Ad Widget

ಸುಬ್ರಹ್ಮಣ್ಯ ಅಗ್ರಹಾರದಲ್ಲಿ ಯೋಗ ಬಂಧುಗಳಿಂದ ಸ್ವಚ್ಛತಾ ಕಾರ್ಯಕ್ರಮ

ಸುಬ್ರಹ್ಮಣ್ಯ ಮಾರ್ಚ್ 1 : ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕೇಂದ್ರ ಕಚೇರಿ ತುಮಕೂರು, ನೇತ್ರಾವತಿ ವಲಯ ಮಂಗಳೂರು, ಸುಬ್ರಹ್ಮಣ್ಯ ಶಾಖಾ ವತಿಯಿಂದ ಮಾ.01 ರವಿವಾರ ಸುಬ್ರಹ್ಮಣ್ಯದ ಅಗ್ರಹಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಮುಂಭಾಗ ಹಾಗೂ ಸ್ನಾನಘಟ್ಟದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಶ್ರೀ ದೇವಳದ ಮುಂಭಾಗದ ಪರಿಸರದಲ್ಲಿ ಎಲ್ಲೆಡೆ ಕಸ ಕಡ್ಡಿ, ಪ್ಲಾಸ್ಟಿಕ್ ಚೀಲ, ಪ್ಲಾಸ್ಟಿಕ್ ಬಾಟಲ್, ಹಾಳೆ ತಟ್ಟೆಗಳು ಇದ್ದುದನ್ನು ತೆರವುಗೊಳಿಸಿ ಪರಿಸರವನ್ನು ಸುಚಿಗೊಳಿಸಲಾಯಿತು. ಸುಬ್ರಹ್ಮಣ್ಯ ಶಾಖೆಯ ಸಂಚಾಲಕ ಪ್ರಭಾಕರ ಹಾಗೂ ಯೋಗ ಬಂಧುಗಳಾದ ವಿಶ್ವನಾಥ ನಡುತೋಟ, ಬಸವರಾಜ ಟೋಂಬ್ಳೆ, ಜಯಶ್ರೀ, ಗಣೇಶ ಹಾಗೂ ಕಾರ್ತಿಕ್ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading