Ad Widget

ದ್ವಾದಶ ರಾಶಿಗಳ ದಿನ ಭವಿಷ್ಯ

. . . . . . . . .


ದಿನಾಂಕ:23/02/2026 ಸೋಮವಾರ
*01,🐏ಮೇಷರಾಶಿ🐏*
🌻,ನೆನೆಬಿದ್ದ ಕೆಲಸಗಳಿಂದಾಗಿ ನಿಮ್ಮಲ್ಲಿ ಇಂದು ಲವಲವಿಕೆ ಕಂಡು ಬರುವುದಿಲ್ಲ. ನಿದ್ದೆಗೇಡು ಬುದ್ಧಿಗೇಡು ಎನ್ನುವಂತೆ ಸಣ್ಣಪುಟ್ಟ ವಿಷಯಗಳ ಮೇಲೆ ಕೂಗಾಡುವಿರಿ. ಆದಷ್ಟು ತಾಳ್ಮೆ ಇರಲಿ. ಈ ದಿನವೂ ನಿಮ್ಮ ಮನವು ಅಸ್ತವ್ಯಸ್ತವಾಗಿರುವದು, ಶಾಂತಚಿತರಾಗಿರಲು ಪ್ರಯತ್ನಿಸಿ, ಹಾಗು ಪರಿಸ್ಥಿತಿಗಳನ್ನು ಸಮರ್ಥ ರೀತಿಯಿಂದ ಎದುರಿಸಿ,
ಗಮನಿಸಿ :-ಈ ದಿನ ಶಾಂತ ಮನಸ್ಸಿನಿಂದ ಕೂಡಿರುತ್ತದೆ,
ಪರಿಹಾರ:-ಶಿವನ ಮಂತ್ರವನ್ನು ಪಠಿಸಿ,
*02,🐂ವೃಷಭರಾಶಿ🐂*
🌻,ಬಾಳಸಂಗಾತಿಯ ಆರೋಗ್ಯದ ಬಗ್ಗೆ ಎಚ್ಚರ ವಹಿಸಬೇಕಾಗುವುದು. ಉದ್ಯೋಗದಲ್ಲಿ ದಿಢೀರನೆ ಸಮಸ್ಯೆಗಳು ಎದುರಾಗುವ ಸಂದರ್ಭವಿದೆ. ಕೆಲವು ವಿಷಯಗಳಲ್ಲಿ ಆತುರದ ನಿರ್ಧಾರವು ಕೆಡಕುಗಳಿಗೆ ಮೂಲ ಕಾರಣವಾಗುವುದು. ಸೃಜನಶೀಲ ಕ್ಷೇತ್ರಗಳಲ್ಲಿರುವವರು ಬಹಳ ದಿನಗಳಿಂದ ಕಾಯುತ್ತಿದ್ದ ಪ್ರಸಿದ್ಧಿ ಮತ್ತು ಗುರುತಿಸುವಿಕೆಯನ್ನು ಪಡೆಯುವ ಒಂದು ಯಶಸ್ವಿ ದಿನ,
ಗಮನಿಸಿ :- ಇಂದು ಶಾಂತರೂಪ ದಿಂದ ಇರಿ,
ಪರಿಹಾರ:-ಶ್ರೀ ಗುರುರಾಘವೇಂದ್ರರ ಪ್ರಾರ್ಥನೆ ಮಾಡಿ,
*03,👥ಮಿಥುನ ರಾಶಿ👥*
🌻,ಸಣ್ಣ ವಿಷಯವೂ ಗಹನವಾಗಿ ಕಾಡುವುದು. ಸಣ್ಣಪುಟ್ಟ ವಿಷಯಗಳೇ ನಿಮ್ಮ ಮನಸ್ಸಿನ ಚಿಂತೆಗೆ ಕಾರಣವಾಗುವವು. ಹಣಕಾಸಿನ ಮೇಲೆ ಹೆಚ್ಚಿನ ಹಿಡಿತವಿಟ್ಟುಕೊಳ್ಳುವುದು ಒಳ್ಳೆಯದು. ಸಾಲಕ್ಕೆ ಸಂಬಂದಿಸಿದ ವಿಚಾರಗಳನ್ನು ಈ ದಿನ ಮುಂದೂಡುವದು ಶುಭ,
ಗಮನಿಸಿ:- ಇಂದು ನಿಮ್ಮ ಮಕ್ಕಳ ಸಮಸ್ಯೆಗಳನ್ನು ನಿಭಾಯಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಿ,
ಪರಿಹಾರ:-ಕುಲದೇವರನ್ನು ಸ್ಮರಣೆ ಮಾಡಿ ಅಥವಾ ದರ್ಶನ ಮಾಡಿ,
*04,🦀ಕಟಕ ರಾಶಿ🦀*
🌻,ತುಂಬಿದ ಕೊಡ ತುಳಕಲಾರದು. ಅಂತೆಯೆ ಖಾಲಿ ಇರದ ಕೊಡವೂ ಶಬ್ದ ಮಾಡಲಾರದು. ಆದರೆ ನೀವು ತುಂಬಿದ ಕೊಡದಂತೆ ಸಮಯಕ್ಕೆ ತಕ್ಕಂತೆ ನಡೆದುಕೊಳ್ಳುವ ಸ್ವಭಾವ ಇರುವ ನಿಮ್ಮನ್ನು ಎಲ್ಲರೂ ಮೆಚ್ಚುವರು. ಹಣಕಾಸಿನ ವಿಚಾರ ಪ್ರಗತಿಯಲ್ಲಿರುತ್ತದೆ. ಗಮನಿಸಿ:- ಇಂದು ನಿಮ್ಮ ದೇಹದ ನೋವು ಮತ್ತು ಒತ್ತಡ ಸಂಬಂಧಿತ ಸಮಸ್ಯೆಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ,
ಪರಿಹಾರ:-ಶಿವ ನಾಮ ಸ್ಮರಣೆ ಮಾಡಿ,
*05,🦁ಸಿಂಹ ರಾಶಿ🦁*
🌻,ಇಟ್ಟ ಗುರಿ ಬಿಟ್ಟ ಬಾಣದಂತೆ ನಿಮ್ಮ ಗಮನವು ನಿರ್ದಿಷ್ಟವಾದ ಕಾರ್ಯದತ್ತ ಕೇಂದ್ರೀಕೃತವಾಗಿದೆ. ಹಾಗಾಗಿ ಗೆಲುವು ನಿಮ್ಮದಾಗುವುದು. ಗೆಳೆಯರು ನಿಮ್ಮನ್ನು ಅರ್ಥ ಮಾಡಿಕೊಂಡು ಸಹಾಯ ಹಸ್ತ ನೀಡುವರು,
ಗಮನಿಸಿ:- ಇಂದು ನಿಮ್ಮ ಖರ್ಚುಗಳಲ್ಲಿ ಅನಿರೀಕ್ಷಿತ ಏರಿಕೆ ನಿಮ್ಮ ಮನಸ್ಸಿನ ಶಾಂತಿಗೆ ಭಂಗ ತರುತ್ತದೆ,
ಪರಿಹಾರ:-ಗಣಪತಿಯನ್ನು ನೆನೆಯಿರಿ,
*06,👩‍🦰ಕನ್ಯಾ ರಾಶಿ👩‍🦰*
🌻,ವ್ಯಾಪಾರ-ವ್ಯವಹಾರಗಳು ನಿಮ್ಮ ಮನಸ್ಸಿನಂತೆ ಆಗುವುದು ಹಾಗೂ ನೀವು ಹಾಕಿದ ಬಂಡವಾಳಕ್ಕೂ ಮಿಗಿಲಾಗಿ ಲಾಭಾಂಶ ದೊರೆಯುವುದು. ಬಂದ ಲಾಭಾಂಶಗಳಲ್ಲಿ ಸ್ವಲ್ಪ ಭಾಗದಷ್ಟು ದಾನ ಮಾಡಿ. ಈ ದಿನ ಮಾಡಿದ ಕಾರ್ಯಗಳಲ್ಲಿ ಜಯಶೀಲರಾಗುವಿರಿ, ಗಮನಿಸಿ:-ಹಿರಿಯರೊಂದಿಗೆ ಮನಸ್ತಾಪಕ್ಕಿಳಿಯದಿರಿ.
ಪರಿಹಾರ:-ವಿಷ್ಣು ಸಹಸ್ರ ನಾಮ ಜಪಿಸಿ,
*07,⚖️ತುಲಾ ರಾಶಿ⚖️*
🌻,ನಿಮ್ಮ ಮತ್ತು ನಿಮ್ಮ ಗ್ರಾಹಕರ ನಡುವೆ ಇದ್ದ ಭಿನ್ನಾಭಿಪ್ರಾಯಗಳಿಗೆ ಮುಕ್ತಿ ದೊರೆಯುವುದು. ಈ ಹಿಂದೆ ಮಾಡಿದ ತಪ್ಪನ್ನೇ ಪುನಃ ಮಾಡುವುದು ಬುದ್ಧಿವಂತರ ಲಕ್ಷ ಣವಲ್ಲ, ನಿಮ್ಮ ಉದ್ಯೋಗದ ಕಡೆ ಗಮನವಿರಿಸಿ, ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಇತರರನ್ನು ಕುರಡಾಗಿ ನಂಬಬೇಡಿ,
ಗಮನಿಸಿ:-ಗುರು ಹಿರಿಯರ ಸಲಹೆ ಪಡೆಯಿರಿ,
ಪರಿಹಾರ:-ಇಷ್ಟ ದೈವದ ಪ್ರಾರ್ಥನೆ ಮಾಡಿ,
*08,🦂ವೃಶ್ಚಿಕ ರಾಶಿ🦂*
🌻,ನಿಮ್ಮ ಮತ್ತು ನಿಮ್ಮ ಗ್ರಾಹಕರ ನಡುವೆ ಇದ್ದ ಭಿನ್ನಾಭಿಪ್ರಾಯಗಳಿಗೆ ಮುಕ್ತಿ ದೊರೆಯುವುದು. ಈ ಹಿಂದೆ ಮಾಡಿದ ತಪ್ಪನ್ನೇ ಪುನಃ ಮಾಡುವುದು ಬುದ್ಧಿವಂತರ ಲಕ್ಷ ಣವಲ್ಲ, ನಿಮ್ಮ ಉದ್ಯೋಗದ ಕಡೆ ಗಮನವಿರಿಸಿ, ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಇತರರನ್ನು ಕುರಡಾಗಿ ನಂಬಬೇಡಿ,
ಗಮನಿಸಿ:-ಗುರು ಹಿರಿಯರ ಸಲಹೆ ಪಡೆಯಿರಿ,
ಪರಿಹಾರ:-ಇಷ್ಟ ದೈವದ ಪ್ರಾರ್ಥನೆ ಮಾಡಿ,
*09,🏹ಧನಸ್ಸು ರಾಶಿ🏹*
🌻,ಈ ದಿನ ಸಾಲಕ್ಕೆ ಸಂಬಂಧ ಪಟ್ಟ ವಿಚಾರಗಳಿಂದ ದೂರವಿರಿ, ಅತಿ ಮುಖ್ಯ ನಿರ್ಣಯಗಳನ್ನು ಇಂದು ಮುಂದೂಡಿ, ಈ ದಿನ ದುಃಖದಾಯಕ ಘಟನೆಗಳು ಸಂಭವಿಸಬಹುದು, ಯಾವುದೇ ರೀತಿಯ ಮನಸ್ತಾಪ ಜಗಳಗಳಿಗೆ ಭಾಗಿಯಾಗದಿರಿ, ಮಾನಸಿಕ ಚಿಂತೆ ನಿಮ್ಮನ್ನಿಂದು ಕಾಡುವುದು,
ಗಮನಿಸಿ:-ಖರ್ಚಿನ ಕಡೆ ವಿಶೇಷ ಗಮನವಿರಲಿ.
ಪರಿಹಾರ:-ಶಿವಾರಾಧನೆಯನ್ನು ಮಾಡುವದರಿಂದ ಶುಭವಾಗುವುದು,
*10,🐊ಮಕರ ರಾಶಿ🐊*
🌻,ಇದುವರೆಗೂ ನಿಮ್ಮನ್ನು ವಿರೋಧಿಸುತ್ತಿದ್ದ ಜನರೇ ನಿಮ್ಮ ಗೆಳೆತನವನ್ನು ಬಯಸಿ ನಿಮ್ಮ ಬಳಿಬರುವರು. ಅವರು ನಿಜವಾದ ಕಾಳಜಿಯನ್ನು ತೋರಿದಲ್ಲಿ ಮಾತ್ರ ಸ್ನೇಹ ಸಂಬಂಧವನ್ನು ಮುಂದುವರೆಸಬಹುದು, ಜನಾಭಿಪ್ರಾಯವು ನಿಮ್ಮ ಪರವಾಗುವುದು ಜನ ಮನ್ನಣೆ ನಿಮಗಿಂದು ದೊರೆಯುವದು, ಗಮನಿಸಿ:-ಈ ದಿನ ಮಾಡುವ ಕೆಲಸಗಳು ನಿಮಗೆ ಶುಭವಾಗುವವು.
ಪರಿಹಾರ:-ಈ ದಿನ ವೆಂಕಟೇಶ್ವರನ ದರ್ಶನ ಮಾಡಿ,
*11,⚱️ಕುಂಭ ರಾಶಿ⚱️*
🌻,ಕೆಲವು ಕಾಲದಿಂದ ತಟಸ್ಥಗೊಂಡಿದ್ದ ನಿಮ್ಮ ವ್ಯಾಪಾರ, ಸ್ವಉದ್ಯೋಗ ಯೋಜನೆಗಳಿಗೆ ಚಾಲನೆ ದೊರೆಯುವುದು ಮತ್ತು ಅದರಿಂದ ಸಾಕಾರಸಿದ್ದಿಯು ಲಭಿಸುವುದು, ಈ ದಿನ ನಿಮ್ಮನ್ನು ಆಲಸ್ಯವು ಅಸಫಲತೆ ನಿಮ್ಮದಾಗುವುದು, ಗಮನಿಸಿ:-ಹೊಸ ಯೋಜನೆಗಳನ್ನು ಅಥವಾ ಹೊಸ ಕಾರ್ಯಗಳನ್ನು ನೀವಿಂದು ನಿಶ್ಚಿನಿತರಾಗಿ ಆರಂಭಿಸಬಹುದು,
ಪರಿಹಾರ:-ಶ್ರೀ ಆಂಜನೇಯ ಸ್ತೋತ್ರ ಪಠಿಸಿ,
*12,🐋ಮೀನ ರಾಶಿ🐋*
🌻,ಈ ದಿನ ಮುಖ್ಯ ನಿರ್ಣಯಗಳನ್ನು ತೆಗೆದುಕೊಳ್ಳಲು, ಹೊಸ ಕಾರ್ಯವನ್ನು ಆರಂಭಿಸಲು ಖರೀದಿ/ಮಾರಾಟ ವ್ಯವಹಾರಗಳನ್ನು ಮಾಡಲು ಈ ದಿನ ಉತ್ತಮವಾಗಿದೆ, ಮನುಜನು ಮಾಡುವ ಕೆಲಸ ಯಶಸ್ವಿಯಾಗುವುದಕ್ಕೆ ಕೇವಲ ಲೌಕಿಕ ಪ್ರಯತ್ನ ಸಾಲದು. ದೈವದ ಆಶೀರ್ವಾದವೂ ಬೇಕು,
ಗಮನಿಸಿ:- ದೈವದ ಒಲುಮೆಗಾಗಿ ನವಗ್ರಹ ಪ್ರದಕ್ಷಣೆ ಮಾಡಿ,
ಪರಿಹಾರ:-ಕುಲದೇವತಾ ಪ್ರಾರ್ಥನೆ ಮಾಡಿ.
📝ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading