Ad Widget

ಮರ್ಕಂಜ : ವಿಜೃಂಭಣೆಯಿಂದ ನಡೆದ ದೋಳ ಆದಿಮನೆಯ ಪ್ರತಿಷ್ಠಾ ಕಲಶೋತ್ಸವ

ಮರ್ಕಂಜ ಗ್ರಾಮದ ದೋಳ ಆದಿಮನೆಯಲ್ಲಿ ಶ್ರೀ ಧರ್ಮದೈವ ಶ್ರೀ ರುದ್ರಚಾಮುಂಡಿ ಹಾಗೂ ಸಪರಿವಾರ ದೈವಗಳಿಗೆ ನೂತನವಾಗಿ ನಿರ್ಮಿಸಿದ ಆದಿಮನೆಯ ಪ್ರತಿಷ್ಠಾ ಕಲಶೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕುಟುಂಬದ ಪ್ರಮುಖರಾದ ವೀರಪ್ಪ ಗೌಡ ದೋಳ ಗೂನಡ್ಕ, ಬಾಲಕೃಷ್ಣ ಗೌಡ ದೋಳ, ಡಾ| ಲೀಲಾಧರ್ ಡಿ.ವಿ, ಸತೀಶ್ ಡಿ.ವಿ, ಜನಾರ್ಧನ ದೋಳ, ಚೆನ್ನಕೇಶವ ದೋಳ, ಸೋಮಯ್ಯ ದೋಳ, ಕುಸುಮಾಧರ ದೋಳ, ಕೊಜಂಬೆ ಹಾಗೂ ದೋಳ ಕುಟುಂಬಸ್ಥರು, ಮತ್ತಿತರರು ಉಪಸ್ಥಿತರಿದ್ದರು. ಫೆ‌.21ರಂದು ಸಾಯಂಕಾಲ ನೂತನ ಚಾವಡಿಯಲ್ಲಿ ಪುಣ್ಯಾಹವಾಚನ, ಸ್ಥಳಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ವಾಸ್ತು ಪುಣ್ಯಾಹಾಂತ, ಪ್ರಸಾದ ವಿತರಣೆ ನಡೆಯಿತು. ಫೆ.22ರಂದು ಬೆಳಿಗ್ಗೆ ಗಣಪತಿ ಹೋಮ, ಬ್ರಹ್ಮಕಲಶಪೂಜೆ, ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ನಿತ್ಯನೈಮಿತ್ಯಾಧಿಗಳ ನಿರ್ಣಯ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಫೆ.24ರಂದು ಬೆಳಿಗ್ಗೆ ಶ್ರೀ ವೆಂಕಟ್ರಮಣ ದೇವರ ಹರಿಸೇವೆ, ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಲಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading