Ad Widget

ಕುಕ್ಕೆ ಸುಬ್ರಹ್ಮಣ್ಯ : ದೇವಸ್ಥಾನದ ಆಡಳಿತಕ್ಕೊಳಪಟ್ಟ ಪ್ರೌಢಶಾಲೆ ಹಾಗೂ ಕಾಲೇಜುಗಳ ಬೋಧಕ-ಬೋಧಕೇತರ ಸಿಬ್ಬಂದಿಗಳಿಗೆ ಎಂಟು ತಿಂಗಳುಗಳಿಂದ ಪಾವತಿಯಾಗದ ವೇತನ ; ವೇತನ ಪಾವತಿಸುವಂತೆ ಆಗ್ರಹಿಸಿ ಶಿಕ್ಷಣ ಸಂಸ್ಥೆಯ ಮುಂದೆ ಮೌನ ಪ್ರತಿಭಟನೆ ; ಮನವಿ ಸ್ವೀಕರಿಸಿದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಹಾಗೂ ಕಾರ್ಯನಿರ್ವಹಣಾಧಿಕಾರಿಗಳು

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಕ್ಕೊಳಪಟ್ಟಿರುವ
ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಮತ್ತು ಪದವಿ ಕಾಲೇಜಿನ ಬೋಧಕ ಹಾಗೂ ಬೋಧಕೇತರ
ಸಿಬ್ಬಂದಿಗಳಿಗೆ ಕಳೆದ ಎಂಟು ತಿಂಗಳಿನಿಂದ ಬಾಕಿಯಾದ
ವೇತನ ಪಾವತಿಸುವಂತೆ ಆಗ್ರಹಿಸಿ ಪೋಷಕ ವರ್ಗ ಮತ್ತು ಕಾಲೇಜು ಅಭಿಮಾನಿಗಳಿಂದ ಮೌನ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯ ಉದ್ದೇಶ : “ವೇತನ ನೀಡದಿರುವುದು ಮತ್ತು ಇದರ ಬಗ್ಗೆ ಪದೇ ಪದೆ ಪ್ರಯತ್ನ ಪಟ್ಟರೂ ಸಿಬ್ಬಂದಿಗಳಿಗೆ ಎಂಟು ತಿಂಗಳಿನಿಂದ ವೇತನ ನೀಡಿಲ್ಲ. ಇದರ ಬಗ್ಗೆ ಆಡಳಿತ ಮಂಡಳಿಯವರು ಘಟನೋತ್ತರ ಮಂಜೂರಾತಿಯನ್ನು ಮಾಡಿಕೊಳ್ಳುವ ಮತ್ತು ಸಿಬ್ಬಂಧಿಗಳ ವೇತನವನ್ನು ನೀಡಿ ಎಂದು ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಬಹುತೇಕ ಸದಸ್ಯರು ಸಮ್ಮತಿಸಿದ್ದಾರೆ. ಆದರೆ ಇದಕ್ಕೆ ಕಾರ್ಯನಿರ್ವಾಹಣಾಧಿಕಾರಿ ಬಾಕಿ ಇರುವ ವೇತನವನ್ನು ಪಾವತಿಸಲು ತಯಾರಿಲ್ಲದಿರುವುದು ಹಾಗೂ ಇವರು ಆಯುಕ್ತರಿಗೆ ಪ್ರಸ್ತಾವನೆಯನ್ನು ಕಳುಹಿಸಿದ್ದು, ಆಯುಕ್ತರು ಸರಕಾರಕ್ಕೆ ಕಳುಹಿಸಿದ್ದು ಆಯುಕ್ತರ ಅಧಿಕಾರವನ್ನು ಬಿಟ್ಟು ಅಧಿಕಾರ ಇಲ್ಲದಿರುವವರಿಗೆ ಕಳುಹಿಸಿರುವುದು ಅಧಿಕಾರಿಗಳ ನಾಚಿಕೆ ಕೇಡಿನ ಕೆಲಸ ಹಾಗೂ ಇದರಿಂದ ವೇತನವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವ ಶಿಕ್ಷಕರಿಗೆ ಹಾಗೂ ಬೋಧಕೇತರ
ಸಿಬ್ಬಂದಿಗಳಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ನಾವು ಪಕ್ಷ ಬೇಧವಿಲ್ಲದೆ ಹಿರಿಯ ವಿದ್ಯಾರ್ಥಿಗಳು, ಶಿಕ್ಷಕ ಸಂಘ, ಊರಿನ ಅನೇಕರು ಒಂದು ಗಂಟೆಗಳ ಕಾಲ ಶಿಕ್ಷಣ ಸಂಸ್ಥೆಯ ಮುಂದೆ ಮೌನ ಪ್ರತಿಭಟನೆಯನ್ನು ಮಾಡುತಿದ್ದೇವೆ. ಇದಕ್ಕೆ ಕೂಡಲೇ ಅಧಿಕಾರಿಗಳು ಕ್ರಮ ಕೈಗೊಂಡು ವೇತನವನ್ನು ನೀಡಬೇಕು. ಇಲ್ಲವಾದಲ್ಲಿ ಇದೇರೀತಿಯಾಗಿ ದೊಡ್ಡಮಟ್ಟದಲ್ಲಿ ಮುಂಬರುವ ದಿನಗಳಲ್ಲಿ ಪ್ರತಿಭಟನೆಯನ್ನು ಮಾಡವುದಾಗಿ” ಪ್ರತಿಭಟನಾಕಾರರು ಎಚ್ಚರಿಕೆಯನ್ನು ನೀಡಿದರು. “ನಮ್ಮ ಹಿಂದೂ ಸಂಸ್ಥೆಯಲ್ಲಿ ಅದರಲ್ಲೂ ಕುಕ್ಕೆ ಸುಬ್ರಹ್ಮಣ್ಯದಲ್ಲಿ 99.8 ರಷ್ಟು ಹಿಂದುಗಳೇ ಇದ್ದರೂ ಹಿಂದೂ ಸಂಸ್ಥೆಯಲ್ಲೇ ಈ ರೀತಿಯ ವ್ಯವಸ್ಥೆಗಳಾದಲ್ಲಿ ಹಿಂದೂ ಸಂಸ್ಥೆಗಳ ಬೆಳವಣಿಗೆ ಹೇಗೆ ಸಾಧ್ಯ ಮತ್ತು ಇದು ಬೆಳೆಯದ ಹಾಗೆ ಮೋಟಕುಗೊಳಿಸುವಂತಹ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯದ ಶಿಕ್ಷಣ ಸಂಸ್ಥೆಯು ಸುತ್ತಮುತ್ತಲಿನ ಅನೇಕ ಹಳ್ಳಿ ಪ್ರದೇಶದಿಂದ ಹಾಗೂ ದೂರದ ಊರಿಂದ ಶಿಕ್ಷಣ ಪಡೆಯಲು ಬರುತಿದ್ದು ಕಾರಣ ಇಲ್ಲಿಯ ಶಿಕ್ಷಣದ ಗುಣಮಟ್ಟ ಮತ್ತು ಇಲ್ಲಿ ಕಲಿತ ಅದೆಷ್ಟೋ ವಿದ್ಯಾರ್ಥಿಗಳು ಉತ್ತಮ ಶ್ರೇಣಿಯ ಅಂಕಗಳನ್ನು ಪಡೆದು ಇಂದು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಸಮಾಜಕ್ಕೆ ತಮ್ಮ ಕೊಡುಗೆಯನ್ನು ನೀಡಿದಲ್ಲದೆ ಈ ಕಾಲೇಜು ತಾಲೂಕಿನಲ್ಲಿ ಎ.ಗ್ರೇಡ್ ಪಡೆದ ಶಿಕ್ಷಣ ಸಂಸ್ಥೆಯಾಗಿದೆ. ಹಿಂದೂ ಸಂಸ್ಥೆಗಳು ಬೆಳೆದು ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣವನ್ನು ನೀಡಿ ಉನ್ನತ ಉದ್ಯೋಗವನ್ನು ಪಡೆದು ದೇಶದ ನಿರುದ್ಯೋಗ ಸಮಸ್ಯೆಯನ್ನು ನಿವಾರಣೆ ಮಾಡುವಂತಹ ನಿಟ್ಟಿನಲ್ಲಿ ಈ ಹೋರಾಟ ಮಾಡುವಂತಹ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಈ ರೀತಿ ವಿದ್ಯಾಸಂಸ್ಥೆ ಮೋಟಕು ಗೊಳಿಸುವಂತಹ ಅಧಿಕಾರಿಗಳನ್ನು ಅಮಾನಾತು ಅಥವಾ ಕೆಲಸದಿಂದ ತಕ್ಷಣ ವಜಾಗೊಳಿಸಬೇಕಾಗಿ” ಪ್ರತಿಭಟನೆಯಲ್ಲಿ ಒತ್ತಾಯಿಸಲಾಯಿತು.

ಸ್ಥಳಕ್ಕೆ ಆಗಮಿಸಿದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು, ಸದಸ್ಯರುಗಳು ಹಾಗೂ ಕಾರ್ಯನಿರ್ವಾಹಣಾಧಿಕಾರಿಗಳು ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿ ಒಂದು ವಾರದ ಒಳಗೆ ಇದಕ್ಕೆ ಸೂಕ್ತ ವ್ಯವಸ್ಥೆಯನ್ನು ಮಾಡಿಕೊಡುವುದಾಗಿ ತಿಳಿಸಿದರು.

ಈ ಸಂಧರ್ಭದಲ್ಲಿ ಕೆಡಿಪಿ ಸದಸ್ಯ ಶಿವರಾಮ್ ರೈ, ಕೃಷ್ಣಮೂರ್ತಿ ಭಟ್, ರವೀಂದ್ರ ಕುಮಾರ್ ರುದ್ರಪಾದ, ಮೂಹನ್‌ದಾಸ್ ರೈ, ಭವಾನಿ ಶಂಕರ್ ಪೈಲಾಜೆ, ವಿಮಲಾ ರಂಗಯ್ಯ, ಪವನ್.ಎಮ್.ಡಿ, ನಿತಿನ್ ಭಟ್, ದೀಪಕ್ ನಂಬಿಯಾರ್, ಮನೋಜ್ ಕೈಕಂಬ, ಭವಿಶ್, ಜೀವನ್, ಶೇಷ ಕುಮಾರ್, ಶೋಭಿತ್ ಹಾಗೂ ಅನೇಕರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading