Ad Widget

ಸುಬ್ರಹ್ಮಣ್ಯ : ಕುಕ್ಕೆಶ್ರೀ ಆಟೋ ಚಾಲಕ-ಮ್ಹಾಲಕರ ಸಂಘದ ವತಿಯಿಂದ 15ನೇ ವರ್ಷದ ವಾರ್ಷಿಕೋತ್ಸವ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಕ್ಕೆಶ್ರೀ ಅಟೋ ಚಾಲಕ ಮ್ಹಾಲಕರ ಸಂಘದ ವತಿಯಿಂದ 15ನೇ ವರ್ಷದ ವಾರ್ಷಿಕೋತ್ಸವವನ್ನು ಫೆ.26 ರಂದು ಸಂಜೆ ಸವಾರಿ ಮಂಟಪದ ಬಳಿ ವಿಜೃಂಭಣೆಯಿಂದ ಆಚರಿಸಲಾಯಿತು.

. . . . . . . . .

ಕಾರ್ಯಕ್ರಮವನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಹರೀಶ್ ಇಂಜಾಡಿ ಅವರು ದೀಪಬೆಳಗಿಸಿ ಉದ್ಘಾಟಿಸಿದರು. ಸಂಘದ ಗೌರವಾಧ್ಯಕ್ಷರಾದ ಉಮೇಶ್ ಕೆ.ಎನ್ ಸಭಾಧ್ಯಕ್ಷತೆ ವಹಿಸಿ ಸಂಘದ 15 ವರ್ಷದ ಸೇವಾ ಪಯಣವನ್ನು ಸ್ಮರಿಸಿದರು.

. . . . . . .

ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಜಾತಾ ಕಲ್ಲಾಜೆ, ಸುಬ್ರಹ್ಮಣ್ಯ ಠಾಣಾಧಿಕಾರಿ ಆಂಜನೇಯ ರೆಡ್ಡಿ, ನ್ಯಾಯವಾದಿ ಎಂ.ವೆಂಕಪ್ಪ ಗೌಡ ಹಾಗೂ ಗೌರವ ಸದಸ್ಯ ಅಶೋಕ್ ನೆಕ್ರಾಜೆ ಭಾಗವಹಿಸಿ ಸಂಘದ ಸಮಾಜಮುಖಿ ಕಾರ್ಯಕ್ರಮಗಳನ್ನು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ಸೈನಿಕ ಶ್ರೀ ನವೀನ್ ಕುಮಾರ್ ಕೆ, ರಾಷ್ಟ್ರಮಟ್ಟದ ನೆಟ್‌ಬಾಲ್‌ನಲ್ಲಿ ಚಿನ್ನದ ಪದಕ ವಿಜೇತೆ ಕು.ತಪಸ್ಯ.ಎಸ್ ನಾಯಕ್, ರಾಷ್ಟ್ರಮಟ್ಟದ ವೈಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಭೆ ಗಣೇಶ್ ಕಕ್ಕೆಪದವು ಅವರನ್ನು ಸನ್ಮಾನಿಸಲಾಯಿತು.

ಎಸ್‌.ಎಸ್‌.ಎಲ್‌‌.ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಕು.ಅಕ್ಷರಿ ಆರ್.ಎಸ್, ಮಾ.ಭವಿಷ್ ಕುಮಾರ್.ಎಸ್ ಹಾಗೂ ರಿಕ್ಷಾ ಚಾಲಕರ ಪುತ್ರ ಮಾ.ಆತ್ಮಿಕ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಂಘದ “ಅಕ್ಷರ ನಿಧಿ” ಯೋಜನೆಯಡಿ ಸದಸ್ಯರಿಗೆ ಸಹಾಯಧನ ವಿತರಣೆ ಮಾಡಲಾಯಿತು. ಜೊತೆಗೆ ಸಂಘದ ವಾರ್ಷಿಕ ಕ್ರೀಡಾಕೂಟದ ಬಹುಮಾನಗಳನ್ನು ಶ್ರೀಮತಿ ಮಂಗಳ ಕಿಣಿ ವಿತರಿಸಿದರು.

ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಂಘದ ಸದಸ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading