Ad Widget

ಅಡ್ತಲೆ : ಹಾಲು ಸಂಗ್ರಹಣಾ ಕೇಂದ್ರ ತೆರೆಯುವ ಕುರಿತು ಪೂರ್ವಭಾವಿ ಸಭೆ ಹಾಗೂ ಹೈನುಗಾರಿಕೆಯ ಬಗ್ಗೆ ಮಾಹಿತಿ ಕಾರ್ಯಾಗಾರ

ಅರಂತೋಡು ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಕರ್ನಾಟಕ ಹಾಲು ಒಕ್ಕೂಟದ ಸಹಯೋಗದಲ್ಲಿ ಅಡ್ತಲೆಯಲ್ಲಿ ನೂತನ ಹಾಲು ಸಂಗ್ರಹಣಾ ಕೇಂದ್ರ ತೆರೆಯುವ ಕುರಿತು ಪೂರ್ವಭಾವಿ ಸಭೆ ಹಾಗೂ ಹೈನುಗಾರಿಕೆಯ ಕುರಿತು ಮಾಹಿತಿ ಕಾರ್ಯಾಗಾರವು ಸಂಘದ ಅಧ್ಯಕ್ಷರಾದ ಮೋಹನ್ ಅಡ್ತಲೆ ಇವರ ಅಧ್ಯಕ್ಷತೆಯಲ್ಲಿ ಮನಮೋಹನ ಮೇಲಡ್ತಲೆ ಇವರ ಮನೆಯಲ್ಲಿ ನಡೆಯಿತು.

. . . . . . . . .

ಅರಂತೋಡು ಹಾಲು ಉತ್ಪಾದಕರ ಸಂಘದ ನೇತೃತ್ವದಲ್ಲಿ ನೂತನ ಹಾಲು ಸಂಗ್ರಹಣಾ ಕೇಂದ್ರವನ್ನು ಅಡ್ತಲೆಯಲ್ಲಿ ಮಾರ್ಚ್ 1 ರಿಂದ ಆರಂಭಿಸಲಾಗುವುದೆಂದು ಅಧ್ಯಕ್ಷರು ತಿಳಿಸಿದರು. ಕರ್ನಾಟಕ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕರಾದ ಡಾ. ಸತೀಶ್ ಇವರು ಹಸುಗಳ ಸಾಕಾಣಿಕೆ ಕುರಿತು ಮಾಹಿತಿ ನೀಡಿದರು. ಒಕ್ಕೂಟದ ವೈದ್ಯರಾದ ಕೇಶವ ಸುಳ್ಳಿ ಇವರು ಕರುಗಳ ಆರೈಕೆಯ ಕುರಿತು ಮಾಹಿತಿ ನೀಡಿದರು. ಒಕ್ಕೂಟದ ವಿಸ್ತರಣಾಧಿಕಾರಿ ಶಿವಕುಮಾರ್ ಹೈನುಗಾರಿಕೆಯಲ್ಲಿರುವ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಅರಂತೋಡು ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ಕೇಶವ ಅಡ್ತಲೆ ಶುಭ ಹಾರೈಸಿದರು.ಸಂಘದ ಅಧ್ಯಕ್ಷರಾದ ಮೋಹನ ಅಡ್ತಲೆ ಸ್ವಾಗತಿಸಿ ಕಾರ್ಯದರ್ಶಿ ಶ್ರೀಮತಿ ವಿಮಲಾ ಸೋಮಶೇಖರ ಪೈಕ ಇವರು ಧನ್ಯವಾದಗೈದರು. ಸುಮಾರು 30ಕ್ಕೂ ಮಿಕ್ಕಿ ರೈತರು ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading