Ad Widget

ಸ್ಕೌಟ್- ಗೈಡ್ ಯುವ ಧ್ವನಿ ಸುಳ್ಯ ಇದರ ವತಿಯಿಂದ ಕೋಳಿಕ್ಕ ಮಲೆ ಬೆಟ್ಟದಲ್ಲಿ ಧ್ವಜಾರೋಹಣ

ವಿನೋಬನಗರ : ವಿವೇಕಾನಂದ ವಿದ್ಯಾ ಸಂಸ್ಥೆಗಳು ವಿನೋಬನಗರ ಮತ್ತು ಸ್ಕೌಟ್- ಗೈಡ್ ಯುವ ಧ್ವನಿ ಸುಳ್ಯ ಇದರ ಸಹಯೋಗದಲ್ಲಿ ಒಂದು ದಿನದ ಹೈಕಿಂಗ್ ಕಾರ್ಯಕ್ರಮವನ್ನು ಫೆ.22 ರಂದು ಹಮ್ಮಿಕೊಂಡು ಪ್ರಥಮವಾಗಿ ಕೋಳಿಕ್ಕ ಮಲೆ ಬೆಟ್ಟದ ತುದಿಯಲ್ಲಿ ಬಿ.ಸಿ.ಜಿ. ಧ್ವಜವನ್ನು ಹಾರಿಸುವುದರ ಮೂಲಕ ಸ್ಕೌಟ್ ಗೈಡ್ ನ ವಿಶ್ವ ಚಿಂತಕರ ದಿನ ಮತ್ತು ಸಂಸ್ಥಾಪಕರ ದಿನದ ವಿಶೇಷತೆಯನ್ನು ಸ್ಕೌಟ್ಸ್ ಮಾಸ್ಟರ್ ಆಗಿರುವ ವಿಶ್ವತ್. ಪಿ. ರವರು ತಿಳಿಸಿಕೊಟ್ಟರು. ಹಾಗೂ ವಿದ್ಯಾರ್ಥಿಗಳ ಹೈಕಿಂಗ್ ಸಮಯದಲ್ಲಿ ರೂಟ್ ಮ್ಯಾಪ್ ಮತ್ತು ದಿಕ್ಸೂಚಿಗಳ ಬಗ್ಗೆ ಸ್ಕೌಟ್ಸ್ ಮಾಸ್ಟರ್ ಗಳಾದ ಕೀರ್ತನ್ ಆರ್.ಎಸ್.ಎಲ್ ಹಾಗೂ ಭರತ್ ನಾಯಕ್ ಆರ್.ಎಸ್.ಎಲ್ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ವಿದ್ಯಾಸಂಸ್ಥೆಯ 30 ಸ್ಕೌಟ್ -ಗೈಡ್ ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಸ್ಕೌಟ್ ಮಾಸ್ಟರ್ ಶ್ರೀಮತಿ ಲೀಲಾವತಿ ಹಾಗೂ ಗೈಡ್ ಕ್ಯಾಪ್ಟನ್ ಪೂರ್ಣಿಮಾ ರವರು ಸಹಕರಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading