Ad Widget

ಕೋಟೆ ಫೌಂಡೇಶನ್ ವತಿಯಿಂದ ಕೆ.ಪಿ.ಎಸ್ ಬೆಳ್ಳಾರೆ ಪ್ರಾಥಮಿಕ ವಿಭಾಗಕ್ಕೆ ಸ್ಮಾರ್ಟ್ ಕ್ಲಾಸ್ ಕೊಡುಗೆ

ಕರ್ನಾಟಕ ಪಬ್ಲಿಕ್ ಸ್ಕೂಲ್, ಬೆಳ್ಳಾರೆ ಇದರ ಪ್ರಾಥಮಿಕ ವಿಭಾಗಕ್ಕೆ ರೈಟ್ ಟು ಲಿವ್ ಕೋಟೆ ಫೌಂಡೇಶನ್ ವತಿಯಿಂದ ಕ್ಲಿಯೋ ಸಾಫ್ಟ್ವೇರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇವರು ಪ್ರಾಯೋಜಿಸಿರುವ ಸ್ಮಾರ್ಟ್ ಕ್ಲಾಸನ್ನು ಇಂದು ಉದ್ಘಾಟಿಸಲಾಯಿತು. ಕೆ.ಪಿ.ಎ.ಸ್ ಬೆಳ್ಳಾರೆ ಇದರ ಎಸ್.ಡಿ.ಎಂ.ಸಿಯ ಕಾರ್ಯಾಧ್ಯಕ್ಷರಾದ ಹರ್ಷ ಜೋಗಿಬೆಟ್ಟು ಇವರು ಸ್ಮಾರ್ಟ್ ಕ್ಲಾಸ್ ಅನ್ನು ಉದ್ಘಾಟಿಸಿ ಮಾತನಾಡುತ್ತ, “ಕೋಟೆ ಫೌಂಡೇಶನ್ ಸಂಸ್ಥೆಯು ಕೆ.ಪಿ.ಎಸ್ ಪ್ರೌಢಶಾಲಾ ವಿಭಾಗದಲ್ಲಿ ಕಂಪ್ಯೂಟರ್ ಲ್ಯಾಬ್ ಅನ್ನು ನಿರ್ವಹಿಸಲು, ಕಂಪ್ಯೂಟರ್ ಶಿಕ್ಷಕಿ ಮತ್ತು 10 ಕಂಪ್ಯೂಟರ್ ಗಳನ್ನು ನೀಡಿ, ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿಗಳಲ್ಲಿ ಕಂಪ್ಯೂಟರ್ ಜ್ಞಾನವನ್ನು ಹೆಚ್ಚಿಸಲು ನೆರವು ನೀಡಿದೆ. ಇಂದು ನೀಡಿರುವ ಸ್ಮಾರ್ಟ್ ಕ್ಲಾಸ್ ಪ್ರಾಥಮಿಕ ವಿಭಾಗದ ಮಕ್ಕಳ ಜ್ಞಾನವನ್ನು ಹೆಚ್ಚಿಸಲು ಸಹಕಾರಿಯಾಗಲಿದೆ” ಎಂದರು. ಸ್ಮಾರ್ಟ್ ಕ್ಲಾಸ್ ಅನ್ನು ಆನ್ಲೈನ್ ವೆಬಿನಾರ್ ಮೂಲಕ ಉದ್ಘಾಟಿಸಲಾಯಿತು. ರೈಟ್ ಟು ಲಿವ್ ಕೋಟೆ ಫೌಂಡೇಶನ್ ಪ್ರತಿನಿಧಿಗಳಾದ ಪ್ರದೀಪ್ ಉಬರಡ್ಕ, ವೆಂಕಟರಾಜ್ ಸಿ.ಕೆ, ಎಸ್.ಡಿ.ಎಂ.ಸಿ ಸದಸ್ಯರಾದ ಮುರಳಿ ತಡಗಜೆ ಉಪಸ್ಥಿತರಿದ್ದರು. ವೆಬಿನಾರ್ ನಲ್ಲಿ ಕೋಟೆ ಫೌಂಡೇಶನ್ ಮ್ಯನೇಜಿಂಗ್ ಡೈರೆಕ್ಟರ್ ಶ್ರೀಧರ್ ಮತ್ತು ಪ್ರತಿನಿಧಿ ರಮೇಶ್ ಸಿ.ಕೆ, ಶಾಂಭವಿ ಹಾಗೂ ವೀರೇಶ್ ಭಾಗವಹಿಸಿದರು. ಶಿಕ್ಷಕರಾದ ದಿನೇಶ್ ಮಾಚಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಶಾಲೆಯ ಪರಿಚಯವನ್ನು ಅತಿಥಿಗಳಿಗೆ ಮಾಡಿದರು. ಮುಖ್ಯ ಗುರುಗಳಾದ ಮಾಯಿಲಪ್ಪ.ಜಿ ವಂದನಾರ್ಪಣೆಗೈದರು. ವಿದ್ಯಾರ್ಥಿನಿ.ಪಿ ಮನ್ವಿ ಅನಿಕೆಗಳನ್ನು ಹಂಚಿಕೊಂಡರು. ಶಾಲಾ ಶಿಕ್ಷಕವೃಂದ, ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೋಟೆ ಪೌಂಡೇಶನ್ ಸಂಸ್ಥೆಯು ಕೆಪಿಎಸ್ ಬೆಳ್ಳಾರೆಗೆ ರೂ. 40,000 ವೆಚ್ಚದಲ್ಲಿ ಸ್ಮಾರ್ಟ್ ಟಿವಿಯನ್ನು ನೀಡುವುದರ ಮೂಲಕ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಆಧಾರಿತ ಕಲಿಕೆಗೆ ಹೊಸ ಮಾರ್ಗವನ್ನು ತೆರೆಯುವಲ್ಲಿ ಸಹಕರಿಸಿರುತ್ತದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading