Ad Widget

ಪಾಲ್ತಾಡು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎನ್.ಎಸ್.ವೆಂಕಪ್ಪ ಗೌಡ ; ಉಪಾಧ್ಯಕ್ಷರಾಗಿ ಪ್ರವೀಣ್ ರೈ ನಳೀಲು

ಪುತ್ತೂರು : ಪಾಲ್ತಾಡು ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ 5 ವರ್ಷಗಳ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಪೆರುವಾಜೆ ಗ್ರಾಮದ ಪೆರ್ಜಿ ನಾರ್ಕೋಡು ಎನ್.ಎಸ್.ವೆಂಕಪ್ಪ ಗೌಡ ಹಾಗೂ ಉಪಾಧ್ಯಕ್ಷರಾಗಿ ಪ್ರವೀಣ್ ರೈ ನಳೀಲು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಫೆ.4ರಂದು ಸಂಘದ ಕಚೇರಿಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆ ಚುನಾವಣಾಧಿಕಾರಿ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಮಾರಾಟಾಧಿಕಾರಿ ಶೋಭಾ ಎನ್.ಎಸ್. ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘದ ನಿರ್ದೇಶಕರಾಗಿ ಸಾಮಾನ್ಯ ಕ್ಷೇತ್ರದಿಂದ ಪೆರುವಾಜೆ ಗ್ರಾಮದ  ಸತೀಶ್ ಪೂಜಾರಿ ಪೆಲತಡ್ಕ,ಲಿಂಗಪ್ಪ ಪೂಜಾರಿ ಕೊಲ್ಯ,ಎನ್‌.ಎಸ್.ವೆಂಕಪ್ಪ ಗೌಡ,ಕೊಳ್ತಿಗೆ ಗ್ರಾಮದ ಪ್ರವೀಣ್ ರೈ ನಳೀಲು,ಪಾಲ್ತಾಡಿ ಗ್ರಾಮದ ಲೋಕೇಶ್ ಮಣಿಯಾಣಿ ಕಾಪುತಕಾಡು, ಸಯ್ಯದ್ ಮೊಯ್ದೀನ್ ಸಾಹೇಬ್ ಚೆನ್ನಾವರ, ಚಂದ್ರಶೇಖರ ಪೂಜಾರಿ ಕಾಪುತಕಾಡು, ಮಹಿಳಾ ಮೀಸಲು ಸ್ಥಾನದಿಂದ ಗುಲಾಬಿ ಕಾಪುತಮೂಲೆ, ಪ್ರೇಮಲತಾ ರೈ ಚೆನ್ನಾವರ ಪಟ್ಟೆ, ಪ.ಜಾ.ಮೀಸಲು ಸ್ಥಾನದಿಂದ ಪೆರುವಾಜೆ ಗ್ರಾಮದ ಮೀನಾಕ್ಷಿ ಕೋಡಿಯಡ್ಕ, ಪ.ಪಂ.ಮೀಸಲು ಸ್ಥಾನದಿಂದ ಪಾಲ್ತಾಡಿ ಗ್ರಾಮದ ನೀಲಮ್ಮ ಕಾಪುತಮೂಲೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು.

ಈ ಸಂದರ್ಭದಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷರಾದ ವಿನೋದ್ ರೈ ಪಾಲ್ತಾಡು ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.

ಸಂಘದ ಕಾರ್ಯದರ್ಶಿ ಮೋಹನ್ ಗೌಡ ,ಹಾಲು ಪರೀಕ್ಷಕಿ ವನಜಾ ಸಹಕರಿಸಿದರು.

ಪ್ರವೀಣ್ ಚೆನ್ನಾವರ ಸ್ವಾಗತಿಸಿ,ವಂದಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading