Ad Widget

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನೌಕರರ ಕ್ರಿಕೆಟ್ ಪಂದ್ಯಾಟ ಉದ್ಘಾಟನೆ

ಸುಬ್ರಹ್ಮಣ್ಯ ಫೆಬ್ರವರಿ 13 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನೌಕರರ “ಟೆಂಪಲ್ ಸ್ಟಾಫ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ”ವು ಶುಕ್ರವಾರ  ಕುಮಾರಧಾರ ನದಿ ತಟದ ವಿಶಾಲವಾದ ಮೈದಾನದಲ್ಲಿ ನಡೆಯಿತು.

ಮುಂಜಾನೆ ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಿದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗೊಂಡಿ ಮಾತನಾಡುತ್ತಾ‌ “ಇಂದು ಈ ವಿಶಾಲವಾದ ಪರಿಸರದಲ್ಲಿ ನಡೆಯುತ್ತಿರುವ   ಕ್ರಿಕೆಟ್ ಕ್ರೀಡೆಯು ಸ್ನೇಹ, ಒಗ್ಗಟ್ಟು, ಆತ್ಮೀಯತೆ, ಬಾಂಧವ್ಯದೊಂದಿಗೆ ಎಲ್ಲಾ ದೇವಳದ ಕ್ರೀಡಾ ನೌಕರರನ್ನು  ಒಂದುಗೂಡಿಸಿ ಸೌಹಾರ್ದತೆಯನ್ನು  ಮೆರೆಯುವ ಪಂದ್ಯಾಟವಾಗಿದೆ. 500ಕ್ಕೂ ಮಿಕ್ಕಿ ನೌಕರರನ್ನು ಹೊಂದಿರುವ ಶ್ರೀ ದೇವಳದಲ್ಲಿ ದಿನನಿತ್ಯ ದೂರದ ಊರುಗಳಿಂದ ಬರುವ ಭಕ್ತಾದಿಗಳನ್ನು ನಿಯಂತ್ರಿಸುವುದು ಹಾಗೂ ಸುಗಮ ದರ್ಶನ, ಪ್ರಸಾದ  ಸೇವೆಯನ್ನು ಮಾಡುವಲ್ಲಿ ಶ್ರಮಿಸುತ್ತಿರುವುದು ಹಾಗೂ ಒತ್ತಡದಿಂದ ಕಾರ್ಯನಿರ್ವಹಿಸುತಿದ್ದು, ಈ ದಿನ ಶುದ್ಧ ಏಕಾದಶಿ ಸ್ವಲ್ಪ ಬಿಡುವಿದ್ದು ಆರಾಮವಾಗಿ ಪಂದ್ಯಾಟವನ್ನು ಆಡಲು ಹಾಗೂ ಆನಂದಿಸಲು ಸಮಯ ಒದಗಿ ಬಂದಿದೆ. ಎಲ್ಲಾ ನೌಕರರು ಸೌಹಾರ್ದತೆಯಿಂದ ಪಂದ್ಯಾಟವನ್ನು ಆಡಬೇಕು” ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಏಸುರಾಜ್, ಮಾಸ್ಟರ್ ಪ್ಲಾನ್ ಸಮಿತಿಯ ಲೋಲಾಕ್ಷ, ಕುಲ್ಕುಂದ ಬಸವೇಶ್ವರ ದೇವಸ್ಥಾನದ ಅಧ್ಯಕ್ಷ ಗಿರಿಧರ ಸ್ಕಂದ, ಮೆಸ್ಕಾಂ ಸಹಾಯಕ ಇಂಜಿನಿಯರ್ ಹರಿಕೃಷ್ಣ  ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಕ್ರಿಕೆಟ್ ಪಂದ್ಯಾಟದಲ್ಲಿ ಒಟ್ಟು ಏಳು ತಂಡಗಳಾದ ಚಾಂಪಿಯನ್ ಆರ್‌ಸಿಬಿ, ಟೀಮ್ ಕಾರ್ತಿಕೇಯ, ರೋರಿಂಗ್ ಸಿಕ್ಸರ್ ಕುಕ್ಕೆ, ರಿಯಲ್ ಫೈಟರ್ಸ್ ಕುಕ್ಕೆ, ಕುಕ್ಕೆ ರಾಕರ್ಸ್, ಕುಕ್ಕೆ ಶ್ರೀ ಸೂಪರ್ ಕಿಂಗ್ಸ್ ತಂಡಗಳು ಭಾಗವಹಿಸಿದ್ದವು.

ಪಂದ್ಯಾಟದಲ್ಲಿ ವಿಜೇತರಿಗೆ ಪ್ರಥಮ ಬಹುಮಾನವಾಗಿ ಹತ್ತು ಸಾವಿರ ಹಾಗೂ ಟೆಂಪಲ್ ಸ್ಟಾಫ್ ಪ್ರೀಮಿಯರ್ ಲೀಗ್ ಟ್ರೋಪಿ, ದ್ವಿತೀಯ ಸ್ಥಾನಕ್ಕೆ ರೂ 7,000 ಹಾಗೂ ಟೆಂಪೆಲ್ ಸ್ಟಾಪ್ ಪ್ರೀಮಿಯರ್ ಲೀಗ್ ಟ್ರೋಪಿ ಬಹುಮಾನ ಇರುವುದಾಗಿ ಸಂಕಟಕರು ತಿಳಿಸಿರುತ್ತಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading