Ad Widget

ದೇವಚಳ್ಳ : ಕೊನೆಯ ಗ್ರಾಮಸಭೆ – ಬ್ಯಾನರ್ ವಿಚಾರದಲ್ಲಿ ಚರ್ಚೆ – ಗ್ರಾಮದ ಅಭಿವೃದ್ದಿಯಲ್ಲಿ ಸಹಕರಿಸಿದವರಿಗೆ ಗೌರವ- ಗ್ರಾಮಸ್ಥರಿಂದ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ಅವರಿಗೆ ಸನ್ಮಾನ

ದೇವಚಳ್ಳ ಗ್ರಾಮ ಪಂಚಾಯತ್ ನ 2025-26 ನೇ ಸಾಲಿನ 2 ನೇ ಹಂತದ ಗ್ರಾಮಸಭೆ ಹಾಗೂ ಪಂಚಾಯತ್ ನ ಈಗಿನ ಆಡಳಿತ ಮಂಡಳಿಯ ಕೊನೆಯ ಗ್ರಾಮಸಭೆ ಫೆ.10 ರಂದು ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ.ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ವಹಿಸಿದ್ದರು.

. . . . . . . . .

ರಸ್ತೆ ಸಮಸ್ಯೆ – ಬ್ಯಾನರ್ ತೆಗೆದ ಬಗ್ಗೆ ಗ್ರಾಮಸ್ಥರಿಂದ ಚರ್ಚೆ

. . . . . . .

ವಾಲ್ತಾಜೆಯಲ್ಲಿ ರಸ್ತೆ ಸಮಸ್ಯೆ ಬಗ್ಗೆ ಬ್ಯಾನರ್ ಹಾಕಿರುವುದನ್ನು ಪೋಲೀಸರಿಗೆ ಹೇಳಿಸಿ ತೆರವುಗೊಳಿಸಿರುವುದು ಸರಿಯಲ್ಲ. ಅದರಲ್ಲಿ ಯಾವುದೇ ಆಕ್ಷೇಪಾರ್ಹ ಬರಹಗಳಿರಲಿಲ್ಲ. ಜನರಿಗೆ ಪ್ರತಿಭಟನೆ ಮಾಡುವ ಅವಕಾಶವೇ ಇಲ್ಲದಂತಾಗಿದೆ. ಗುದ್ದಲಿಪೂಜೆ ಮಾಡಿ 2 ವರ್ಷ ಕಳೆದರೂ ಕಾಮಗಾರಿ ಆಗಿಲ್ಲ.‌ ಚುನಾವಣೆ ಹತ್ತಿರ ಬಂದಾಗ ಗುದ್ದಲಿಪೂಜೆ ಮಾಡುತ್ತಾರೆ. ಟೆಂಡರ್ ಆಗದೇ ಹೇಗೆ ಗುದ್ದಲಿಪೂಜೆ ಮಾಡುತ್ತಾರೆ ಎಂದು ಗ್ರಾಮಸ್ಥರಾದ ಪ್ರವೀಣ್ ಮುಂಡೋಡಿ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಪಿಡಿಓ ಚುನಾವಣೆ ಬಹಿಷ್ಕಾರ ಬಗ್ಗೆ , ಗ್ರಾಮದಲ್ಲಿ ವಿವಾದ ಉಂಟಾಗುವ ಬ್ಯಾನರ್ ಹಾಕುವಂತಿಲ್ಲ ಎಂದರು. ನಾವು ಪ್ರತಿಭಟನೆ ಮಾಡುತ್ತೇವೆ ಎಂದು ಗ್ರಾಮಸ್ಥರು ಹೇಳಿದಾಗ ನಾವು ನಿಮ್ಮ ಜತೆ ಬರುತ್ತೇವೆ ಎಂದು ಅಧ್ಯಕ್ಷರು ಹೇಳಿದರು.‌

ಕಳೆದ ಎಪ್ರಿಲ್ ನಿಂದ ಪಂಚಾಯತ್ ಗೆ ಯಾವುದೇ ಅನುದಾನ ಬಂದಿಲ್ಲ.‌ ಇದ್ದ ಅನುದಾವನ್ನು ಬಳಕೆ ಮಾಡಲು ಕೂಡ ಸರಕಾರ ಮೂಗುದಾರ ಹಾಕಿದೆ.‌
ಗ್ರಾಮದ ಅಭಿವೃದ್ಧಿ ಬಗ್ಗೆ ಸ್ಥಳೀಯ ಮುಖಂಡರು ಶಾಸಕರು ಸಂಸದರನ್ನು ಫೋಲೋ ಅಫ್ ಮಾಡಿದಾಗ ಮಾತ್ರ ಯಶಸ್ವಿಯಾಗುತ್ತದೆ ಎಂದು ಶೈಲೇಶ್ ಅಂಬೆಕಲ್ಲು ಹೇಳಿದರು.‌

ಈ ವೇಳೆ ಮಾತನಾಡಿದ ಬಾಬು ಗೌಡ ಅಚ್ರಪ್ಪಾಡಿ ಫೋಲೋ ಅಫ್ ಮಾಡುವುದು ಸ್ಥಳೀಯ ಜನಪ್ರತಿನಿಧಿಗಳ ಕರ್ತವ್ಯ, ಅವರೇ ಆ ಕೆಲಸ ಮಾಡಬೇಕು ಎಂದರು.

ಸಭೆಯ ನೋಡೆಲ್ ಅಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಗಮಿಸಿದ್ದರು.‌ಕಂದಾಯ, ಅರಣ್ಯ, ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ, ಆರೋಗ್ಯ ಇಲಾಖೆ, ಮೆಸ್ಕಾಂ, ಶಿಕ್ಷಣ, ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.‌

ಗ್ರಾಮದ ಅಭಿವೃದ್ಧಿಗೆ ಶ್ರಮಿಸಿದವರಿಗೆ ಗೌರವ :

ಅಂಗನವಾಡಿ ಸಹಾಯಕಿಯರು, ಶಾಲಾ ಮುಖ್ಯಶಿಕ್ಷಕರು, ಆಶಾ ಕಾರ್ಯಕರ್ತೆ,ಪಂಪು ಚಾಲಕರು, ಮೆಸ್ಕಾಂ ಸಿಬ್ಬಂದಿಗಳು, ಗ್ರಾ.ಪಂ.ಸಿಬ್ಬಂದಿಗಳು, ಗುತ್ತಿಗೆದಾರರು, ನಿವೃತ್ತ ಸಿಬ್ಬಂದಿಗಳು,ಕೋವಿಡ್ ಸಂದರ್ಭದಲ್ಲಿ ಶ್ರಮಿಸಿದವರಿಗೆ,ಗ್ರಾಮ ಪಂಚಾಯತ್ ಸದಸ್ಯರು , ನಿರಂತರ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಗೆಳೆಯರ ಬಳಗ ದೇವ ಇದರ ಪದಾಧಿಕಾರಿಗಳನ್ನು ಸೇರಿದಂತೆ ಗ್ರಾಮದ ಅಭಿವೃದ್ಧಿಗೆ ಶ್ರಮಿಸಿದ ಹಲವರನ್ನು ಗ್ರಾ.ಪಂ.ಅಧ್ತಕ್ಷರು ಗೌರವಿಸಿದರು.

ಗ್ರಾಮಸ್ಥರಿಂದ ಅಧ್ಯಕ್ಷರಿಗೆ ಸನ್ಮಾನ

ದೇವಚಳ್ಳ ಗ್ರಾಮದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ ಗ್ರಾಮ ಪಂಚಾಯತ್ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ಅವರನ್ನು ಕರಂಗಲ್ಲು ಭಾಗದ ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು. ಗ್ರಾಮದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ಅಧ್ಯಕ್ಷರ ಬಗ್ಗೆ ಪ್ರಮುಖರು ಪಕ್ಷ ಭೇದ ಮರೆತು ಅಭಿನಂದನಿಯ ಮಾತುಗಳನ್ನಾಡಿದರು. ಗ್ರಾಮದ ಅಭಿವೃದ್ಧಿಗೆ ಶ್ರಮಿಸಿದವರನ್ನು ಗೌರವಿಸುವ ಮೂಲಕ ಮಾದರಿ ಗ್ರಾಮ ಸಭೆ ಎನಿಸಿಕೊಂಡಿತು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading