Ad Widget

ಯೇನೆಕಲ್ಲು : ಫೆ.28ರಂದು “ಅಡಿಕೆ ಕೃಷಿ ನಿರ್ವಹಣೆ – ರೋಗ ನಿವಾರಣೆ ಮಾಹಿತಿ ಕಾರ್ಯಕ್ರಮ”

ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಯೇನೆಕಲ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇವುಗಳ ಜಂಟಿ ಆಶ್ರಯದಲ್ಲಿ ಫೆ.28 ಶನಿವಾರದಂದು ಪೂರ್ವಾಹ್ನ 10:30ಕ್ಕೆ ಯೇನೆಕಲ್ಲು ಸಂತೃಪ್ತಿ ಸಭಾಭವನದಲ್ಲಿ “ಅಡಿಕೆ ಕೃಷಿ ನಿರ್ವಹಣೆ – ರೋಗ ನಿವಾರಣೆ ಮಾಹಿತಿ ಕಾರ್ಯಕ್ರಮ” ನಡೆಯಲಿದ್ದು, ಯೇನೆಕಲ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಭವಾನಿಶಂಕರ ಪೂಂಬಾಡಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀಮತಿ ವಿಮಲಾ ರಂಗಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಗೌರವ ಉಪಸ್ಥಿತರಾಗಿ ಪ್ರಗತಿಪರ ಕೃಷಿಕರಾದ ಕಾರ್ಯಪ್ಪ ಗೌಡ ಪಿ.ಎಸ್ ಹಾಗೂ ಹರಿಯಪ್ಪ ಗೌಡ ಬಾಲಾಡಿ ಉಪಸ್ಥಿತರಿರಲಿದ್ದಾರೆ. ವಿಟ್ಲದ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಕೇಂದ್ರ(ಸಿ.ಪಿ.ಸಿ.ಆರ್.ಐ) ವಿಜ್ಞಾನಿಗಳಾದ ಡಾ| ಭವಿಷ್ಯ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಲಿದ್ದು, ಯೇನೆಕಲ್ಲು, ಸುಬ್ರಹ್ಮಣ್ಯ ಹಾಗೂ ಐನೆಕಿದು ಗ್ರಾಮಗಳ ಎಲ್ಲಾ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಾಹಿತಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ಕಾರ್ಯಕ್ರಮದ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ( ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading