವಾಗಿದೆ. ಆರೋಗ್ಯವಾಗಿರುವ ಮಹಿಳೆ ಮಾತ್ರ ಕುಟುಂಬಕ್ಕೂ, ಸಮಾಜಕ್ಕೂ ಬಲವಾದ ಆಧಾರವಾಗಬಹುದು. ದೈನಂದಿನ ವ್ಯಾಯಾಮ, ಸಮತೋಲನ ಆಹಾರ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಅವಶ್ಯಕ. ನಮ್ಮ ದೇಹ ಮತ್ತು ಮನಸ್ಸನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ಮಹಿಳೆಯ ಮೊದಲ ಜವಾಬ್ದಾರಿ” ಎಂದರು.

ಬಳಿಕ ಅತಿಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿ ಹಾಗೂ ಭಾಷಣಕಾರರಾಗಿ ಟೋಸ್ಟ್ ಮಾಸ್ಟರ್ ಸುಮಿತ್ರಾ ಮನಮೋಹನ್ ಕುರುಂಜಿಯವರು ಬದುಕುವ ಕಲೆ ಹಾಗೂ ಪರಿಣಾಮಕಾರಿ ಸಂವಹನ ಕುರಿತು ಉಪಯುಕ್ತ ಮಾರ್ಗದರ್ಶನ ನೀಡಿದರು. ಬಳಿಕ ಅಡ್ಯನಡ್ಕ ವಾರಣಾಸಿ ಫಾರ್ಮ್ ಮಾಲೀಕರು ಹಾಗೂ ಅಡ್ಯನಡ್ಕ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಡಾ. ಅಶ್ವಿನಿ ಕೃಷ್ಣಮೂರ್ತಿ ಭಾಗವಹಿಸಿ 

ಕೃಷಿ ಪದ್ಧತಿಯಲ್ಲಿ ಸಾವಯವ ಗೊಬ್ಬರದ ಬಳಕೆ ಹಾಗೂ ಅರೋಗ್ಯವಂತರಾಗಲು ಸಾವಯವ ಕೃಷಿಯ ಅಗತ್ಯತೆ ಕುರಿತು ಮಹತ್ವದ ಮಾಹಿತಿಯನ್ನು ಹಂಚಿಕೊಂಡರು.

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ.) ಸುಳ್ಯ ಉಪಾಧ್ಯಕ್ಷರು ಶೋಭಾ ಚಿದಾನಂದ ಹಾಗೂ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ ಉಪಸ್ಥಿತರಿದ್ದು ಶುಭ ಹಾರೈಸಿದರು. 

ವೇದಿಕೆಯಲ್ಲಿ ಕೆ.ವಿ.ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ ನೀಲಾಂಬಿಕೈ ನಟರಾಜನ್, ನೆಹರೂ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲರು ಡಾ ರುದ್ರ ಕುಮಾರ್ ಎಂ.ಎಂ ಹಾಗೂ ಎನ್.ಎಂ.ಪಿ.ಯು.ಸಿ ಹಾಗೂ ಮಹಿಳಾ ದಿನಾಚರಣೆ ಕಾರ್ಯಕ್ರಮದ ಕಾರ್ಯದರ್ಶಿ ಪ್ರಾಂಶುಪಾಲರು ಮಿಥಾಲಿ ಪಿ ರೈ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನೆಹರೂ ಮೆಮೋರಿಯಲ್ ಕಾಲೇಜಿನ ಉಪನ್ಯಾಸಕರಾದ ಕೃತಿಕಾ ಜೆ ಆಶಯ ಗೀತೆ ಹಾಡಿದರು. ಮಿಥಾಲಿ.ಪಿ ರೈ ಸ್ವಾಗತಿಸಿದರು. ಡಾ ಅಪೂರ್ವ ದೊರೆ ಸ್ವಸ್ತಶ್ರೀ ವರದಿ ವಾಚಿಸಿದರು. ಡಾ ಬೀನ ರಾಣಿ ಹಾಗೂ ಸವಿತಾ.ಎ.ಡಿ ಅತಿಥಿ ಪರಿಚಯ ವಾಚಿಸಿದರು. ಡಾ ರುದ್ರಕುಮಾರ್ ಎಂ.ಎಂ ವಂದಿಸಿದರು. ಉಪನ್ಯಾಸಕಿ ಬೇಬಿ ವಿದ್ಯಾ ಪಿ.ಬಿ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವೈವಿದ್ಯಮಯ ಖಾದ್ಯಗಳ ಸ್ಟಾಲ್ ಉದ್ಘಾಟಿಸಲಾಯಿತು. 

ಕಾರ್ಯಕ್ರಮದಲ್ಲಿ ಸಮೂಹ ಸಂಸ್ಥೆಗಳ ಪ್ರಾಂಶುಪಾಲರು, ವಿಭಾಗ ಮುಖ್ಯಸ್ಥರು ಪ್ರಾದ್ಯಾಪಕರು, ಬೋಧಕ ಬೋಧಕೇತರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading