Ad Widget

ಸಿವಿಲ್‌ ಡಿಫೆನ್ಸ್‌ ಚೀಫ್‌ ವಾರ್ಡನ್‌ ಆಗಿ ಡಾ. ಚೂಂತಾರು ನೇಮಕ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸಿವಿಲ್‌ ಡಿಫೆನ್ಸ್‌(ಪೌರ ರಕ್ಷಣೆ) ವಿಭಾಗದ ಚೀಫ್‌ ವಾರ್ಡನ್ ಆಗಿ ಡಾ. ಮುರಲೀ ಮೋಹನ್ ಚೂಂತಾರು ಅವರನ್ನು ನೇಮಕ ಮಾಡಲಾಗಿದೆ.

ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಹೋಂ ಗಾರ್ಡ್ಸ್, ನಾಗರಿಕ ರಕ್ಷಣಾ ವಿಭಾಗದ ಕಮಾಂಡೆಂಟ್ ಜನರಲ್ ಅವರು ಫೆ.2ರಂದು ಈ ಆದೇಶ ಹೊರಡಿಸಿದ್ದಾರೆ.
ನಾಗರಿಕ ರಕ್ಷಣಾ ಕಾಯಿದೆ 1968ರ ಕಲಂ 5(1)ರ ಅನ್ವಯ ತಕ್ಷಣದಿಂದ ಅನ್ವಯಿಸಿ ಒಂದು ವರ್ಷದ ಅವಧಿಗೆ ಈ ನೇಮಕಾತಿ ಜಾರಿಯಲ್ಲಿ ಇರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಡಾ. ಮುರಲೀ ಮೋಹನ್ ಚೂಂತಾರು ಅವರು ದಂತ ವೈದ್ಯರಾಗಿದ್ದು, ಜಿಲ್ಲಾ ಹೋಮ್ ಗಾರ್ಡ್ಸ್‌ ಕಮಾಂಡೆಂಟ್‌ ಆಗಿ ಹಲವು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading