Ad Widget

ದ್ವಾದಶ ರಾಶಿಗಳ ದಿನ ಭವಿಷ್ಯ


ದಿನಾಂಕ 13.02.2026
*01,🐏ಮೇಷರಾಶಿ🐏*
🌻,ನಿಮ್ಮ ಕೋಪವೂ ಹೆಚ್ಚು ಸಮಸ್ಯೆಗಳನ್ನು ಉಂಟುಮಾಡಬಹುದು. ಬಂಧುಮಿತ್ರರೊಂದಿಗೆ ಜಗಳಗಳಾಗುವ ಸಂಭವವಿದೆ, ವಿದ್ಯಾರ್ಥಿಗಳು ಅಧ್ಯಯನದ ವಿಚಾರದಲ್ಲಿ ಬಹಳಷ್ಟು ಪ್ರಯತ್ನ ಪಡಬೇಕಾಗಬಹುದು. ಉದ್ಯೋಗದ ವಿಚಾರದಲ್ಲಿ ನಿಮ್ಮ ಮೇಲಾಧಿಕಾರಿಗಳ ಸಹಾಯ ಮತ್ತು ಸಲಹೆ ಪಡೆದು ಕೆಲಸ ಮಾಡುವುದು ಒಳ್ಳೆಯದು,
ಪರಿಹಾರ :-ಶ್ರೀ ಕೃಷ್ಣನನ್ನು ಆರಾಧಿಸಿ ಉತ್ತಮ ಫಲ ಸಿಗುವುದು,
*02,🐂ವೃಷಭರಾಶಿ🐂*
🌻,ಈ ದಿನ ನೀವು ಮಾಡುವ ಕೆಲಸ ಕಾರ್ಯಗಳು ಕೆಲವು ತೊಂದರೆಗಳಿಂದ ಕೂಡಿರಬಹುದು, ಈ ಸಮಯದಲ್ಲಿ ಉದ್ಯೋಗ ಸ್ಥಳದಲ್ಲಿ ನಿಮ್ಮ ಮೇಲೆ ನಕಾರಾತ್ಮಕ ಮಾತುಗಳು ಕೇಳಿ ಬರಬಹುದು,ಹೆಣ್ಣು ಮಕ್ಕಳು ಅಪರಿಚಿತ ರೋಡನೆ ವ್ಯವಹರಿಸುವಾಗ ಸ್ವಲ್ಪ ಜಾಗೃತೆವಹಿಸಿ,
ಪರಿಹಾರ:-ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯನ್ನು ಪೂಜಿಸಿ,
*03,🧚‍♀️ಮಿಥುನ ರಾಶಿ🧚‍♀️*
🌻,ಈ ದಿನ ಬಂಧು ಮಿತ್ರರು ಹಾಗು ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಬರುವ ಸಾಧ್ಯತೆ ಇದೆ. ನಿರ್ಮಾಣ ಕಾರ್ಯಗಳನ್ನು ಮಾಡುವವರಿಗೆ ಸ್ವಲ್ಪದರ ಮಟ್ಟಿಗೆ ಶುಭ ಫಲಗಳು ಲಭಿಸುತ್ತವೆ. ನಟನೆ, ಹಾಸ್ಯ, ಪ್ರವಾಸ, ಮತ್ತು ಔಷಧಿ ವ್ಯಾಪಾರಿಗಳಿಗೆ ತುಸು ಲಾಭದಾಯಕವಾಗಿದೆ,
ಪರಿಹಾರ:-ದುರ್ಗಾ ದೇವಿಯ ದರ್ಶನ ಪೂಜೆ ಮಾಡಿ ಶುಭವಾಗುದು,
*04,🦀ಕಟಕ ರಾಶಿ🦀*
🌻. ಪಾಲುದಾರರು ಹಾಗು ಸಹೋದ್ಯೋಗಿಗಳೊಂದಿಗೆ ಯಾವುದೇ ರೀತಿಯ ಜಗಳಗಳನ್ನು ಮಾಡಿಕೊಳ್ಳಬೇಡಿ. ಯಾವುದಾದರು ಒಂದು ಹೊಸ ವಸ್ತುವನ್ನು ಕೊಳ್ಳುವ ಅಥವಾ ಅದಕ್ಕೆ ಹಣ ಖರ್ಚು ಮಾಡುವ ಯೋಗ ನಿಮಗಿದೆ,
ಪರಿಹಾರ:ಮಿಶ್ರ ವರ್ಣದ ವಸ್ತ್ರಗಳನ್ನು ಈ ದಿನ ಧಾರಣೆ ಮಾಡುವದು ಬೇಡ,
*05,🦁ಸಿಂಹ ರಾಶಿ🦁*
🌻,ಇಂದು ನವ್ಯಪಾರ ವ್ಯವಹಾರ ಅಥವಾ ಕೆಲಸದ ಸ್ಥಳಗಳಲ್ಲಿ ಜಾಗುರೂಕರಾಗಿರಿ, ಉತ್ತಮ ಆಹಾರ ಸೇವನೆಯ ಕಡೆ ಗಮನ ಹರಿಸಿ ಉತ್ತಮ ಇಲ್ಲವಾದರೆ ಉದರ ಸಂಬಂದಿ ತೊಂದರೆಗಳು ಕಾಡಬಹುದು, ಬಟ್ಟೆ ವ್ಯಾಪಾರ ಮಾಡುವವರಿಗೆ ಈ ದಿನ ವಿಶೇಷವಾದ ಲಾಭವಾಗಲಿದೆ,
ಪರಿಹಾರ:-ಶ್ರೀವಿಷ್ಣುಸಹಸ್ರನಾಮಪಾರಾಯಣ ಮಾಡಿ,
*06,👩‍🦰ಕನ್ಯಾ ರಾಶಿ👩‍🦰*
🌻ನಿಮ್ಮ ಮಕ್ಕಳ ಆರೋಗ್ಯದ ಕಡೆ ಗಮನಹರಿಸಿ. ವಾಹನ ಚಾಲನೆ ಮಾಡುವುದು ಅಥವಾ ದೂರ ಪ್ರಯಾಣ ಮಾಡುವುದು ಸೂಕ್ತವಲ್ಲ. ಸಹೋದ್ಯೋಗಿಗಳೊಡನೆ ಮನಸ್ತಾಪ ಬರಬಹುದು ಶಾಂತ ಸ್ವಭಾವದಿಂದ ಎಲ್ಲವನ್ನು ನಿಭಾಯಿಸುವುದು ಒಳ್ಳೆಯದು. ಯಾವುದೇ ರೀತಿಯ ಹೊಸ ಕೆಲಸಗಳನ್ನು ಮಾಡುವುದು ಬೇಡ ಮುಂದೂಡುವುದು ಉತ್ತಮ,
ಪರಿಹಾರ:-ತಾಯಿ ದುರ್ಗೆಯನ್ನು ಮನಸಾಸ್ಮರಿಸಿ ಶುಭವಾಗುವುದು,
*07,⚖️ತುಲಾ ರಾಶಿ⚖️*
🌻,ಈ ದಿನ ನಿಮಗೆ ಶುಭ ಸುದ್ದಿಯೊಂದಿಗೆ ಆರಂಭವಾಗಲಿದೆ ನಿಮ್ಮ ಸಕಾರಾತ್ಮಕ ಚಿಂತನೆಯು ನಿಮ್ಮ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸುತ್ತದೆ. ನಿಮ್ಮ ಮುಂದಿನ ಕನಸುಗಳ ಬಗ್ಗೆ ಯಾರಿಗೂ ಹೇಳಬೇಡಿ.
ಪರಿಹಾರ:-ಈ ದಿನ ಯಾರಾದರೂ ನಿರ್ಗತಿಕರಿಗೆ ಸಹಾಯ ಮಾಡಿ,
*08,🦂ವೃಶ್ಚಿಕ ರಾಶಿ🦂*
🌻,ಈ ದಿನ ನಿಮಗೆ ನಿಮ್ಮ ಗುರುಗಳ ದರ್ಶನ ಮತ್ತು ಅವರ ಮಾರ್ಗದರ್ಶನದಿಂದ ಮುಂದಿನ ಕೆಲಸ ಕಾರ್ಯಗಳಿಗೆ ಸಂಬಂಧಿಸಿದ ಹೊಸ ಮಾರ್ಗಗಳನ್ನು ಕಂಡುಕೊಳ್ಳಲು ಸಹಾಯವಾಗಬಹುದು, ಕುಟುಂಬದಲ್ಲಿ ಜಗಳಗಳಾಗುವ ಸಂಭವವಿದೆ, ಈ ದಿನ ಕುಟುಂಬದ ವಾದ ವಿವಾದಗಳಿಗೆ ತಲೆಕೆಡಿಸಿಕೊಳ್ಳದೆ ಇರುವುದು ಒಳ್ಳೆಯದು, ಹಲ್ಲು ಮತ್ತು ಬಾಯಿಗೆ ಸಂಬಂಧಿಸಿದ ತೊಂದರೆಗಳಾಗಬಹುದು ವೈದ್ಯರ ಸಲಹೆ ಪಡೆಯಿರಿ,
ಪರಿಹಾರ:-ಭಗವಾನ್ ಸೂರ್ಯನ ದೇವನ ಪ್ರಾರ್ಥನೆ ಮಾಡಿ,
*09,🏹ಧನಸ್ಸು ರಾಶಿ🏹*
🌻,ಈ ದಿನ ನಿಮಗೆ ಶುಭವಾಗಿದೆ ಹೊಸ ವಾಹನ ಮನೆ ಖರೀದಿಯ ವಿಚಾರವಾಗಿ ಎಲ್ಲವೂ ಸಕಾರಾತ್ಮಕವಾಗಿ ನಡೆಯಲಿವೆ, ಅಥವಾ ಮನೆಗೆ ಸಂಬಂದಿಸಿದ ವಸ್ತುಗಳನ್ನು ಖರೀದಿ ಮಾಡಬಹುದು. ನಿಮ್ಮ ವಿರೋಧಿಗಳು ನಿಮ್ಮ ದಿಕ್ಕು ಬದಲಿಸುವ ಕೆಲಸ ಮಾಡಬಹುದು, ಆದರೆ ನೀವು ಸಹನೆಯಿಂದ ಆಲೋಚನೆ ಮಾಡಿ ನಿಮ್ಮ ವ್ಯವಹಾರವನ್ನು ಮಾಡಿ,
ಪರಿಹಾರ:-ಗಣಪತಿಯ ಆರಾಧನೆ ಮಾಡಿ,
*10,🐊ಮಕರ ರಾಶಿ🐊*
🌻,ಇಂದು ನೀವು ಅನವಶ್ಯಕವಾಗಿ ಮಾತನಾಡುವುದರಿಂದ ಸಮಸ್ಯೆಗೆ ಸಿಲುಕುವಿರಿ, ಮಾತನಾಡುವಾಗ ನಕಾರಾತ್ಮಕ ಪದಗಳನ್ನು ಬಳಸಬೇಡಿ, ನಿಮ್ಮ ಮಕ್ಕಳ ಕಡೆ ಸ್ವಲ್ಪ ಕಾಳಜಿ ವಹಿಸಿ, ಕುಟುಂಬದ ಜೊತೆ ಸಮಯವನ್ನು ಕಲಿಯುವುದು ಉತ್ತಮ,
ಪರಿಹಾರ:-ಹನುಮಾನ್ ಚಾಲೀಸ ಓದಿ,
*11,⚱️ಕುಂಭ ರಾಶಿ⚱️*
🌻,ಈ ದಿನ ಯಾವುದೇ ಹಣಕಾಸಿನ ವ್ಯವಹಾರನ್ನು ಮಾಡಬೇಡಿ. ಸಾಲ ಕೊಡುವುದು ತರುವುದು ಬೇಡ. ನಿಮ್ಮ ಯಾವುದಾದರು ಒಂದು ವಸ್ತುವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. , ಶುಭ ಕಾರ್ಯಗಳು ಮತ್ತು ಧಾರ್ಮಿಕ ಕಾರ್ಯಗಳನ್ನು ಮುಂದೂಡುವದು ಉತ್ತಮ, ಪರಿಹಾರ:-ಲಲಿತಸಹಸ್ರನಾಮಪಾರಾಯಣ ಮಾಡಿ ಶುಭವಾಗುವುದು,
*12,🐬ಮೀನ ರಾಶಿ🐬*
🌻,ಈ ದಿನ ನೀವು ಕುಟುಂಬ ಸಮೇತ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ, ಇಂದು ನೀವು ವಿಶೇಷ ಸ್ಥಾನಮಾನವನ್ನು ಪಡೆಯಬಹುದು ಇದರಿಂದ ಮಾನಸಿಕ ತೃಪ್ತಿಯನ್ನು ಪಡೆಯಬಹುದು, ಗುರು ಹಿರಿಯರ ಮುಂದೆ ಮಾತನಾಡುವಾಗ ವಾದ ಮಾಡುವುದು ಬೇಡ, ಎಲ್ಲವೂ ಉತ್ತಮವಾಗಿದ್ದರೂ ಸಹ ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚು ಸವಾಲುಗಳನ್ನು ಎದುರಿಸಬೇಕಾಗಬಹುದು,
ಪರಿಹಾರ:-ಶಿವ ಲಿಂಗವನ್ನು ಪೂಜಿಸಿ ಹಾಗುಪ್ರಾರ್ಥಿಸಿ,,
📝ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading