Ad Widget

ಉಬರಡ್ಕ : ಸೊಸೈಟಿ ಅಧ್ಯಕ್ಷರಾಗಿ ಹರಿಪ್ರಸಾದ್ ಪಾನತ್ತಿಲ ಅವಿರೋಧ ಆಯ್ಕೆ, ಉಪಾಧ್ಯಕ್ಷತೆಗೆ ಚುನಾವಣೆ – ವಿಜಯಕುಮಾರ್ ಉಬರಡ್ಕ ಗೆಲುವು

ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿಗೆ ಫೆ.8 ಚುನಾವಣೆ ನಡೆದು ಸಹಕಾರ ಭಾರತಿಯ 9 ಅಭ್ಯರ್ಥಿಗಳು ಹಾಗೂ ಕಾಂಗ್ರೆಸ್ ಬೆಂಬಲಿತ ಸಹಕಾರ ಬಳಗದ 3 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು.
ಇಂದು ಅಧ್ಯಕ್ಷ ಉಪಾಧ್ಯರ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷತೆಗೆ ಹರಿಪ್ರಸಾದ್ ಪಾನತ್ತಿಲ ಹಾಗೂ ಉಪಾಧ್ಯಕ್ಷತೆಗೆ ಪ್ರಭಾಕರ ಅಮೈ ನಾಮಪತ್ರ ಸಲ್ಲಿಸುವುದೆಂದು ಬಿಜೆಪಿ ತೀರ್ಮಾನಿಸಿತ್ತು. ಆದರೇ ಚುನಾವಣೆ ವೇಳೆ ಉಪಾಧ್ಯಕ್ಷತೆಗೆ ಆಕಾಂಕ್ಷಿಯಾಗಿದ್ದ ವಿಜಯಕುಮಾರ್ ಉಬರಡ್ಕ ಕೂಡ ನಾಮಪತ್ರ ಸಲ್ಲಿಸಿದರು.

. . . . . . . . .

ಅಧ್ಯಕ್ಷರಾಗಿ ಹರಿಪ್ರಸಾದ್ ಅವಿರೋಧವಾಗಿ ಆಯ್ಕೆಯಾದರೇ ಉಪಾಧ್ಯಕ್ಷತೆಗೆ ಚುನಾವಣೆ ನಡೆಯಿತು.‌

. . . . . . .

ಸಂಘದಲ್ಲಿ ಒಟ್ಟು 12 ನಿರ್ದೇಶಕರಿದ್ದು ನಿರ್ದೇಶಕ ರಾಜೇಶ್ ಭಟ್ ನೆಕ್ಕಿಲ ಗೈರಾಗಿದ್ದ ಹಿನ್ನೆಲೆಯಲ್ಲಿ 11 ನಿರ್ದೇಶಕರು ( ಸಹಕಾರ ಭಾರತಿಯ 8 , ಸಹಕಾರ ಬಳಗದ 3) ಹಾಗೂ ಡಿಸಿಸಿ ಬ್ಯಾಂಕ್ ಪ್ರತಿನಿಧಿ ಚುನಾವಣೆಯಲ್ಲಿ ಭಾಗವಹಿಸಿದರು. ಚುನಾವಣೆಯಲ್ಲಿ ಇಬ್ಬರಿಗೂ ತಲಾ 6 – 6 ಮತ ದೊರೆಯಿತು. ಕೊನೆಗೆ ಚೀಟಿ ಎತ್ತುವ ಮೂಲಕ ಉಪಾಧ್ಯಕ್ಷರ ಆಯ್ಕೆ ನಡೆಸುವುದೆಂದು ತೀರ್ಮಾನಿಸಲಾಯಿತು. ಅದೃಷ್ಟದ ಆಯ್ಕೆಯಲ್ಲಿ ವಿಜಯಕುಮಾರ್ ಉಬರಡ್ಕ ಗೆಲುವು ಸಾಧಿಸಿದರು.

ಈ ಸಂದರ್ಭದಲ್ಲಿ  ನಿರ್ದೇಶಕರಾದ ಸುರೇಶ್ ಅಮೈ, ಗಂಗಾಧರ ನಾಯರ್ ಕಂಬಳಿಮೂಲೆ, ಹರೀಶ್ ಮಾಣಿಬೆಟ್ಟು, ಗಂಗಾಧರ ಪಿ.ಎಸ್. , ವನಿತಾ ಚಂದ್ರಶೇಖರ ಮೂರ್ಜೆ, ಕೀರ್ತಿ ಜಯಂತ್ ಭರ್ಜರಿಗುಂಡಿ, ಪದ್ಮಯ್ಯ ನಾಯ್ಕ ಚೆನ್ನಡ್ಕ, ಈಶ್ವರ ಕಲ್ಚಾರ್ ಉಪಸ್ಥಿತರಿದ್ದರು.

.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading