Ad Widget

ಜೇಸಿಐ ಸುಳ್ಯ ಪಯಸ್ವಿನಿ – “ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್” ಪ್ರಶಸ್ತಿ ಪ್ರಧಾನ

“ಶಬ್ದವಿಲ್ಲದೇ ಪ್ರಚಾರ ಮಾಡುವವರು ಸಮಾಜದ ನಿಜವಾದ ನಾಯಕರು.” ಈ ಹಿನ್ನೆಲೆಯಲ್ಲಿ ಜೇಸಿಐ ಭಾರತದ ಪೆಬ್ರವರಿ ತಿಂಗಳ ಗೌರವ ಸಮರ್ಪಣೆಯು ಸ್ಥಳೀಯಾಡಳಿತ ವ್ಯವಸ್ಥೆಯಲ್ಲಿ ಸಹಾಯಕರಾಗಿ ನಿಷ್ಠೆ ಪ್ರಾಮಾಣಿಕತೆಯಿಂದ ದುಡಿದ ಸೇವೆಯನ್ನು ಗುರುತಿಸಿ ಗೌರವಿಸುವುದಾಗಿದ್ದು, ಅದರಂತೆ ಅಮರಮುಡ್ನೂರು ಗ್ರಾಮ ಪಂಚಾಯತ್ ನಲ್ಲಿ ಕಳೆದ 16ವರ್ಷಗಳಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಮತಿ. ಜಯಲಕ್ಷ್ಮಿ ಎಂ.ಎನ್ ರವರನ್ನು

. . . . . . . . .

“ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್” ಪ್ರಶಸ್ತಿ ನೀಡಿ ಫೆ.22ರಂದು ಜೇಸಿಐ ಸುಳ್ಯ ಪಯಸ್ವಿನಿಯ ವತಿಯಿಂದ ಅಕ್ಕೋಜಿಪಾಲ್ ರವಿಕುಮಾರ್ ಅವರ ನಿವಾಸದಲ್ಲಿ ನೀಡಲಾಯಿತು. ಇವರು ಸುಮಾರು

. . . . . . .

5ಕೋಟಿಗೂ ಮಿಕ್ಕಿ ಉದ್ಯೋಗ ಖಾತರಿ ಯೋಜನೆಯ ಫಲಾನುಭವಿಗಳಿಗೆ ವೇತನ ಪಾವತಿಸುವ ಪ್ರಕ್ರಿಯೆಯಲ್ಲಿ ಪ್ರಾಮಾಣಿಕರಾಗಿದ್ದು, ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶವನ್ನು ನೀಡದೆ 

 ಸಲ್ಲಿಸಿದ ಇವರ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು‌. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಸುಳ್ಯ ಪಯಸ್ವಿನಿಯ ಅಧ್ಯಕ್ಷ ರಾದ ಜೇಸಿ. ಲತಾಶ್ರೀ ಸುಪ್ರೀತ್ ಮೋಂಟಡ್ಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜೇಸಿಐ ಭಾರತ, ವಲಯ 15, ಪ್ರಾಂತ್ಯ ಬಿ ಇದರ ವಲಯ ಉಪಾಧ್ಯಕ್ಷರಾದ ಜೇಸಿ. ಸೆನೆಟರ್ ಜಿತೇಶ್ ಪಿರೇರಾ ಭಾಗವಹಿಸಿದರು. ಅಮರಮುಡ್ನೂರು ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿಗಳಾದ ದಯಾನಂದ ಪತ್ತುಕುಂಜ ಅಭಿನಂದನಾ ಮಾತುಗಳನ್ನಾಡಿದರು. ಪೂರ್ವ ವಲಯ ಅಧ್ಯಕ್ಷ ರಾದ ಪಿಪಿಪಿ ಅಶೋಕ್ ಚೂಂತಾರ್ ವೇದಿಕೆಗೆ ಆಹ್ವಾನಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೇಸಿ. ಸುನಿತಾ ರವಿಕುಮಾರ್ ಅಕ್ಕೋಜಿಪಾಲ್ ಸನ್ಮಾನಿತರ ಸನ್ಮಾನ ಪತ್ರವನ್ನು ವಾಚಿಸಿದರು. ಜೇಸಿ. ಶೋಭಾ ಚೂಂತಾರ್ ಜೇಸಿ ವಾಣಿ ವಾಚಿಸಿದರು. ಕಾರ್ಯದರ್ಶಿ ಜೇಸಿ ತಾರಾ ಮಾದವ ಚೂಂತಾರ್ ವಂದಿಸಿದರು. ಜೇಸಿ ರವಿಕುಮಾರ್ ಅಕ್ಕೋಜಿಪಾಲ್, ಜೇಸಿ. ವಿನೋದ್ ಮೂಡಗದ್ದೆ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading