Ad Widget

ದ್ವಾದಶ ರಾಶಿಗಳ ದಿನ ಭವಿಷ್ಯ

ದಿನಾಂಕ:16:02:2026 ಸೋಮವಾರ
*01,🐏ಮೇಷ ರಾಶಿ🐏*
🌻,ವೃತ್ತಿಜೀವನದಲ್ಲಿ ಇಂದು ಹೊಸಮೈಲಿಗಲ್ಲುಸ್ಥಾಪಿಸುವಿರಿಮೇಲಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ. ನಿಮ್ಮ ನಾಯಕತ್ವಗುಣಕ್ಕೆ ಮನ್ನಣೆ ಸಿಗುವ ಸಮಯವಿದು,
ಶುಭ ಅಂಶ:-ಸಮಾಜದಲ್ಲಿ ಗೌರವ ಹೆಚ್ಚಳ.
ಗಮನಿಸಿ:-ಹಣಕಾಸಿನ ವಿಚಾರದಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ,
ಪರಿಹಾರ:- ಶ್ರೀ ಅನ್ನಪೂರ್ಣೇಶ್ವರಿಯ ಸ್ಮರಣೆಯನ್ನು ಮಾಡಿ,
*02,🐂ವೃಷಭ ರಾಶಿ🐂*
🌻,ದೂರದ ಪ್ರಯಾಣದ ಯೋಗವಿದೆ, ಇದುವ್ಯಾಪಾರಕ್ಕೆ ಸಂಬಂಧಿಸಿದ್ದಾಗಿರಬಹುದು. ಆಧ್ಯಾತ್ಮಿಕ ಚಿಂತನೆಗಳು ಮನಸ್ಸಿಗೆ ನೆಮ್ಮದಿ ನೀಡಲಿವೆ. ಉನ್ನತ ಶಿಕ್ಷಣ ಪಡೆಯುವವರಿಗೆ ಶುಭ ದಿನ.,
ಶುಭ ಅಂಶ:-ಭಾಗ್ಯೋದಯ ಮತ್ತು ಧಾರ್ಮಿಕ ಆಸಕ್ತಿ ಉಂಟಾಗಲಿದೆ,
ಗಮನಿಸಿ:-ಆರೋಗ್ಯದಲ್ಲಿ ಸಣ್ಣಪುಟ್ಟಏರುಪೇರಾಗಬಹುದು, ಜಾಗ್ರತೆ,
ಪರಿಹಾರ:- ಗ್ರಾಮ ದೇವತೆಗೆ ನಿಂಬೆಹಣ್ಣಿನ ದೀಪ ಬೆಳಗಿ,
*03,🧚‍♀️ಮಿಥುನ ರಾಶಿ🧚‍♀️*
🌻,ಇಂದು ನೀವು ಸ್ವಲ್ಪ ಎಚ್ಚರಿಕೆಯಿಂದ ಇರಬೇಕಾದ ದಿನ. ಕೆಲಸದಲ್ಲಿ ಅಡೆತಡೆಗಳು ಬರಬಹುದು, ಆದರೆ ನಿಮ್ಮ ಬುದ್ಧಿವಂತಿಕೆಯಿಂದ ಅದನ್ನು ನಿವಾರಿಸುವಿರಿ. ಹಳೆಯ ರೋಗಗಳು ಮರುಕಳಿಸುವ ಸಾಧ್ಯತೆಯಿದೆ,
ಶುಭ ಅಂಶ:-ಅನಿರೀಕ್ಷಿತ ಮೂಲದಿಂದ ಸಹಾಯ ಸಿಗಲಿದೆ,
ಗಮನಿಸಿ:-ಮಾತು ಮತ್ತು ಸಿಟ್ಟಿನ ಮೇಲೆ ನಿಯಂತ್ರಣವಿರಲಿ,
ಪರಿಹಾರ:-ಶ್ರೀದುರ್ಗಾದೇವಿಯ ಸ್ಮರಣೆ ಮಾಡಿ,
*04,🦀ಕಟಕ ರಾಶಿ🦀*
🌻,ವೈವಾಹಿಕ ಜೀವನದಲ್ಲಿ ಸಾಮರಸ್ಯವಿರುತ್ತದೆ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭದಾಯಕ ಒಪ್ಪಂದಗಳು ನಡೆಯಲಿವೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರುವ ಸಾಧ್ಯತೆಯಿದೆ,
ಶುಭ ಅಂಶ:-ಹೊಸ ಬಾಂಧವ್ಯಗಳ ಆರಂಭ.
ಗಮನಿಸಿ:-ಸಾರ್ವಜನಿಕ ಸ್ಥಳಗಳಲ್ಲಿ ಸಂಯಮದಿಂದ ವರ್ತಿಸಿ,
ಪರಿಹಾರ:-ತಾಯಿ ಚಾಮುಂಡೇಶ್ವರಿಯನ್ನು ಭಕ್ತಿಯಿಂದ ಪ್ರಾರ್ಥಿಸಿ,
*05,🦁ಸಿಂಹ ರಾಶಿ🦁*
🌻,ಇಂದು ನಿಮ್ಮ ಶತ್ರುಗಳ ಮೇಲೆ ನೀವು ಮೇಲುಗೈ ಸಾಧಿಸುವಿರಿ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಉತ್ತಮ ಫಲಿತಾಂಶ ಸಿಗಲಿದೆ. ಸಾಲದ ಬಾಧೆಯಿಂದ ಮುಕ್ತಿ ಪಡೆಯಲು ಹಾದಿ ಸುಗಮವಾಗಲಿದೆ,
ಶುಭ ಅಂಶ:-ಆತ್ಮವಿಶ್ವಾಸ ಮತ್ತು ಕಾರ್ಯಸಿದ್ಧಿ,
ಗಮನಿಸಿ:-ಅತಿಯಾದ ಕೆಲಸದ ಒತ್ತಡದಿಂದ ಸುಸ್ತು ಎನಿಸಬಹುದು,
ಪರಿಹಾರ:-ಕುಲದೇವರ ಪ್ರಾರ್ಥನೆ ಮಾಡಿ,
*06,👩‍🦰 ಕನ್ಯಾ ರಾಶಿ👩‍🦰*
🌻,ಸೃಜನಶೀಲ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಇದು ಸಕಾಲ.ಮಕ್ಕಳಿಂದಸಂತೋಷದ ಸುದ್ದಿ ಕೇಳುವಿರಿ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಆಲೋಚನೆ ಇದ್ದರೆ ಇಂದುಲಾಭದಾಯಕವಾಗಿರ
ಬಹುದು,
ಶುಭ ಅಂಶ:-ಪ್ರೇಮ ಜೀವನದಲ್ಲಿ ಯಶಸ್ಸು.
ಗಮನಿಸಿ:-ಮಕ್ಕಳ ನಡವಳಿಕೆಯ ಮೇಲೆ ನಿಗಾ ಇರಲಿ,
ಪರಿಹಾರ:- ವಿಷ್ಣು ಸಹಸ್ರನಾಮಪಠಿಸಿ,
*07,⚖️ತುಲಾ ರಾಶಿ⚖️*
🌻,ಮನೆಯಲ್ಲಿ ಸುಖ-ಸಂತೋಷದ ವಾತಾವರಣ ಇರಲಿದೆ. ಭೂಮಿ ಅಥವಾ ವಾಹನ ಖರೀದಿ ಮಾಡುವ ಯೋಗವಿದೆ. ತಾಯಿಯ ಕಡೆಯಿಂದ ವಿಶೇಷ ಬೆಂಬಲ ಮತ್ತು ಪ್ರೀತಿ ದೊರೆಯಲಿದೆ.
ಶುಭಅಂಶ:-ಆಸ್ತಿವ್ಯವಹಾರದಲ್ಲಿ ಲಾಭ,
ಗಮನಿಸಿ:-ಮಾನಸಿಕವಾಗಿ ಸ್ವಲ್ಪ ಗೊಂದಲವಿರಬಹುದು, ಧ್ಯಾನ ಮಾಡಿ,
ಪರಿಹಾರ:-ಲಲಿತಾ ಸಹಸ್ರನಾಮ ಪಠಿಸಿ,
*08,🦂ವೃಶ್ಚಿಕ ರಾಶಿ🦂*
🌻,ನಿಮ್ಮ ಸಾಹಸ ಮನೋಭಾವ ಇಂದು ಕೆಲಸದಲ್ಲಿಜಯತಂದುಕೊಡಲಿದೆ.ಸಹೋದರಸಹೋದರಿಯ.ರೊಂದಿಗೆ ಇದ್ದ ಭಿನ್ನಾಭಿಪ್ರಾಯಗಳು ದೂರವಾಗಲಿವೆ. ಕಿರು ಪ್ರಯಾಣವು ಮನಸ್ಸಿಗೆ ಉಲ್ಲಾಸ ನೀಡಲಿದೆ.
ಶುಭ ಅಂಶ:-ಧೈರ್ಯ ಮತ್ತು ಸಂವಹನ ಕಲೆ,
ಗಮನಿಸಿ:-ನೆರೆಹೊರೆಯವರೊಂದಿಗೆ ವಾದಕ್ಕೆ ಇಳಿಯಬೇಡಿ.
ಪರಿಹಾರ:- ಶ್ರೀ ದುರ್ಗಾ ಸ್ತೋತ್ರ ಪಠಿಸಿ
*09,🏹ಧನಸ್ಸು ರಾಶಿ 🏹*
🌻,ಆರ್ಥಿಕವಾಗಿ ಇಂದು ಅತ್ಯಂತ ಶುಭ ದಿನ. ಸ್ಥಗಿತಗೊಂಡಿದ್ದ ಹಣ ನಿಮ್ಮ ಕೈ ಸೇರಲಿದೆ. ಕುಟುಂಬದ ಸದಸ್ಯರೊಂದಿಗೆಔತಣಕೂಟದಲ್ಲಿ ಭಾಗವಹಿಸುವಿರಿ. ಮಾತು ಮಧುರವಾಗಿರಲಿ.
ಶುಭ ಅಂಶ:-ಧನ ಲಾಭ ಮತ್ತು ಕುಟುಂಬ ಸೌಖ್ಯ,
ಗಮನಿಸಿ:-ಕಣ್ಣಿನ ಸಮಸ್ಯೆಯ ಬಗ್ಗೆ ಎಚ್ಚರವಿರಲಿ,
ಪರಿಹಾರ:-ಕಾಳಿಕಾದೇವಿಯ ಸ್ಮರಣೆ ಮಾಡಿ,
*10🐊ಮಕರ ರಾಶಿ🐊*
🌻,ಇಂದು ನಿಮ್ಮ ವ್ಯಕ್ತಿತ್ವದಲ್ಲಿ ಹೊಸ ಕಳೆ ಇರಲಿದೆ. ಹೊಸ ಉದ್ಯೋಗಅಥವಾಜವಾಬ್ದಾರಿ ವಹಿಸಿಕೊಳ್ಳಲು ಸಿದ್ಧರಾಗಿರಿ. ಸಮಾಜದ ಗಣ್ಯ ವ್ಯಕ್ತಿಗಳ ಭೇಟಿಯಾಗುವಸಾಧ್ಯತೆಯಿದೆ,
ಶುಭ ಅಂಶ:-ಮಾನಸಿಕ ಪ್ರಫುಲ್ಲತೆ.
ಗಮನಿಸಿ:-ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ,
ಪರಿಹಾರ:- ಬಡವರಿಗೆ ಅನ್ನದಾನ ಮಾಡಿರಿ,
*11,⚱️ಕುಂಭ ರಾಶಿ⚱️*
🌻,ಅನಗತ್ಯ ಖರ್ಚುಗಳು ಹೆಚ್ಚಾಗಬಹುದು, ಬಜೆಟ್ ಬಗ್ಗೆ ಗಮನವಿರಲಿ. ದೂರದ ಊರಿನಿಂದ ಅಶುಭ ವಾರ್ತೆ ಕೇಳುವ ಸಾಧ್ಯತೆಯಿದೆ. ಆಧ್ಯಾತ್ಮದ ಕಡೆಗೆ ಹೆಚ್ಚು ಒಲವು ತೋರುವಿರಿ.
ಶುಭ ಅಂಶ:-ದಾನ-ಧರ್ಮ ಮಾಡುವ ಇಚ್ಛೆ ಉಂಟಾಗುತ್ತದೆ,
ಗಮನಿಸಿ:-ನಿದ್ದೆಯ ಕೊರತೆಯಿಂದ ಕಿರಿಕಿರಿ ಉಂಟಾಗಬಹುದು,
ಪರಿಹಾರ:- ಉತ್ತಮ ಫಲಕ್ಕಾಗಿ ಸುಬ್ರಹ್ಮಣ್ಯ ಸ್ವಾಮಿಯನ್ನು ದರ್ಶನ ಮಾಡಿ,
*12,🐋ಮೀನ ರಾಶಿ🐋*
🌻,ನಿಮ್ಮ ಇಷ್ಟಾರ್ಥಗಳು ಈಡೇರುವ ದಿನವಿದು. ಆರ್ಥಿಕ ಮೂಲಗಳು ವಿಸ್ತಾರಗೊಳ್ಳಲಿವೆ. ಹಿರಿಯ ಅಧಿಕಾರಿಗಳಿಂದ ಅಥವಾ ಹಿರಿಯ ಸಹೋದರರಿಂದ ಮಾರ್ಗದರ್ಶನ ಸಿಗಲಿದೆ.
ಶುಭ ಅಂಶ:-ಹಠಾತ್ ಅದೃಷ್ಟ ಮತ್ತು ಲಾಭ,
ಗಮನಿಸಿ
ಪರಿಹಾರ:-ಇಂದುಸೋಮವಾರ. ವಾಗಿರುವುದರಿಂದ ಬಿಳಿ ಬಣ್ಣದ ವಸ್ತ್ರ ಧರಿಸುವುದು ಅಥವಾ ಶಿವ ಮಂತ್ರವನ್ನು
ಪಠಿಸುವುದು ಹೆಚ್ಚಿನ ಶುಭ ಫಲಗಳನ್ನು ನೀಡುತ್ತದೆ,

📝ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197


. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading