Ad Widget

ಡಾ. ಹರಪ್ರಸಾದ್ ತುದಿಯಡ್ಕರಿಗೆ ಆಯುಷ್ ಶ್ರೀ ಪ್ರಶಸ್ತಿ ಪ್ರದಾನ

ಡಾ. ಟಿ.ಎಂ.ಎ ಪೈ ಅಂತಾರಾಷ್ಟ್ರೀಯ ಕನ್ವೆನ್ಷನ್ ಸೆಂಟರ್ ಮಂಗಳೂರಿನಲ್ಲಿ ಆಯೋಜಿಸಿದ್ದ ಆಯುಷ್ ಹಬ್ಬ 2026ರ ಅಂಗವಾಗಿ ನಡೆದ ಆಯುಷ್ ಅಭಿನಂದನಾ ಕಾರ್ಯಕ್ರಮದಲ್ಲಿ  ಡಾ.ಹರಪ್ರಸಾದ ತುದಿಯಡ್ಕ ರವರಿಗೆ  ಅವರ ವೈದ್ಯಕೀಯ ಸಾಧನೆಗಾಗಿ "ಆಯುಷ್ ಶ್ರೀ ಪ್ರಶಸ್ತಿ" ನೀಡಿ ಗೌರವಿಸಲಾಯಿತು.

ಪೂರ್ಣಚಂದ್ರ ಕಣೆಮರಡ್ಕ ನಿಧನ

ಮಂಡೆಕೋಲು ಗ್ರಾಮದ  ಪೂರ್ಣಚಂದ್ರ ಕಣೆಮರಡ್ಕ ಅಸೌಖ್ಯದಿಂದ ಫೆ.04 ರಂದು ನಿಧನರಾದರು. ಅವರು  ಮಂಡೆಕೋಲು ಗ್ರಾ.ಪಂ.ಮಾಜಿ ಸದಸ್ಯರಾಗಿ, ಕಳೇರಿ ಉಳ್ಳಾಕುಲು ದೈವಸ್ಥಾನದ ಸೇವಾ ಸಮಿತಿ ಅಧ್ಯಕ್ಷರಾಗಿ, ಕಣೆಮರಡ್ಕ ವಿಷ್ಣುಮೂರ್ತಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.ಮೃತರು ತಾಯಿ, ಪತ್ನಿ, ಪುತ್ರ, ಪುತ್ರಿ, ಸಹೋದರರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
Ad Widget

ಡಾ. ಹರಿಣಾಕ್ಷಿ ಕೇವಳ ಅವರಿಗೆ ಪಿ.ಎಚ್.ಡಿ ಪದವಿ

ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ 21ನೇ ಘಟಿಕೋತ್ಸವದಲ್ಲಿ 2026 ಜ.31 ರಂದು ನಡೆದ ಸಮಾರಂಭದಲ್ಲಿ ಡಾ. ಹರಿಣಾಕ್ಷಿ ಎಂ.ಡಿ ಕೇವಳ ಇವರಿಗೆ ಕರ್ನಾಟಕ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ಪಿ.ಎಚ್.ಡಿ ಪದವಿ ಪ್ರದಾನ ಮಾಡಿದರು. ಡಾ. ಹರಿಣಾಕ್ಷಿ ಅವರು ಉಡುಪಿಯ ಕಲ್ಯಾಣಪುರದಲ್ಲಿರುವ ಮಿಲಾಗ್ರಿಸ್ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಎಂ.ಫಿಲ್‌....

ಸಿವಿಲ್‌ ಡಿಫೆನ್ಸ್‌ ಚೀಫ್‌ ವಾರ್ಡನ್‌ ಆಗಿ ಡಾ. ಚೂಂತಾರು ನೇಮಕ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸಿವಿಲ್‌ ಡಿಫೆನ್ಸ್‌(ಪೌರ ರಕ್ಷಣೆ) ವಿಭಾಗದ ಚೀಫ್‌ ವಾರ್ಡನ್ ಆಗಿ ಡಾ. ಮುರಲೀ ಮೋಹನ್ ಚೂಂತಾರು ಅವರನ್ನು ನೇಮಕ ಮಾಡಲಾಗಿದೆ.ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಹೋಂ ಗಾರ್ಡ್ಸ್, ನಾಗರಿಕ ರಕ್ಷಣಾ ವಿಭಾಗದ ಕಮಾಂಡೆಂಟ್ ಜನರಲ್ ಅವರು ಫೆ.2ರಂದು ಈ ಆದೇಶ ಹೊರಡಿಸಿದ್ದಾರೆ.ನಾಗರಿಕ ರಕ್ಷಣಾ ಕಾಯಿದೆ 1968ರ ಕಲಂ 5(1)ರ ಅನ್ವಯ ತಕ್ಷಣದಿಂದ...

ದ್ವಾದಶ ರಾಶಿಗಳ ದಿನ ಭವಿಷ್ಯ

ದಿನಾಂಕ: 04-02-2026 ಬುಧವಾರ*01,🐏ಮೇಷರಾಶಿ🐏*🌻,ನಿಮ್ಮ ಕೋಪವೂ ಹೆಚ್ಚು ಸಮಸ್ಯೆಗಳನ್ನು ಉಂಟುಮಾಡಬಹುದು. ಗಂಡ ಹೆಂಡತಿಯರ ಮಧ್ಯದಲ್ಲಿ ಅಥವಾ ಬಂಧುಮಿತ್ರರೊಂದಿಗೆ ಜಗಳಗಳಾಗುವ ಸಂಭವವಿದೆ, ವಿದ್ಯಾರ್ಥಿಗಳು ಅಧ್ಯಯನದ ವಿಚಾರದಲ್ಲಿ ಬಹಳಷ್ಟು ಪ್ರಯತ್ನ ಪಡಬೇಕಾಗಬಹುದು. ಉದ್ಯೋಗದ ವಿಚಾರದಲ್ಲಿ ನಿಮ್ಮ ಮೇಲಾಧಿಕಾರಿಗಳ ಸಹಾಯ ಮತ್ತು ಸಲಹೆ ಪಡೆದು ಕೆಲಸ ಮಾಡುವುದು ಒಳ್ಳೆಯದು,ಪರಿಹಾರ :-ಶ್ರೀ ಕೃಷ್ಣನನ್ನು ಆರಾಧಿಸಿ ಉತ್ತಮ ಫಲ ಸಿಗುವುದು,*02,🐂ವೃಷಭರಾಶಿ🐂*🌻,ಈ ದಿನ ನೀವು ಮಾಡುವ...
error: Content is protected !!