Ad Widget

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನಲ್ಲಿ ಗ್ರಾಮ ಸಭೆ ; ಬೀದಿ ನಾಯಿಗಳ ಸಮಸ್ಯೆ, ಅನಧಿಕೃತ ಅಂಗಡಿಗಳ ಬಗ್ಗೆ ದೂರು ನೀಡಿದರೂ ಸೂಕ್ತ ಕ್ರಮ ಕೈಗೊಳ್ಳದ ಕುರಿತು, 24×7 ಆಸ್ಪತ್ರೆಯ ಬಗ್ಗೆ ಹಾಗೂ ಪಶು ಇಲಾಖೆಯ ಕಟ್ಟಡದ ಬಗ್ಗೆ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಚರ್ಚೆ

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನ ಗ್ರಾಮ ಸಭೆಯು ರಾಜೀವಗಾಂದಿ ಸೇವಾ ಕೇಂದ್ರ ಸಭಾಭವನದಲ್ಲಿ ಫೆ.05 ಗುರುವಾರದಂದು ನಡೆಯಿತು.

ಸಭೆಯಲ್ಲಿ ಬೀದಿ ನಾಯಿ ಸಮಸ್ಯೆ, 24×7 ಆಸ್ಪತ್ರೆ ಬಗ್ಗೆ, ಮಂಗಗಳ ಹಾವಳಿ, ಮರಕತ ಅಣೆಕಟ್ಟು ಸಮಸ್ಯೆ, ಪಶು ಇಲಾಖೆಯ ಕಟ್ಟಡದ ಬಗ್ಗೆ ಚರ್ಚೆ ನಡೆಯಿತು.

ಸರ್ಕಾರಿ ಜಾಗ ಒತ್ತುವರಿ ಬಗ್ಗೆ ಚರ್ಚೆ : “ಸುಬ್ರಹ್ಮಣ್ಯ ಸರ್ಕಾರಿ ಆಸ್ಪತ್ರೆಗೆ 4.5 ಎಕ್ರೆ ಜಾಗ ಇತ್ತು, ಈಗ ಅಳತೆ ಮಾಡುವಾಗ 2.5 ಜಾಗ ಇದೆ, ಯಾರು ಒತ್ತುವರಿ ಮಾಡಿದ್ದಾರೆ ಗೊತ್ತಿಲ್ಲ, ಆದರೆ ಗ್ರಾ.ಪಂ ವತಿಯಿಂದ ಆದರೂ ಕ್ರಮ ಕೈಗೊಂಡು ಸೂಕ್ತ ಕ್ರಮ ಕೈಗೊಳ್ಳಬೇಕೆಂಬ” ಒತ್ತಾಯವು ಕೇಳಿಬಂತು.

ಅಪೌಷ್ಟಿಕತೆ ಬಗ್ಗೆ ತೆಗೆದುಕೊಂಡ ಕ್ರಮ : “ಅಪೌಷ್ಟಿಕತೆ ವಿಚಾರವಾಗಿ ಏನು ಕ್ರಮಗೊಳ್ಳುತ್ತಿದ್ದಿರಿ” ಎಂದು ಅಶೋಕ್ ಮೂಲಮಜಲು ಕೇಳಿದರು. “ಸುಬ್ರಹ್ಮಣ್ಯ ವ್ಯಾಪ್ತಿಯಲ್ಲಿ ಅಪೌಷ್ಟಿಕತೆ ಯಿಂದ ಎರಡು ಮಕ್ಕಳಿದ್ದು, ಪೌಷ್ಟಿಕಾಂಶ ಮೊಟ್ಟೆ, ಹಾಲು ಪೂರೈಕೆ ಮಾಡಲಾಗುತ್ತಿದೆ” ಎಂದು ಅರೂಗ್ಯಾಧಿಕಾರಿಗಳು ತಿಳಿಸಿದರು.

ಎಂಟನೇ ತರಗತಿ ಇಲ್ಲದ ಮಾನದಂಡ ಪಿ.ಯು ಗೆ? : “ಎಂಟನೇ ತರಗತಿ ಇಲ್ಲದ ಮಾನದಂಡ ಸರ್ಕಾರಿ ಶಾಲೆಯಲ್ಲಿ  ಪಿ.ಯು ಗೆ ಇದೆ. ಯಾಕೆಂದರೆ ಎಂಟನೇ ತರಗತಿಗೆ ಶಾಲೆಗೆ ಸೇರಿಸುವಾಗ ಯಾವುದೇ ಮಾರ್ಕ್ ನ ಮಾನದಂಡ ಇಲ್ಲ. ಆದರೆ ಅದೇ ಶಾಲೆಯಲ್ಲಿ ಕಲಿತು ಹತ್ತನೇ ತರಗತಿ ಉತ್ತೀರ್ಣರಾದರೆ ಉತ್ತಮ ಅಂಕದವರಿಗೆ ಮಾತ್ರ ನೀಡಿದರೆ ಉಳಿದವರು ಎಲ್ಲಿಗೆ ಹೋಗಬೇಕು” ಎಂದು ರಾಜೇಶ್ ಎನ್‌.ಎಸ್.ಪ್ರಶ್ನಿಸಿದರು.

ದೂರು ನೀಡಿದರೂ ಅನಧಿಕೃತ ಅಂಗಡಿಗಳ ತೆರವು ಬಗ್ಗೆ ಮೌನ‌ : “ಆದಿ ಸುಬ್ರಹ್ಮಣ್ಯದಲ್ಲಿನ ಅನಧಿಕೃತ ಅಂಗಡಿಗಳ ಬಗ್ಗೆ ದೂರು ನೀಡಿದ್ದರೂ ಸೂಕ್ತ ಕ್ರಮ ಕೈಗೊಂಡಿಲ್ಲ, ಪಂಚಾಯತ್ ಪರವಾನಿಗೆ ಇಲ್ಲದೆ ಮತ್ತು 9/11, ಕನ್ವರ್ಷನ್ ಇಲ್ಲದೆ ವಾಣಿಜ್ಯ ಕಟ್ಟಡದಲ್ಲಿ ವ್ಯಾಪಾರ ನಡೆಸಿ ದಿನಂಪ್ರತಿ ಲಕ್ಷಾಂತರ ಹಣ ಆದಾಯ ಮಾಡುತಿದ್ದರೂ ಗ್ರಾ.ಪಂ ಗೆ ತೆರಿಗೆ ವಂಚಿಸುತ್ತಿದ್ದು ಮತ್ತು ಇದರ ಬಗ್ಗೆ ದೂರು ನೀಡಿದ್ದು ಪಂಚಾಯತ್ ಪಿ.ಡಿ.ಓ ಅಧಿಕಾರಿ ನೋಟಿಸ್ ಜಾರಿ ಮಾಡಿದ್ದು, ಇದರ ಬಗ್ಗೆ ಯಾವುದೇ ಬೆಲೆಕೊಡದಿರುವ ವ್ಯಕ್ತಿಗಳ ಮೇಲೆ ಯಾಕೆ ಕ್ರಮವಿಲ್ಲ” ಎಂದು ಸಂತೋಷ್ ಸುಬ್ರಹ್ಮಣ್ಯ ಕೇಳಿದರು. ಈ ಸಂದರ್ಭದಲ್ಲಿ ಸಭೆಯಲ್ಲಿದ್ದ ಶಿವರಾಮ ರೈ ರವರು “ಈ ರೀತಿ ಮಾಡುವುದಾದರೆ ಸುಬ್ರಹ್ಮಣ್ಯದಲ್ಲಿ ಯಾರು ಬೇಕಾದರೂ ಅಂಗಡಿಗಳನ್ನು ಹಾಕಿ ವ್ಯಾಪಾರ ಮಾಡಬಹುದಲ್ಲ” ಎಂದು ಎಂದು ಪ್ರಶ್ನಿಸಿದರು. ಹಾಗೂ ಗ್ರಾಮಸ್ಥರು ಸಹ ಎಲ್ಲಾ ಅನಧಿಕೃತ ಅಂಗಡಿ ತೆರವು ಮಾಡುವಂತೆ ಒತ್ತಾಯಿಸಿದರು.

ಕಾನೂನು ಬಾಹಿರ ಚಟುವಟಿಕೆಗಳಿಗೆ ಕಠಿಣ ಶಿಕ್ಷೆ : “ಸಮಾಜದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಲ್ಲಿ ತಕ್ಷಣ ಪೋಲಿಸ್ ಸಿಬ್ಬಂದಿಗಳಿಗೆ ತಿಳಿಸುವುದು ಹಾಗೂ ಪ್ರತಿಯೊಬ್ಬರೂ 112 ನಂಬರ್ ಅನ್ನು ತಮ್ಮ ಮೊಬೈಲ‌ನಲ್ಲಿ ಸೇವ್ ಮಾಡುವುದು ಇದರಿಂದ ತಕ್ಷಣ ಯಾವುದೇ ಘಟನೆ ಸಂಭವಿಸಿದಲ್ಲಿ ತಕ್ಷಣ ಪೋಲಿಸ್ ಅಧಿಕಾರಿಗಳು ಸಂಪರ್ಕಿಸಲು ಸಾಧ್ಯ. ಮತ್ತು ಹೆಲ್ಮೆಟ್ ಹಾಕದೆ ಪ್ರಯಾಣಿಸದಿದ್ದಲ್ಲಿ ಹಾಗೂ 18 ವರ್ಷಗಳಿಗಿಂತ ಕೆಳಗಿನವರಿಗೆ ವಾಹನ ನೀಡಿದಲ್ಲಿ ಪೋಷಕರ ಮೇಲೆ ನಿರ್ಧಾಕ್ಷಿಣ್ಯ ಕಾನೂನು ಕ್ರಮ ಹಾಗೂ ದಂಡವಿದಿಸಲಾಗುವುದು. ಹಾಗೂ ಗಾಂಜಾ ವ್ಯಸನಿಗಳು ಹಾಗೂ ಇದನ್ನು ಸಪ್ಲೈ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮತ್ತು ಸ್ವಚ್ಛತೆಯ ಬಗ್ಗೆ ಹಾಗೂ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಕೇವಲ ಪೋಲಿಸ್ ಇಲಾಖೆಯೊಂದಿಗೆ ಕೈಜೋಡಿಸುವುದು ಸಮಾಜದ ಶಾಂತಿಗೆ ಸಾಧ್ಯವೆಂದು” ಸುಬ್ರಹ್ಮಣ್ಯ ಆರಕ್ಷಕ ಉಪನಿರೀಕ್ಷಕ   ಆಂಜನೇಯ ರೆಡ್ಡಿ ಹೇಳಿದರು.

ಈ ಸಂದರ್ಭದಲ್ಲಿ ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷೆ ಶ್ರೀಮತಿ ಸುಜಾತ ಕಲ್ಲಾಜೆ ವಹಿಸಿದ್ದರು. ನೋಡೆಲ್ ಅಧಿಕಾರಿಗಳಾಗಿ ಕಡಬ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಯಶವಂತ  ಇದ್ದರು. ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷ ರಾಜೇಶ್ ಎನ್.ಎಸ್, ಗ್ರಾ.ಪಂ. ಸದಸ್ಯರಾದ ವೆಂಕಟೇಶ್ ಎಚ್‌.ಎಲ್,  ಹರೀಶ್ ಇಂಜಾಡಿ, ದಿಲೀಪ್ ಉಪ್ಪಳಿಕೆ, ಶ್ರೀಮತಿ ಭಾರತಿ ದಿನೇಶ್, ಶ್ರೀಮತಿ ಸೌಮ್ಯ, ಶ್ರೀಮತಿ ಲಲಿತಾ ಗುಂಡಡ್ಕ, ಗಿರೀಶ್ ಆಚಾರ್ಯ, ಭವ್ಯ ಕುಮಾರಿ ಜೇನುಕೋಡಿ, ಮೋಹನ ಗೌಡ ಕೋಟಿಗೌಡನ ಮನೆ, ಶ್ರೀಮತಿ ಸವಿತಾ, ಶ್ರೀಮತಿ ಮಲ್ಲಿಕಾ, ನಾರಾಯಣ ಅಗ್ರಹಾರ, ಶ್ರೀಮತಿ ಸೌಮ್ಯ, ಶ್ರೀಮತಿ ದಿವ್ಯ,  ಶ್ರೀಮತಿ ಜಯಂತಿ, ಶ್ರೀಮತಿ ಶಶಿಕಲಾ, ಶಿವರಾಮ ನೆಕ್ರಾಜೆ, ಶ್ರೀಮತಿ ಮೋಹಿನಿ ಎ.ಎಸ್ ಹಾಗೂ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಯೇಸುರಾಜ್, ಸುಬ್ರಹ್ಮಣ್ಯ ಪೊಲೀಸ್ ಉಪನಿರೀಕ್ಷಕ   ಆಂಜನೇಯ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading