Ad Widget

ಆಲೆಟ್ಟಿ : “ಶಿವ ಶಿವಾ ಸದಾಶಿವ” ಕನ್ನಡ ಭಕ್ತಿಗೀತೆ ಬಿಡುಗಡೆ

ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದ ಕನ್ನಡ ಭಕ್ತಿಗೀತೆ “ಶಿವ ಶಿವಾ ಸದಾಶಿವ” ಎಂಬ ಕನ್ನಡ ಭಕ್ತಿಗೀತೆಯು ಶ್ರೀ ಕ್ಷೇತ್ರದಲ್ಲಿ ಫೆಬ್ರವರಿ 13 ರಂದು ಜಾತ್ರೋತ್ಸವ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡಿತು. ಈ ಭಕ್ತಿಗೀತೆಯನ್ನು ಗುರುಪ್ರಸಾದ್ ರೈ ಮೊರಂಗಲ್ಲು ಬಿಡುಗಡೆಗೊಳಿಸಿದರು.

. . . . . . . . .

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಗಿರೀಶ್ ನಾರ್ಕೋಡು, ಶ್ರೀಮತಿ ನಳಿನಾಕ್ಷಿ ಕಲ್ಮಡ್ಕ, ಶ್ರೀಮತಿ ವೀಣಾ ವಸಂತ, ಜಯಪ್ರಕಾಶ್ ಕುಂಚಡ್ಕ, ತೀರ್ಥ ಕುಮಾರ್ ಕುಂಚಡ್ಕ, ಶರತ್ ಕುಮಾರ್ ಹಾಗೂ ಇನ್ನಿತರ ಗಣ್ಯರ ಜೊತೆಗೆ ಭಕ್ತಿಗೀತೆ ತಂಡದ ಪರವಾಗಿ ಜನಾರ್ಧನ ಆಚಾರ್ಯ ಕಡ್ಲಾರು,ನಿರಂಜನ್ ಕಡ್ಲಾರು, ಅಂಕಿತಾ ಆಚಾರ್ಯ ಕಡ್ಲಾರು ಉಪಸ್ಥಿತರಿದ್ದರು.

. . . . . . .

“ಶಿವ ಶಿವಾ ಸದಾಶಿವ” ಎಂಬ ಭಕ್ತಿ ಗೀತೆಯನ್ನು ನಿರಂಜನ್ ಕಡ್ಲಾರು ರಚಿಸಿ ನಿರ್ವಹಣೆ ಮಾಡಿದ್ದು, ಮಿಥುನ್ ರಾಜ್ ವಿದ್ಯಾಪುರ ಇವರ ಸಂಗೀತಕ್ಕೆ, ಅಂಕಿತ ಆಚಾರ್ಯ ಕಡ್ಲಾರು ಇವರ ಗಾಯನವಿದೆ. ಭವಿತ್ ಪೂಜಾರಿಯವರ ಸಂಕಲನವಿದೆ. ಈ ಭಕ್ತಿಗೀತೆಯನ್ನು NA Times ಯೂಟ್ಯೂಬ್ ಚಾನಲ್ ನಲ್ಲಿ ವೀಕ್ಷಿಸಬಹುದು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading