Ad Widget

ಜಮೀಯ್ಯತುಲ್ ಫಲಾಹ್ ಸುಳ್ಯ ತಾಲೂಕು ಘಟಕದ ವತಿಯಿಂದ ರಂಜಾನ್ ಕಿಟ್ ವಿತರಣೆ

ಕರ್ನಾಟಕ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತ ದ.ಕ ಮತ್ತು ಉಡುಪಿ ಜಿಲ್ಲೆ ಜಮೀಯ್ಯತುಲ್ ಫಲಾಹ್ ಸಂಸ್ಥೆಯ ಸುಳ್ಯ ತಾಲೂಕು ಘಟಕದ ವತಿಯಿಂದ ಸುಳ್ಯ ತಾಲೂಕಿನ ಅರ್ಹ ಫಲಾನುಭವಿ 100 ಕುಟುಂಬಗಳಿಗೆ ದಿನ ನಿತ್ಯ ಉಪಯೋಗದ ರೂ.2 ಲಕ್ಷ ಮೌಲ್ಯದ ಆಹಾರ ಸಾಮಾಗ್ರಿಗಳ ಕಿಟ್ ಅನ್ನು ಗಾಂಧಿನಗರ ಸಂಸ್ಥೆ ಯ ಕಚೇರಿ ವಠಾರದಲ್ಲಿ ವಿತರಿಸಲಾಯಿತು.  ಅಧ್ಯಕ್ಷತೆಯನ್ನು ಜಮೀ...

ಸುಳ್ಯ ತಾಲೂಕು ಜನಜಾಗ್ರತಿ ವೇದಿಕೆ ಪದಾಧಿಕಾರಿಗಳ ಸಭೆ

ಸುಳ್ಯ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಂಗ ಸಂಸ್ಥೆಯಾದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್(ರಿ.) ಸುಳ್ಯ ತಾಲೂಕು ಇದರ ತಾಲೂಕು ವೇದಿಕೆ ಪದಾಧಿಕಾರಿಗಳ ಸಭೆಯು ಸುಳ್ಯ ಯೋಜನ ಕಚೇರಿ ಸಭಾಂಗಣದಲ್ಲಿ ತಾಲೂಕು ಅಧ್ಯಕ್ಷರಾದ ಲೋಕನಾಥ್ ಅಮೆಚೂರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಪದ್ಮನಾಭ...
Ad Widget

ಕೊಲ್ಲಮೊಗ್ರು : ನೂತನ ಅಂಗನವಾಡಿ ಕೇಂದ್ರದ ಉದ್ಘಾಟನೆ

ಕೊಲ್ಲಮೊಗ್ರ ಗ್ರಾಮದ ಬೆಂಡೋಡಿಯಲ್ಲಿ ನಿರ್ಮಾಣವಾದ ನೂತನ ಆಂಗನವಾಡಿಯನ್ನು ಇಂದು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ಮೊಹಿನಿ ಕಟ್ಟ, ಉಪಾಧ್ಯಕ್ಷ ಮಾಧವ ಚಾಂತಾಳ, ಸೊಸೈಟಿ ಅಧ್ಯಕ್ಷ ಡಾ.ಸೋಮಶೇಖರ ಕಟ್ಟೆಮನೆ, ಅಂಗನವಾಡಿ ಸ್ಥಳದಾನಿಗಳು, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ವಿಧ್ಯಾರ್ಥಿಗಳು, ಪೋಷಕರು ,ಶಿಕ್ಷಕರು ಹಾಗೂ ಊರವರು ಉಪಸ್ಥಿತರಿದ್ದರು.

ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ; ವಿವಿಧ ಕೊಡುಗೆಗಳ ಲೋಕಾರ್ಪಣೆ ಹಾಗೂ ಸಾಧಕರಿಗೆ ಸನ್ಮಾನ

ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಗೆ ಜಿಲ್ಲಾ ಗವರ್ನರ್ ರೊ.ರಾಮಕೃಷ್ಣ ಪಿ.ಕೆ.ಯವರು ಫೆ.24 ರಂದು ಭೇಟಿ ನೀಡಿದರು. ರಾತ್ರಿ ಬೆಳ್ಳಾರೆಯ ದೇವಿ ಹೈಟ್ಸ್ ಸಭಾಂಗಣದಲ್ಲಿ ಸಭಾಕಾರ್ಯಕ್ರಮ ನಡೆಯಿತು. ಬೆಳ್ಳಾರೆ ರೋಟರಿ ಕ್ಲಬ್ ಅಧ್ಯಕ್ಷ ವಿಶ್ವನಾಥ.ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕಾರ್ಯದರ್ಶಿ ವೀರನಾಥ್ ವರದಿ ಮಂಡಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಇಬ್ಬರಿಗೆ ಸನ್ಮಾನ ನಡೆಯಿತು....

ಪೆಲ್ತಡ್ಕ : ಮನೆ ಮೇಲೆ ತೆಂಗಿನಮರ ಬಿದ್ದು ಹಾನಿ – ಪಂಚಾಯತ್ ಗೆ ಅರ್ಜಿ ಸಲ್ಲಿಸಲು ತೆರಳಿದ್ದರಿಂದ ಅಪಾಯದಿಂದ ಪಾರಾದ ಮಹಿಳೆ

ಮನೆ ನಿರ್ಮಾಣಕ್ಕೆಂದು ಪಂಚಾಯತ್ ಗೆ ಅರ್ಜಿ ಸಲ್ಲಿಸಲು ತೆರಳಿದ್ದ ಮಹಿಳೆಯ ಮನೆ ಮೇಲೆ ತೆಂಗಿನಮರ ಬಿದ್ದು ಸಂಪೂರ್ಣ ಹಾನಿಯಾದ ಘಟನೆ ಫೆ.26 ರಂದು ನಡೆದಿದೆ. ಸಂಪಾಜೆ ಗ್ರಾಮದ ಪೆಲ್ತಡ್ಕ ಚಂದ್ರಾವತಿ ಎಂಬವರ ಮನೆ ಮೇಲೆ ತೆಂಗಿನಮರ ಬಿದ್ದು ಹಾನಿಯಾಗಿದೆ. ಸಿಮೆಂಟ್ ಶೀಟು ಹಾಗೂ ಮನೆಯಲ್ಲಿದ್ದ ವಸ್ತುಗಳಿಗೆ ಹಾನಿಯಾಗಿದೆ. ಈ ವೇಳೆ ಮಹಿಳೆ ಮನೆಯಲ್ಲಿ ಇಲ್ಲದಿದ್ದುದರಿಂದ ಅಪಾಯದಿಂದ...

ನಾಳೆ(ಫೆ.26) ಸುಳ್ಯದಲ್ಲಿ ವಿದ್ಯುತ್ ವ್ಯತ್ಯಯ

ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯ 33/11 ಕೆ.ವಿ ಸುಳ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ ಫೀಡರುಗಳಲ್ಲಿ ಫೆ. 26 ಗುರುವಾರದಂದು ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ 11ಕೆ.ವಿ ಸುಳ್ಯ1- ಕೇರ್ಪಳ, ಸುಳ್ಯ-2 ಶ್ರೀರಾಂಪೇಟೆ, ಜಬಳೆ, ಡಿಪೋ, ತೊಡಿಕಾನ, ಕೋಲ್ಚಾರ್, ದೇವರಗುಂಡ, ಆಜ್ಜಾವರ, ಉಬರಡ್ಕ, ಕಲ್ಲುಗುಂಡಿ, ಮಂಡೆಕೋಲು ಫೀಡರುಗಳಲ್ಲಿ ಬೆಳಿಗ್ಗೆ 10:00...

ಯೇನೆಕಲ್ಲು : ಫೆ.28ರಂದು “ಅಡಿಕೆ ಕೃಷಿ ನಿರ್ವಹಣೆ – ರೋಗ ನಿವಾರಣೆ ಮಾಹಿತಿ ಕಾರ್ಯಕ್ರಮ”

ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಯೇನೆಕಲ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇವುಗಳ ಜಂಟಿ ಆಶ್ರಯದಲ್ಲಿ ಫೆ.28 ಶನಿವಾರದಂದು ಪೂರ್ವಾಹ್ನ 10:30ಕ್ಕೆ ಯೇನೆಕಲ್ಲು ಸಂತೃಪ್ತಿ ಸಭಾಭವನದಲ್ಲಿ “ಅಡಿಕೆ ಕೃಷಿ ನಿರ್ವಹಣೆ - ರೋಗ ನಿವಾರಣೆ ಮಾಹಿತಿ ಕಾರ್ಯಕ್ರಮ” ನಡೆಯಲಿದ್ದು, ಯೇನೆಕಲ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಭವಾನಿಶಂಕರ ಪೂಂಬಾಡಿ ಕಾರ್ಯಕ್ರಮವನ್ನು...

ಐವರ್ನಾಡು : ಮುತ್ತು ಮಾರಿಯಮ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆ – ಸಮಿತಿ ರಚನೆ

ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನ ಕನಕಪುರ ಐವರ್ನಾಡು ಇದರ ಬ್ರಹ್ಮಕಲಶೋತ್ಸವವು ಎಪ್ರಿಲ್ 29, 30 ಹಾಗೂ ಮೇ.01 ರಂದು ನಡೆಯಲಿದೆ. ಬ್ರಹ್ಮಕಲಶೋತ್ಸವದ ಸಮಿತಿ ರಚನೆ ಇತ್ತೀಚೆಗೆ ನಡೆಯಿತು. ಗೌರವಾಧ್ಯಕ್ಷರಾಗಿ ಸೆಲ್ವಕುಮಾರ್, ಅಧ್ಯಕ್ಷರಾಗಿ ಮುತ್ತುಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಕನ್ನದಾಸನ್ ಆಯ್ಕೆಯಾದರು. ಸದಸ್ಯರುಗಳಾಗಿ ಪೆರುಮಾಳ್, ವಿಜಯರಾಜ್, ರಾಮಸ್ವಾಮಿ, ಅಲಗರಾಜ್, ಜ್ಞಾನಶೇಖರ, ಗುಣಶೇಖರ, ಪದ್ಮನಾಭ ಆಯ್ಕೆಯಾಗಿದ್ದಾರೆ.

ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಅರೆಭಾಷೆ “ರಾಷ್ಟ್ರೀಯ ವಿಚಾರ ಸಂಕಿರಣ” – “ಭಾಷೆ ಉಳಿಯಬೇಕಾದರೆ ಸಾಹಿತ್ಯ ಬೆಳೆಯಬೇಕು” : ಡಾ. ಕೆ.ವಿ ಚಿದಾನಂದ ; “ಅರೆಭಾಷೆ ರಾಜ್ಯದಿಂದಾಚೆ ಬೆಳೆದು‌ ನಿಲ್ಲಬೇಕು” : ಸದಾನಂ‌ದ ಮಾವಜಿ

ಸುಳ್ಯ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಸುವರ್ಣ ಮಹೋತ್ಸವ ಸಂಭ್ರಮಾಚರಣೆಯ ಪ್ರಯುಕ್ತ “ಅರೆಭಾಷೆ ರಾಷ್ಟ್ರೀಯ ವಿಚಾರ ಸಂಕಿರಣ” ಫೆ.24ರಂದು ಕಾಲೇಜಿನ ಕೆವಿಜಿ ಷಷ್ಟ್ಯಬ್ದ ರಂಗಮಂದಿರದಲ್ಲಿ ನಡೆಯಿತು. ಉದ್ಘಾಟನೆಯನ್ನು ನೆರವೇರಿಸಿದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್‌‌ನ ಅಧ್ಯಕ್ಷರಾದ ಡಾ. ಕೆ.ವಿ ಚಿದಾನಂದ ರವರು ಮಾತನಾಡುತ್ತಾ, “ಭಾಷೆಗಳು ಉಳಿಯಬೇಕಾದರೆ...

ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಅರಂತೋಡು ಮಾದರಿ ಗ್ರಾಮ ಪಂಚಾಯತ್ ಗೆ ಅಧ್ಯಯನ ಬೇಟಿ

ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ 8ನೇ ತರಗತಿ ವಿದ್ಯಾರ್ಥಿಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಮಾದರಿ ಗ್ರಾಮ ಪಂಚಾಯತ್ ರಾಜ್ಯದ ಆರು ಮಾದರಿ ಗ್ರಾಮ ಪಂಚಾಯತ್ ಗಳಲ್ಲಿ ಒಂದಾಗಿರುವ ಸುಳ್ಯ ತಾಲೂಕಿನ ಏಕೈಕ ಪಂಚಾಯತ್ ಎಂದು ಹೆಗ್ಗಳಿಕೆ ಗಳಿಸಿರುವ ಅರಂತೋಡು ಗ್ರಾಮ ಪಂಚಾಯತ್ ಗೆ ಅಧ್ಯಯನ ನಡೆಸಲು ಮತ್ತು ಮಾಹಿತಿ...
Loading posts...

All posts loaded

No more posts

error: Content is protected !!