Ad Widget

ನಕಲಿಯಾಗಿ ಸಹಾಯಕ ಸಂಚಾರ ನಿರೀಕ್ಷಕರ ಸಮವಸ್ತ್ರವನ್ನು ಧರಿಸಿ ಬಸ್ಸುಗಳ ಪರಿವೀಕ್ಷಣೆ – ಆರೋಪಿ ಖುಲಾಸೆ

ದಿನಾಂಕ 10-12-2012 ರಂದು ವಂಚಿಸಿ ಹಣಗಳಿಸುವ ಉದ್ದೇಶದಿಂದ ಕ.ರಾ.ರ.ಸಾ.ನಿ ಸಂಸ್ಥೆಯ ಸಹಾಯಕ ಸಂಚಾರ ನಿರೀಕ್ಷಕರ ನಕಲಿ ಸಮವಸ್ತ್ರವನ್ನು ಧರಿಸಿ ಸುಬ್ರಹ್ಮಣ್ಯ ಬಸ್ ನಿಲ್ದಾಣದಲ್ಲಿ ಕ.ರಾ.ರ.ಸಾ.ನಿ ಸಂಸ್ಥೆಯ ಸುಮಾರು 20 ಬಸ್ಸುಗಳನ್ನು ಕಾನೂನು ಬಾಹಿರವಾಗಿ ಚೆಕ್ ಮಾಡಿ ಕೆಲವು ನಿರ್ವಾಹಕರಿಂದ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪವನ್ನು ಎದುರಿಸುತ್ತಿದ್ದ ಆರೋಪಿ ರವಿಕುಮಾರ್ ಎಂಬಾತನನ್ನು ಸುಳ್ಯದ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯಾವರಾದ ಶಿವಣ್ಣ ಹೆಚ್ ಆರ್ ರವರು ದಿನಾಂಕ 25-02-2026 ರಂದು ಖುಲಾಸೆಗೊಳಿಸಿ ತೀರ್ಪು ನೀಡಿರುತ್ತಾರೆ.

. . . . . . . . .

ಅಂದಿನ ಸುಬ್ರಹ್ಮಣ್ಯ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಪಿ.ವೆಂಕಟ್ರಮಣ ಗೌಡ ಇವರು ಪ್ರಕರಣದ ತನಿಖೆ ನಡೆಸಿ ಆರೋಪಿ ರವಿಕುಮಾರ್ ನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. 19 ಸಾಕ್ಷಿದಾರರ ವಿಚಾರಣೆಯನ್ನು ನಡೆಸಿದ ಮಾನ್ಯ ನ್ಯಾಯಾಲಯವು ಆರೋಪಿ ರವಿಕುಮಾರ್ ನಕಲಿ ಸಮವಸ್ತ್ರ ಧರಿಸಿ ನಕಲಿ ಗುರುತಿನ ಚೀಟಿಯನ್ನು ತೋರಿಸಿ ಸಹಾಯಕ ಸಂಚಾರಿ ನಿರೀಕ್ಷಕನೆಂದು ಅಕ್ರಮವಾಗಿ ಬಸ್ಸುಗಳನ್ನು ಚೆಕ್ ಮಾಡಿರುತ್ತಾನೆ ಎಂಬುದನ್ನು ಸಾಬೀತುಪಡಿಸಲು ಅಭಿಯೋಜನೆಯ ವಿಫಲವಾಗಿದೆ ಎಂಬ ಕಾರಣವನ್ನು ನೀಡಿ ಆರೋಪಿಯನ್ನು ಬಿಡುಗಡೆಗೊಳಿಸಿರುವುದಾಗಿದೆ.

. . . . . . .

ಆರೋಪಿ ರವಿಕುಮಾರ್ ನ ಪರವಾಗಿ ಸುಳ್ಯದ ವಕೀಲರಾದ ಎಂ.ವೆಂಕಪ್ಪ ಗೌಡ, ಚಂಪಾ ವಿ.ಗೌಡ,ರಾಜೇಶ್ ಬಿ.ಜಿ ಹಾಗೂ ಶ್ಯಾಮ್ ಪ್ರಸಾದ್ ಎನ್.ಕೆ ರವರು ವಾದಿಸಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading