Ad Widget

ಸುಳ್ಳು ಆಶ್ವಾಸನೆ ಆರೋಪ : ಮತದಾನ ಬಹಿಷ್ಕಾರದ ಬ್ಯಾನರ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು

“ರಾಜಕಾರಣಿಗಳು ಸುಳ್ಳು ಆಶ್ವಾಸನೆ ನೀಡಿ ನಮ್ಮನ್ನು ಕಡೆಗಣಿಸಿದ್ದಾರೆ” ಎಂದು ಆರೋಪಿಸಿ ಗ್ರಾಮಸ್ಥರು ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸಿದ ಘಟನೆ ಸುಳ್ಯ ತಾಲೂಕಿನ ವಾಲ್ತಾಜೆ ಎಂಬಲ್ಲಿ ನಡೆದಿದೆ.
ದೇವಚಳ್ಳ ಗ್ರಾಮದ “ವಾಲ್ತಾಜೆ-ಕರಂಗಲ್ಲು ರಸ್ತೆಯ ಬಲ್ಕಜೆ ತಿರುವು ಹಾಗೂ ವಾಲ್ತಾಜೆ ಮಲೆರ್‌ಕುಮೇರಿ ರಸ್ತೆಗೆ ಸುಳ್ಳು ಆಶ್ವಾಸನೆ ಕೊಟ್ಟು ಕಾಂಕ್ರೀಟೀಕರಣ ಮಾಡಿಸುವುದೆಂದು ಗುದ್ದಲಿ ಪೂಜೆ ಮಾಡಿಸಿ ಲಾಡು ತಿಂದು ಚಪ್ಪಾಳೆ ತಟ್ಟಿಸಿಕೊಂಡು ಹೋದ ರಾಜಕಾರಣಿಗಳಿಗೆ ಧಿಕ್ಕಾರ. ಇದೇ ರೀತಿ ನಮ್ಮನ್ನು ಕಡೆಗಣಿಸಿದ್ದೇ ಆದಲ್ಲಿ ಮುಂದಿನ ಚುನಾವಣೆಯನ್ನು ಬಹಿಷ್ಕರಿಸಲಾಗುವುದು” ಎಂಬ ಬ್ಯಾನರ್ ಅನ್ನು ಅಳವಡಿಸಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading