Ad Widget

ಮಡಪ್ಪಾಡಿ ತಲುಪಿದ ಆನೆಗಳ ಹಿಂಡು – ನಿರಂತರ ಕೃಷಿ ಹಾನಿ

ಅರಂತೋಡು ಗ್ರಾಮದ ಅಡ್ತಲೆ,ಕಿರ್ಲಾಯ, ಬೆದ್ರುಪಣೆ ಭಾಗದಲ್ಲಿ ನಿರಂತರ ಕೃಷಿ ತೋಟಗಳಿಗೆ ದಾಳಿ ಮಾಡಿ ಹಾನಿ ಮಾಡುತ್ತಿದ್ದ ಆನೆಗಳ ಹಿಂಡು ಕೆಲ ದಿನಗಳಿಂದ ಮಡಪ್ಪಾಡಿ ಕಡೆಗೆ ಆಗಮಿಸಿವೆ.

. . . . . . . . .

ಮಡಪ್ಪಾಡಿ ಗ್ರಾಮದ ದಿನೇಶ್ ಮಡಪ್ಪಾಡಿ ಅವರ ತೋಟಕ್ಕೆ ಫೆ.24 ರಂದು ರಾತ್ರಿ ಏಳು ಆನೆಗಳಿರುವ ಹಿಂಡು ದಾಳಿ ನಡೆಸಿ ಕೃಷಿ ಹಾನಿ ಮಾಡಿದೆ. ತೋಟದಲ್ಲಿ ಡೀಸಿಲ್ ಪಂಪನ್ನು ತಳ್ಳಿ ಹಾಕಿದೆ. ಆನೆಗಳ ಹಿಂಡಿನ ಜತೆ ಮರಿಯಾನೆ ಕೂಡ ಇದ್ದು ಈ ಕಾರಣದಿಂದ ತೋಟದ ವಿವಿಧೆಡೆ ಓಡಾಡಿ ಕೃಷಿ ಹಾನಿ ಮಾಡುತ್ತಿದೆ. ಸ್ಥಳೀಯ ನಿವಾಸಿಗಳು ಬೆಳಿಗ್ಗೆ 3:00 ರ ಸಮಯಕ್ಕೆ ಆನೆಗಳನ್ನು ಓಡಿಸಲು ಪ್ರಯತ್ನಿಸುವ ವೇಳೆ ಆನೆಯೊಂದು ಅಟ್ಟಿಸಿಕೊಂಡು ಬಂದಿದೆ ಎನ್ನಲಾಗಿದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading