Ad Widget

ಜೇ.ಸಿ.ಐ ಸುಳ್ಯ ಪಯಸ್ವಿನಿಗೆ ವಲಯ ಉಪಾಧ್ಯಕ್ಷರ ಅಧೀಕೃತ ಭೇಟಿ

ಜೇ‌.ಸಿ.ಐ ಭಾರತದ ಸಂವಿಧಾನ ಬದಲಾವಣೆಯಂತೆ ವಲಯ ಉಪಾಧ್ಯಕ್ಷರು ನಿಯೋಜಿತ ಘಟಕಕ್ಕೆ ಅಧೀಕೃತ ಭೇಟಿ ನೀಡಿ ಆಡಳಿತ ತರಬೇತಿ ಕಾರ್ಯಗಾರವನ್ನು ನಡೆಸಿಕೊಡಬೇಕಾಗಿರುವುದರಿಂದ, ಜೆಸಿಐ ಸುಳ್ಯ ಪಯಸ್ವಿನಿ ಘಟಕಕ್ಕೆ ವಲಯ ಉಪಾಧ್ಯಕ್ಷ ರಾದ ಜೇ.ಸಿ ಸೆನೆಟರ್ ಜಿತೇಶ್ ಪಿರೇರಾ ತಮ್ಮ ಅಧೀಕೃತ ಭೇಟಿಯನ್ನು ಫೆಬ್ರವರಿ 22ರಂದು ಮಾಡಿದರು. ವಲಯ ಉಪಾಧ್ಯಕ್ಷರ ಅಧೀಕೃತ ಬೇಟಿ ಕಾರ್ಯಕ್ರಮವನ್ನು ಸುಳ್ಯದ 

. . . . . . . . .

ಕಾನತ್ತಿಲ ದೇವಮ್ಮ ಕಾಂಪ್ಲೆಕ್ಸ್ ನಲ್ಲಿ ಆಯೋಜಿಸಿದ್ದು, ಈ ಸಂದರ್ಭದಲ್ಲಿ ಘಟಕದ ಸಾಮಾನ್ಯ ಸಭೆಯನ್ನು ಜೇಸಿ ಲತಾಶ್ರೀ ಸುಪ್ರೀತ್ ಮೊಂಟಡ್ಕ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ವೇದಿಕೆಯಲ್ಲಿ ನಿಕಟಪೂರ್ವಾಧ್ಯಕ್ಷರಾದ ಜೆ.ಎಫ್.ಎಮ್ ಸುರೇಶ್ ಕಾಮತ್, ವಲಯ ಉಪಾಧ್ಯಕ್ಷರಾದ ಜೇ.ಸಿ.ಐ ಸೆನೆಟರ್ ಜಿತೇಶ್ ಪಿರೇರಾ, ಮುಖ್ಯ ಅತಿಥಿಗಳಾಗಿ ಪಯಸ್ವಿನಿ ಸೀನಿಯರ್ ಛೆಂಬರ್ ಇಂಟರ್ ನ್ಯಾಶನಲ್ ಇದರ ಅಧ್ಯಕ್ಷರಾದ ಜೇಸಿ. ಹೆಚ್.ಜಿ.ಎಫ್ ಜಯಪ್ರಕಾಶ್ ಕೆ, ಕಾರ್ಯದರ್ಶಿ ಜೇಸಿ. ತಾರ ಮಾಧವ ಚೂoತಾರು ಉಪಸ್ಥಿತರಿದ್ದರು. ಸಾಮಾನ್ಯ ಸಭೆಯಲ್ಲಿ ಘಟಕದಲ್ಲಿ ಕೈಗೊಂಡ ನಿರ್ಣಯಗಳು ಹಾಗೂ ಘಟಕದ ಕಾರ್ಯಚಟುವಟಿಕೆಗಳನ್ನು ಕಾರ್ಯದರ್ಶಿಯವರು ಸಭೆಗೆ ಮಂಡಿಸಿದರು. ನಂತರ ಜೇಸಿ ಸೆನೇಟರ್ ಜಿತೇಶ್ ಪಿರೇರಾ ಅವರು ತರಬೇತಿ ಕಾರ್ಯಗಾರವನ್ನು ನಡೆಸಿಕೊಟ್ಟರು. 

. . . . . . .

ಈ ಸಂದರ್ಭದಲ್ಲಿ ಪೂರ್ವ ವಲಯಾಧ್ಯಕ್ಷರಾದ ಪಿ.ಪಿ.ಪಿ ಅಶೋಕ್ ಚೂoತಾರ್, ಜೆಸಿ ದೇವರಾಜ್ ಕುದ್ಪಾಜೆ, ಜೆ.ಸಿ ಹೆಚ್.ಜಿ.ಎಫ್ ನವೀನ್ ಕುಮಾರ್, ಜೇಸಿ.ರವಿಕುಮಾರ್, ಶಂಕರ್ ಪೆರಾಜೆ, ರಂಜಿತ್ ಪೂಜಾರಿ, ಕೇಶವ, ಮಂಜುನಾಥ್, ಅಶೋಕ್ ಅಡ್ಕಾರ್, ಸುಪ್ರೀತ್ ಮೋಂಟಡ್ಕ ಮೊದಲದವರು ಉಪಸ್ಥಿತರಿದ್ದರು. ಜೇಸಿ ಶೋಭಾ ಅಶೋಕ್ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿ, ಜೇಸಿ.ಸುನಿತಾ ರವಿಕುಮಾರ್ ಜೇಸಿವಾಣಿ ವಾಚಿಸಿದರು. ಜೇಸಿ. ವಿನೋದ್ ಮೂಡಗದ್ದೆ ವಲಯ ಉಪಾಧ್ಯಕ್ಷನ್ನು ಸಭೆಗೆ ಪರಿಚಯಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading