Ad Widget

ಲೇಖನ : ಬದುಕಿನಲ್ಲಿ ಗಳಿಸಿದ್ದು-ಉಳಿಸಿದ್ದು ; ✍️ಉಲ್ಲಾಸ್ ಕಜ್ಜೋಡಿ

“ನಾವು ಇನ್ನೊಬ್ಬರ ಮನಸ್ಸು ಅಥವಾ ಹೃದಯವನ್ನು ಪ್ರೀತಿ ಹಾಗೂ ಗೌರವದಿಂದ ಗೆಲ್ಲಬಹುದೇ ವಿನಃ ಸಿಟ್ಟು ಅಥವಾ ಕೋಪದಿಂದ ಎಂದಿಗೂ ಗೆಲ್ಲಲು ಸಾಧ್ಯವಿಲ್ಲ” ಎಂಬುವುದು ನಮಗೆಲ್ಲರಿಗೂ ತಿಳಿದಿರುವಂತಹ ವಿಚಾರ. ಆದರೂ ಕೂಡ ನಾವು ಕೆಲವೊಂದು ಸಂದರ್ಭಗಳಲ್ಲಿ ನಮ್ಮ ಕೆಲಸದ ಒತ್ತಡಗಳಿಂದಲೋ ಅಥವಾ ಬದುಕಿನ ಸಮಸ್ಯೆಗಳಿಂದಲೋ ನಮ್ಮೊಳಗೆ ಹುಟ್ಟುವ ಈ ಸಿಟ್ಟು ಅಥವಾ ಕೋಪವನ್ನು ಇತರರ ಮೇಲೆ ತೋರಿಸಿಬಿಡುತ್ತೇವೆ.ಯಾವುದೋ...

ಮಡಪ್ಪಾಡಿ : ಪುಷ್ಪಾವತಿ ತಳೂರು ನಿಧನ

ಮಡಪ್ಪಾಡಿ ಗ್ರಾಮದ ತಳೂರು ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಧರ್ಮಪಾಲ ರವರ ಧರ್ಮ ಪತ್ನಿ ಶ್ರೀಮತಿ ಪುಷ್ಪಾವತಿ ಯವರು ಅಲ್ಪಕಾಲದ ಅಸೌಖ್ಯದಿಂದ ಫೆ.11 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು. ಮೃತರು ಪತಿ, ಪುತ್ರರಾದ ಹರ್ಷಿತ್, ದೀಕ್ಷಿತ್, ಪುತ್ರಿ ದೀಕ್ಷಾ ಹಾಗೂ ಕುಟುಂಬಸ್ಥರು ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.
Ad Widget

ಬೊಳ್ಳಾಜೆ : ಅಂಗನವಾಡಿ ಮಕ್ಕಳಿಗೆ ಉಚಿತ ಸಮವಸ್ತ್ರ ಕೊಡುಗೆ

ಶ್ರೀ ಶಾಸ್ತಾವು ಯುವಕ ಮಂಡಲ ರೆಂಜಾಳ ಮರ್ಕಂಜ ಇದರ ವತಿಯಿಂದ ಬೊಳ್ಳಾಜೆ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಉಚಿತ ಸಮವಸ್ತ್ರವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ರಾಜೇಶ್ ಬೇರಿಕೆ ಹಾಗೂ ಪದ್ಮನಾಭ ನಿಡ್ಯಮಲೆ, ಸಂಜಿತ್ ಹೈದಂಗೂರ್,  ಶಾಲಾ ಶಿಕ್ಷಕಿ ಮತ್ತು ಸಹಾಯಕಿ ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.  ಶಾಲಾ ಶಿಕ್ಷಕಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಮೊಗರ್ಪಣೆ : ಕಾರು ಹಾಗೂ ಲಾರಿ ಅಪಘಾತ

ಮೊಗರ್ಪಣೆ ಮಸೀದಿ ಎದುರು ಕಾರು ಹಾಗೂ ಲಾರಿ ಮಧ್ಯೆ ಇದೀಗ ಅಪಘಾತ ನಡೆದಿದೆ. ಕೆಲ ಹೊತ್ತು ರಸ್ತೆ  ಬ್ಲಾಕ್ ಆಗಿದ್ದು, ಪೋಲೀಸರು ಸ್ಥಳಕ್ಕೆ ಆಗಮಿಸಿ ತೆರವುಗೊಳಿಸಿದರು. ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದು, ಕಾರಿನ ಮುಂಭಾಗ ಜಖಂಗೊಂಡಿದೆ.

ಶಿವರಾತ್ರಿಯಂದು “ಆಸರೆ ಉಳಿತಾಯ ಯೋಜನೆ”ಯ ಮೊದಲ ಉಚಿತ ಡ್ರಾ – ಇಂದೇ ತಮ್ಮ ಹೆಸರು ನೋಂದಾಯಿಸಿ

ಆಸರೆ ಇಲೆಕ್ಟ್ರಾನಿಕ್ಸ್ ಮತ್ತು ಹೋಂ ಅಪ್ಲಯನ್ಸ್ಸ್ ಗುತ್ತಿಗಾರು ಇಲ್ಲಿ ಪ್ರತೀ ವಾರಕ್ಕೆ ರೂ.200/- ರ ಪಾವತಿಯ ಹೊಸ "ಆಸರೆ ಉಳಿತಾಯ ಯೋಜನೆ" ಪ್ರಾರಂಭವಾಗಿದ್ದು, ಇದರ ಮೊದಲ ಉಚಿತ ಡ್ರಾ ಶಿವರಾತ್ರಿಯ ದಿನ‌ ನಡೆಯಲಿದೆ. ಬಹುಪಯೋಗಿ ಮೌಲ್ಯಯುತವಾದ ವಸ್ತುಗಳನ್ನು ಪ್ರತೀ ವಾರ ಗೆಲ್ಲುವ ಅವಕಾಶವಾಗಿದ್ದು, ಆಸಕ್ತರು ಈ ಕೂಡಲೇ ತಮ್ಮ ವಿಳಾಸದೊಂದಿಗೆ ಈ ನಂಬರ್‌ಗೆ 7975652508 ಸಂಪರ್ಕಿಸಿ...

ದೇವಚಳ್ಳ : ಗ್ರಾ.ಪಂ.ವತಿಯಿಂದ ದೇವ ಗೆಳೆಯರ ಬಳಗಕ್ಕೆ ಸನ್ಮಾನ

ದೇವಚಳ್ಳ ಗ್ರಾಮ ಪಂಚಾಯತ್ ವತಿಯಿಂದ ಫೆ.10 ರಂದು ನಡೆದ ಗ್ರಾಮ ಸಭೆಯಲ್ಲಿ ದೇವ ಗೆಳೆಯರ ಬಳಗವನ್ನು ಗುರುಸಿಸಿ ಸನ್ಮಾನಿಸಿದರು.  ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರ ಹಮ್ಮಿಕೊಳ್ಳುತ್ತಿರುವುದನ್ನು ಗುರುತಿಸಿ ಗ್ರಾ.ಪಂ.ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ಗೆಳೆಯರ ಬಳಗದ ಪದಾಧಿಕಾರಿಗಳನ್ನು ಗೌರವಿಸಿದರು.  ಈ ಸಂದರ್ಭದಲ್ಲಿ ಗೆಳೆಯರ ಬಳಗದ ಸ್ಥಾಪಕಾಧ್ಯಕ್ಷ ರಮೇಶ್ ಪಡ್ಪು, ಅಧ್ಯಕ್ಷ ಮುಕುಂದ ಹಿರಿಯಡ್ಕ, ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು...

ದೇವಚಳ್ಳ : ಕೊನೆಯ ಗ್ರಾಮಸಭೆ – ಬ್ಯಾನರ್ ವಿಚಾರದಲ್ಲಿ ಚರ್ಚೆ – ಗ್ರಾಮದ ಅಭಿವೃದ್ದಿಯಲ್ಲಿ ಸಹಕರಿಸಿದವರಿಗೆ ಗೌರವ- ಗ್ರಾಮಸ್ಥರಿಂದ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ಅವರಿಗೆ ಸನ್ಮಾನ

ದೇವಚಳ್ಳ ಗ್ರಾಮ ಪಂಚಾಯತ್ ನ 2025-26 ನೇ ಸಾಲಿನ 2 ನೇ ಹಂತದ ಗ್ರಾಮಸಭೆ ಹಾಗೂ ಪಂಚಾಯತ್ ನ ಈಗಿನ ಆಡಳಿತ ಮಂಡಳಿಯ ಕೊನೆಯ ಗ್ರಾಮಸಭೆ ಫೆ.10 ರಂದು ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ.ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ವಹಿಸಿದ್ದರು. ರಸ್ತೆ ಸಮಸ್ಯೆ - ಬ್ಯಾನರ್ ತೆಗೆದ ಬಗ್ಗೆ ಗ್ರಾಮಸ್ಥರಿಂದ ಚರ್ಚೆ ವಾಲ್ತಾಜೆಯಲ್ಲಿ ರಸ್ತೆ...

ದ್ವಾದಶ ರಾಶಿಗಳ ದಿನ ಭವಿಷ್ಯ

ದಿನಾಂಕ:11-02-2026 ಬುಧವಾರ 01,🐏ಮೇಷ ರಾಶಿ🐏📖,ದೂರದ ಪ್ರದೇಶದಲ್ಲಿರುವ ಆತ್ಮೀಯ ಸ್ನೇಹಿತರಿಂದ ಅಮೂಲ್ಯ ಮಾಹಿತಿ ದೊರೆಯುತ್ತದೆ. ಮನೆಯ ಹೊರಗೆ ನಿಮ್ಮ ಮಾತಿಗೆ ಮೌಲ್ಯ ಹೆಚ್ಚಾಗುತ್ತದೆ. ಮೌಲ್ಯದ ವಸ್ತು ಮತ್ತು ವಾಹನಗಳನ್ನು ಖರೀದಿಸಲಾಗುತ್ತದೆ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು,ಪರಿಹಾರ:- ಕುಲ ದೇವರ ಸ್ಮರಣೆ ಮಾಡಿ,02,🐂ವೃಷಭ ರಾಶಿ🐂📖,ಮಿತ್ರರ ಸಹಕಾರದಿಂದ ಕೆಲವು ಕಾರ್ಯಗಳು ಪೂರ್ಣಗೊಳ್ಳುತ್ತದೆ. ಇತರರ ವ್ಯವಹಾರಗಳಿಂದ ದೂರವಿರುವುದು ಉತ್ತಮ. ಸಾಲದ...

ಕುಕ್ಕೆ ಸುಬ್ರಹ್ಮಣ್ಯ : ಮಾ.03 ರಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದರುಶನ ಸಮಯದಲ್ಲಿ ವ್ಯತ್ಯಯ

ಸುಬ್ರಹ್ಮಣ್ಯ : ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾ.03 ಮಂಗಳವಾರದಂದು ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಶ್ರೀ ದೇವರ ದರುಶನ ಹಾಗೂ ಸೇವೆಗಳಲ್ಲಿ ವ್ಯತ್ಯಯ ಮಾಡಲಾಗಿದ್ದು, ಭಕ್ತರು ಸಹಕರಿಸಬೇಕಾಗಿ ಶ್ರೀ ದೇವಳದ ಆಡಳಿತ ಪ್ರಕಟಣೆಯಲ್ಲಿ ತಿಳಿಸಿದೆ. ಸರ್ಪಸಂಸ್ಕಾರ ಪ್ರಾರಂಭ ಇಲ್ಲ : ಮಾ.02 ಸೋಮವಾರ ಮತ್ತು ಮಾ.03 ಮಂಗಳವಾರದಂದು ಸರ್ಪಸಂಸ್ಕಾರ ಪೂಜೆ ಪ್ರಾರಂಭವಿರುವುದಿಲ್ಲ. ಮಾ.03ರಂದು ಯಾವುದೇ ಸೇವೆಗಳು...

ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಮಾಧವ ಗೌಡ ಜಾಕೆ ಪುನರಾಯ್ಕೆ

ಜಾತ್ಯಾತೀತ ಜನತಾದಳ ದ.ಕ ಜಿಲ್ಲಾಧ್ಯಕ್ಷರಾಗಿ ಜಾಕೆ ಮಾಧವ ಗೌಡರು ಪುನರಾಯ್ಕೆಗೊಂಡಿದ್ದು,ಜೆ.ಡಿ.ಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೆಗೌಡರು ಈ ನೇಮಕವನ್ನು ಮಾಡಿದ್ದಾರೆ.ಫೆ.07 ರಂದು ಬೆಂಗಳೂರಿನಲ್ಲಿ ನಡೆದ ಜೆ.ಡಿ.ಎಸ್ ಕಾರ್ಯಕಾರಿಣಿ ಸಭೆಯಲ್ಲಿ ನೇಮಕದ ಆದೇಶ ಪತ್ರವನ್ನು ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿಯವರು ಕೊಟ್ಟು ಶುಭಾಶಯ ಸಲ್ಲಿಸಿದರು‌.ಜಾಕೆ ಮಾಧವ ಗೌಡರು ಈ ಹಿಂದಿನ‌ ಅವಧಿಗೂ ಅಧ್ಯಕ್ಷರಾಗಿದ್ದರು.
Loading posts...

All posts loaded

No more posts

error: Content is protected !!