Ad Widget

ಉಬರಡ್ಕ : ಸೊಸೈಟಿ ಚುನಾವಣೆ – ಬಿಜೆಪಿಗೆ 09 ಹಾಗೂ ಕಾಂಗ್ರೆಸ್‌ಗೆ 03 ಸ್ಥಾನ – ಅಭ್ಯರ್ಥಿಗಳು ಪಡೆದ ಮತದ ವಿವರ ಇಲ್ಲಿದೆ

ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿಗೆ ಇಂದು(ಫೆ.8) ಚುನಾವಣೆ ನಡೆದು ಸಹಕಾರ ಭಾರತಿಯ 09 ಅಭ್ಯರ್ಥಿಗಳು ಹಾಗೂ ಕಾಂಗ್ರೆಸ್ ಬೆಂಬಲಿತ ಸಹಕಾರ ಬಳಗದ 03 ಅಭ್ಯರ್ಥಿಗಳು  ಗೆಲುವು ಸಾಧಿಸಿದ್ದಾರೆ‌.

ಒಟ್ಟು 12 ನಿರ್ದೇಶಕ ಸ್ಥಾನಗಳಿಗೆ 24 ಮಂದಿ ಅಭ್ಯರ್ಥಿಗಳದಲ್ಲಿದ್ದರು.
ಈ ಬಾರಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಹಾಗೂ ಕಾಂಗ್ರೆಸ್ ಬೆಂಬಲಿತ ಸಹಕಾರಿ ಬಳಗದ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿತ್ತು.

ಸಾಲಗಾರರ ಸಾಮಾನ್ಯ ಕ್ಷೇತ್ರದ ಐದು ನಿರ್ದೇಶಕರುಗಳ ಸ್ಥಾನಕ್ಕೆ ಸಹಕಾರ ಭಾರತಿಯಿಂದ ಸ್ಪರ್ಧಿಸಿದ್ದ ರಾಜೇಶ್ ಭಟ್ ನೆಕ್ಕಿಲ 495, ಹರಿಪ್ರಸಾದ್ ಪಾನತ್ತಿಲ 416, ಪ್ರಭಾಕರ ಅಮೈ, 397 ಹಾಗೂ ಸಹಕಾರಿ ಬಳಗದ ಸುರೇಶ್ ಅಮೈ 439, ಗಂಗಾಧರ ನಾಯರ್ ಕಂಬಳಿಮೂಲೆ 376 ಮತ ಪಡೆದು ಗೆಲುವು ಸಾಧಿಸಿದ್ದಾರೆ.  ಸಹಕಾರ ಭಾರತಿಯಿಂದ ಸ್ಪರ್ಧಿಸಿದ್ದ ಗಣೇಶ್ ರೈ ಕುತ್ತಮೊಟ್ಟೆ 373, ಶ್ಯಾಂ ಪಾನತ್ತಿಲ 349, ಸಹಕಾರಿ ಬಳಗದಿಂದ ಸ್ಪರ್ಧಿಸಿದ್ದ  ಸತೀಶ್ಚಂದ್ರ ಮಾಯಿಲಮೂಲೆ 239, ಗುಡ್ಡಪ್ಪ ಗೌಡ ಮಾಯಿಲಮೂಲೆ 306, ಓಂಪ್ರಕಾಶ್ ಹೊಸಗದ್ದೆ 347 ಮತ ಪಡೆದು  ಪರಾಭವಗೊಂಡಿದ್ದಾರೆ.

ಸಾಲಗಾರರಲ್ಲದ ಕ್ಷೇತ್ರದಿಂದ  ನಿರ್ದೆಶಕರ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಹಕಾರ ಭಾರತಿ ಅಭ್ಯರ್ಥಿಯಾಗಿ ಹರೀಶ್ ಮಾಣಿಬೆಟ್ಟು 61 ಮತ ಪಡೆದು ಗೆಲುವು ಸಾಧಿಸಿದ್ದು, ಸಹಕಾರಿ ಬಳಗದ ಅಭ್ಯರ್ಥಿಯಾಗಿ ಮಣಿಕಂಠ ಪಾಲಡ್ಕ 9 ಮತ ಪಡೆದು ಸೋಲು ಕಂಡರು.

ಹಿಂದುಳಿದ ವರ್ಗ ಎ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಹಕಾರ ಭಾರತಿ ಅಭ್ಯರ್ಥಿ ವಿಜಯಕುಮಾರ್ ಕಂಬಳಿಮೂಲೆ 512 ಮತ ಪಡೆದು ಗೆಲುವು ಸಾಧಿಸಿ, ಸಹಕಾರಿ ಬಳಗದ ಅಭ್ಯರ್ಥಿ ಜಗದೀಶ ಪಾಟಾಳಿ ಹುಳಿಯಡ್ಕ 248 ಮತ ಪಡೆದು ಸೋಲು ಅನುಭವಿಸಿದ್ದಾರೆ.

ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ನಿರ್ದೇಶಕರ ಸ್ಥಾನಕ್ಕೆ ಸಹಕಾರ ಬಳಗದಿಂದ ಸ್ಪರ್ಧಿಸಿದ್ದ ಹಾಲಿ ನಿರ್ದೇಶಕ ಗಂಗಾಧರ ಪಿ.ಎಸ್. 428 ಮತ ಪಡೆದು ಭರ್ಜರಿ ಗೆಲುವು ದಾಖಲಿಸಿದ್ದಾರೆ. ಸಹಕಾರ ಭಾರತಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹಾಲಿ ಅಧ್ಯಕ್ಷ  ದಾಮೋದರ ಗೌಡ ಎಂ. ಅವರನ್ನು 351 ಮತ ಪಡೆದು  77 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.

ಮಹಿಳಾ ಮೀಸಲು ಕ್ಷೇತ್ರದ ಎರಡು ಸ್ಥಾನಗಳಿಗೆ ಸಹಕಾರ ಭಾರತಿ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ವನಿತಾ ಚಂದ್ರಶೇಖರ ಮೂರ್ಜೆ 480, ಕೀರ್ತಿ ಜಯಂತ್ ಭರ್ಜರಿಗುಂಡಿ 417 ಮತ ಪಡೆದು  ಗೆಲುವು ಸಾಧಿಸಿದ್ದಾರೆ.  ಸಹಕಾರ ಬಳಗದಿಂದ ಸ್ಪರ್ಧಿಸಿದ್ದ ವಾರಿಜ ವೀರಪ್ಪ ಮಂಜಿಕಾನ 346, ಕುಸುಮಾವತಿ ರಾಮಕೃಷ್ಣ ಹೊಸಗದ್ದೆ 309 ಮತ ಪಡೆದು ಸೋಲು ಕಂಡರು.

ಪರಿಶಿಷ್ಟ ಪಂಗಡದ ಕ್ಷೇತ್ರದಿಂದ ಸಹಕಾರ ಭಾರತಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪದ್ಮಯ್ಯ ನಾಯ್ಕ ಚೆನ್ನಡ್ಕ 431 ಮತ ಪಡೆದು ಗೆಲುವು ಸಾಧಿಸಿದರೇ ಸಹಕಾರ ಬಳಗದಿಂದ ಸ್ಪರ್ಧಿಸಿದ್ದ ನಾರಾಯಣ ಕಕ್ಕೆಬೆಟ್ಟು 335 ಮತ ಪಡೆದು ಪರಾಭವಗೊಂಡರು.

ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಸಹಕಾರ ಭಾರತಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಈಶ್ವರ ಕಲ್ಚಾರ್ 436 ಮತ ಪಡೆದು ಗೆಲುವು ದಾಖಲಿಸಿ ಸಹಕಾರ ಬಳಗದಿಂದ ಸ್ಪರ್ಧಿಸಿದ್ದ ಭುವನೇಂದ್ರ ದಾಸ್ ಬೆಳರಂಪಾಡಿ 337 ಮತ ಪಡೆದು ಸೋಲು ಅನುಭವಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading