Ad Widget

ಉಬರಡ್ಕ ಸೊಸೈಟಿ ಚುನಾವಣೆ – ಬಿಜೆಪಿ ಭರ್ಜರಿ ಗೆಲುವು – 3 ಸ್ಥಾನ ಪಡೆದ ಕಾಂಗ್ರೆಸ್

ಉಬರಡ್ಕ-ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿಗೆ ಇಂದು(ಫೆ.8) ಚುನಾವಣೆ ನಡೆದು ಸಹಕಾರ ಭಾರತಿಯ 9 ಅಭ್ಯರ್ಥಿಗಳು ಹಾಗೂ ಕಾಂಗ್ರೆಸ್ ಬೆಂಬಲಿತ ಸಹಕಾರ ಬಳಗದ 3 ಅಭ್ಯರ್ಥಿಗಳು  ಗೆಲುವು ಸಾಧಿಸಿದ್ದಾರೆ

ಒಟ್ಟು 12 ನಿರ್ದೇಶಕ ಸ್ಥಾನಗಳಿಗೆ 24 ಮಂದಿ ಅಭ್ಯರ್ಥಿಗಳದಲ್ಲಿದ್ದರು. ಈ ಬಾರಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಹಾಗೂ ಕಾಂಗ್ರೆಸ್ ಬೆಂಬಲಿತ ಸಹಕಾರಿ ಬಳಗದ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿತ್ತು.

ಸಾಲಗಾರರ ಸಾಮಾನ್ಯ ಕ್ಷೇತ್ರದ ಐದು ನಿರ್ದೇಶಕರುಗಳ ಸ್ಥಾನಕ್ಕೆ ಸಹಕಾರ ಭಾರತಿಯಿಂದ ಸ್ಪರ್ಧಿಸಿದ್ದ ರಾಜೇಶ್ ಭಟ್ ನೆಕ್ಕಿಲ, ಹರಿಪ್ರಸಾದ್ ಪಾನತ್ತಿಲ, ಪ್ರಭಾಕರ ಅಮೈ, ಹಾಗೂ ಸಹಕಾರಿ ಬಳಗದ ಸುರೇಶ್ ಅಮೈ ಮತ್ತು ಗಂಗಾಧರ ನಾಯರ್ ಕಂಬಳಿಮೂಲೆ ಗೆಲುವು ಸಾಧಿಸಿದ್ದಾರೆ. ಸಹಕಾರ ಭಾರತಿಯಿಂದ ಸ್ಪರ್ಧಿಸಿದ್ದ   ಗಣೇಶ್ ರೈ ಕುತ್ತಮೊಟ್ಟೆ,ಶ್ಯಾಂ ಪಾನತ್ತಿಲ, ಸಹಕಾರಿ ಬಳಗದಿಂದ ಸ್ಪರ್ಧಿಸಿದ್ದ  ಸತೀಶ್ಚಂದ್ರ ಮಾಯಿಲಮೂಲೆ, ಗುಡ್ಡಪ್ಪ ಗೌಡ ಮಾಯಿಲಮೂಲೆ ಹಾಗೂ ಓಂಪ್ರಕಾಶ್ ಹೊಸಗದ್ದೆ  ಪರಾಭವಗೊಂಡಿದ್ದಾರೆ.

ಸಾಲಗಾರರಲ್ಲದ ಕ್ಷೇತ್ರದಿಂದ  ನಿರ್ದೆಶಕರ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಹಕಾರ ಭಾರತಿ ಅಭ್ಯರ್ಥಿಯಾಗಿ ಹರೀಶ್ ಮಾಣಿಬೆಟ್ಟು ಗೆಲುವು ಸಾಧಿಸಿದ್ದು, ಸಹಕಾರಿ ಬಳಗದ ಅಭ್ಯರ್ಥಿಯಾಗಿ ಮಣಿಕಂಠ ಪಾಲಡ್ಕ ಸೋಲು ಕಂಡರು.

ಹಿಂದುಳಿದ ವರ್ಗ ಎ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಹಕಾರ ಭಾರತಿ ಅಭ್ಯರ್ಥಿ ವಿಜಯಕುಮಾರ್ ಕಂಬಳಿಮೂಲೆ ಗೆಲುವು ಸಾಧಿಸಿ, ಸಹಕಾರಿ ಬಳಗದ ಅಭ್ಯರ್ಥಿ ಜಗದೀಶ ಪಾಟಾಳಿ ಸೋಲು ಅನುಭವಿಸಿದ್ದಾರೆ.

ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ನಿರ್ದೇಶಕರ ಸ್ಥಾನಕ್ಕೆ ಸಹಕಾರ ಭಾರತಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹಾಲಿ ಅಧ್ಯಕ್ಷ  ದಾಮೋದರ ಗೌಡ.ಎಂ ಅವರನ್ನು 76 ಮತಗಳಿಂದ ಸೋಲಿಸುವ ಮೂಲಕ ಸಹಕಾರ ಬಳಗದಿಂದ ಸ್ಪರ್ಧಿಸಿದ್ದ ಹಾಲಿ ನಿರ್ದೇಶಕ ಗಂಗಾಧರ ಪಿ.ಎಸ್. ಭರ್ಜರಿ ಗೆಲುವು ದಾಖಲಿಸಿದ್ದಾರೆ.

ಮಹಿಳಾ ಮೀಸಲು ಕ್ಷೇತ್ರದ ಎರಡು ಸ್ಥಾನಗಳಿದ್ದು, ಸಹಕಾರ ಭಾರತಿ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ವನಿತಾ ಚಂದ್ರಶೇಖರ ಮೂರ್ಜೆ, ಕೀರ್ತಿ ಜಯಂತ್ ಭರ್ಜರಿಗುಂಡಿ ಗೆಲುವು ಸಾಧಿಸಿದರೆಡ ಸಹಕಾರ ಬಳಗದಿಂದ ಸ್ಪರ್ಧಿಸಿದ್ದ ವಾರಿಜ ವೀರಪ್ಪ ಮಂಜಿಕಾನ, ಕುಸುಮಾವತಿ ರಾಮಕೃಷ್ಣ ಹೊಸಗದ್ದೆ ಸೋಲು ಕಂಡರು.

ಪರಿಶಿಷ್ಟ ಪಂಗಡದ ಕ್ಷೇತ್ರದಿಂದ ಸಹಕಾರ ಭಾರತಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪದ್ಮಯ್ಯ ನಾಯ್ಕ ಚೆನ್ನಡ್ಕ ಗೆಲುವು ಸಾಧಿಸಿದರೇ ಸಹಕಾರ ಬಳಗದಿಂದ ಸ್ಪರ್ಧಿಸಿದ್ದ ನಾರಾಯಣ ಕಕ್ಕೆಬೆಟ್ಟು ಪರಾಭವಗೊಂಡರು.

ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಸಹಕಾರ ಭಾರತಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಈಶ್ವರ ಕಲ್ಚಾರ್ ಗೆಲುವು ದಾಖಲಿಸಿ ಸಹಕಾರ ಬಳಗದಿಂದ ಸ್ಪರ್ಧಿಸಿದ್ದ ಭುವನೇಂದ್ರ ದಾಸ್ ಬೆಳರಂಪಾಡಿ ಸೋಲು ಅನುಭವಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading