Ad Widget

ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಇದರ ಎಸ್‌.ಡಿಎಂ.ಸಿ ಗೆ “ರಾಜ್ಯಮಟ್ಟದ ಉತ್ತಮ ಎಸ್‌.ಡಿ.ಎಂ.ಸಿ ಪ್ರಶಸ್ತಿ”

ಕನ್ನಡ ಶಾಲೆ ಉಳಿಸಿ ಬೆಳೆಸಿ ಸಂಘಟನೆ(ರಿ.) ಕರ್ನಾಟಕ ಇವರು ಕೊಡಮಾಡುವ “ಉತ್ತಮ ಎಸ್‌.ಡಿ.ಎಂ‌.ಸಿ ರಾಜ್ಯ ಪ್ರಶಸ್ತಿ”ಯನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ(ಎಸ್‌.ಡಿ.ಎಂ.ಸಿ) ಪಡೆದುಕೊಂಡಿದೆ. ಫೆ.11ರಂದು ಮಂಗಳೂರಿನ ಪುರಭವನದಲ್ಲಿ ನಡೆದಂತಹ “ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ”ದ ರಾಜ್ಯ ಸಮಾವೇಶದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಎಸ್‌.ಡಿ.ಎಂ‌.ಸಿ ಕಾರ್ಯಾಧ್ಯಕ್ಷರಾದ ಹರ್ಷ ಭಟ್ ಜೋಗಿಬೆಟ್ಟು ಮತ್ತು ಕೆ.ಪಿ.ಎಸ್‌ ಬೆಳ್ಳಾರೆ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ಮಾಯಿಲಪ್ಪ ಜಿ.ಜಿ ಇವರು ಈ ಪ್ರಶಸ್ತಿಯನ್ನು ಪಡೆದುಕೊಂಡರು. ಈ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಎಸ್‌.ಡಿ.ಎಂ.ಸಿಯ ಸದಸ್ಯರುಗಳಾದ ಮುರಳಿ ತಡಗಜೆ, ವಸಂತ ಪಡ್ಪು, ನಸೀಮಾ ಪಂಜಿಗಾರು, ಪಾರ್ವತಿ ಕಿಲಂಗೋಡಿ, ಜಮಾಲ್ ಮಣಿಮಜಲು, ಶುಕಲತಾ.ಆರ್ ರೈ, ಹೇಮಾವತಿ ಮುಂಡಾಜೆ, ಸೌಮ್ಯ ಐವರ್ನಾಡು ಹಾಗೂ ಶಾಹಿನಾ ಮಣಿಮಜಲು ಇವರುಗಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕೆಪಿಎಸ್ ಬೆಳ್ಳಾರೆ ಪ್ರಾಥಮಿಕ ವಿಭಾಗದ ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿನಿ ಮರಿಯಂ ಸಫ್ವಾನ ಇವಳಿಗೆ ವಿಶೇಷ ಗಾಲಿ ಕುರ್ಚಿಯನ್ನು ಇದೇ ಸಂಘಟನೆಯವರು ನೀಡಿದರು. ಇದನ್ನು ಎಸ್‌.ಡಿ.ಎಂ.ಸಿ ಸದಸ್ಯರು ಮತ್ತು ಮುಖ್ಯೋಪಾಧ್ಯಾಯರು ಪಡೆದು ವಿದ್ಯಾರ್ಥಿನಿಗೆ ಹಸ್ತಾಂತರಿಸಲಾಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading