Ad Widget

ಜೆಸಿಐ ಉಡುಪಿ ಸಿಟಿ ವತಿಯಿಂದ ಕೃಷ್ಣ ಅಚ್ರಪ್ಪಾಡಿಯವರಿಗೆ ಸನ್ಮಾನ

ಉಡುಪಿ ಸಿಟಿಯ ಜೆಸಿಐ ವತಿಯಿಂದ ನಡೆದ ಟಾಪ್ ಟ್ರೈನರ್ಸ್ ಟ್ರೈನಿಂಗ್ ನಲ್ಲಿ ಭಾಗವಹಿಸಿದ್ದ ಕೃಷ್ಣ ಅಚ್ರಪ್ಪಾಡಿಯವರ ಸಾಧನೆಯನ್ನು ಗುರುತಿಸಿ ಜ.31 ರಂದು ಸನ್ಮಾನ ಮಾಡಲಾಯಿತು.

ಕೃಷ್ಣ ಅಚ್ರಪ್ಪಾಡಿಯವರು ವಿದ್ಯುತ್ ಹರಿಯುವಾಗ  ಬರಿಗೈಯಿಂದ ನೇರವಾಗಿ ಮುಟ್ಟಿದಾಗ ಅವರ ಶರೀರವೆಲ್ಲಾ ವಿದ್ಯುತ್ ಮಯವಾಗುತ್ತದೆ. ಅವರ ಶರೀರದ ಯಾವುದೇ ಭಾಗಕ್ಕೆ ಟೆಸ್ಟರ್ ತಾಗಿಸಿದರೂ ಟೆಸ್ಟರ್ ಉರಿಯುತ್ತದೆ. ಆದರೆ ಇವರಿಗೆ ಏನೂ ಆಗುವುದಿಲ್ಲ(ಹಾಗಂತ ನೀವು ಯಾರೂ ಹಾಗೆ ಮುಟ್ಟಲು ಪ್ರಯತ್ನಿಸಬೇಡಿ.ಇದು ಅವರ ಹಲವು ವರುಷಗಳ ಕಠಿಣ ಪ್ರಯತ್ನದ ಫಲ)ಅಲ್ಲದೆ  ಕಥೆ, ಕವನಗಳನ್ನು ಬರೆಯುತ್ತಿರುವ ಇವರು ಉತ್ತಮ ಛಾಯಾಗ್ರಾಹಕರಾಗಿದ್ದಾರೆ. ಹಾಗೂ ಇವರ ಇತರ ಸಾಧನೆಗಳನ್ನು ಮತ್ತು ಸಾಹಸಗಳನ್ನು ಗುರುತಿಸಿ ಸನ್ಮಾನಿಸಲಾಗಿದೆ.

ಈ ಸನ್ಮಾನ ಕಾರ್ಯಕ್ರಮದಲ್ಲಿ ಸಭಾಧ್ಯಕ್ಷತೆಯನ್ನು ಉಡುಪಿ ಸಿಟಿ ಜೆಸಿಐ ಅಧ್ಯಕ್ಷರಾದ ಪಲ್ಲವಿ ಕೊಡಗು, ವೇದಿಕೆಯಲ್ಲಿ ಉದ್ಘಾಟಕರಾದ ತನುಜಾ ಮಾಬೆನ್, ಸಂಪನ್ಮೂಲ ವ್ಯಕ್ತಿಗಳಾದ ಟಿ.ವಿಶ್ವನಾಥ್, ಐಪಿಪಿ ಕಿರಣ್ ಯು.ಭಟ್ ಮತ್ತು ಪ್ರಾಜೆಕ್ಟ್ ಡೈರೆಕ್ಟರ್ ಸೃಜನ್ ಯು.ಶೆಟ್ಟಿ, ಜೆಸಿಐ ರಾಷ್ಟ್ರೀಯ ಮಟ್ಟದ ತರಬೇತುದಾರರಾದ ಟಿ.ವಿಶ್ವನಾಥ್ ರವರು ನಾಯಕತ್ವದ ಬಗ್ಗೆ ವಿಶೇಷವಾದ ತರಬೇತಿ ನೀಡಿದರು.

ಸಮಾರೋಪ ಕಾರ್ಯಕ್ರಮದಲ್ಲಿ ಕಲಾವಿದ ಕೃಷ್ಣ ಅಚ್ರಪ್ಪಾಡಿ ಮತ್ತು ಟಿ.ವಿಶ್ವನಾಥ್ ಅವರಿಗೆ ಸನ್ಮಾನ ಮಾಡಲಾಯಿತು.

ಸಭಾಧ್ಯಕ್ಷತೆಯನ್ನು ಜೆಸಿಐ ಉಡುಪಿ ಘಟಕಾಧ್ಯಕ್ಷರು ವಹಿಸಿದ್ದರು.

ಚಿತ್ರ ಕಲಾವಿದ ಮತ್ತುಪ್ರಾಜೆಕ್ಟ್ ಇಂಚಾರ್ಜ್ ಜೆಸಿ ಬಾಸುಮ ಕೊಡಗು, ತರಬೇತಿ ವಿಭಾಗದ ಉಪಾಧ್ಯಕ್ಷೆ ಸ್ಮಿತಾ ಪಾಟೀಲ್, ಜೆಜೆಸಿ ಅಧ್ಯಕ್ಷ ಶ್ರೀರಾಜ್ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading