Ad Widget

ದ್ವಾದಶ ರಾಶಿಗಳ ದಿನ ಭವಿಷ್ಯ

ದಿನಾಂಕ: 01-02-2026 ಭಾನುವಾರ

. . . . . . . . .

📝ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197

. . . . . . .

01,🐏ಮೇಷ ರಾಶಿ🐏
📖,ದೂರದ ಪ್ರದೇಶದಲ್ಲಿರುವ ಆತ್ಮೀಯ ಸ್ನೇಹಿತರಿಂದ ಅಮೂಲ್ಯ ಮಾಹಿತಿ ದೊರೆಯುತ್ತದೆ. ಮನೆಯ ಹೊರಗೆ ನಿಮ್ಮ ಮಾತಿಗೆ ಮೌಲ್ಯ ಹೆಚ್ಚಾಗುತ್ತದೆ. ಮೌಲ್ಯದ ವಸ್ತು ಮತ್ತು ವಾಹನಗಳನ್ನು ಖರೀದಿಸಲಾಗುತ್ತದೆ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು,
ಪರಿಹಾರ:- ಕುಲ ದೇವರ ಸ್ಮರಣೆ ಮಾಡಿ,
02,🐂ವೃಷಭ ರಾಶಿ🐂
📖,ಮಿತ್ರರ ಸಹಕಾರದಿಂದ ಕೆಲವು ಕಾರ್ಯಗಳು ಪೂರ್ಣಗೊಳ್ಳುತ್ತದೆ. ಇತರರ ವ್ಯವಹಾರಗಳಿಂದ ದೂರವಿರುವುದು ಉತ್ತಮ. ಸಾಲದ ಒತ್ತಡದಿಂದ ಮುಕ್ತಿ ದೊರೆಯುತ್ತದೆ. ಮಾನಸಿಕ ಪ್ರಶಾಂತತೆ ದೊರೆಯುತ್ತದೆ,
ಪರಿಹಾರ:- ಬಡ ಮಕ್ಕಳಿಗೆ ಬಟ್ಟೆ ದಾನ ಮಾಡಿ,
03,🧚‍♀️ಮಿಥುನ ರಾಶಿ🧚‍♀️
📖,ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯಗಳಿದ್ದು ಆರೋಗ್ಯದ ವಿಚಾರದಲ್ಲಿ ಜಾಗ್ರತೆ ವಹಿಸಬೇಕು. ಕೈಗೆತ್ತಿಕೊಂಡ ಕೆಲಸಗಳು ಸ್ವಲ್ಪಮಟ್ಟಿಗೆ ಮಂದಗತಿಯಲ್ಲಿರುತ್ತವೆ ಮತ್ತು ಎಲ್ಲಾ ಕ್ಷೇತ್ರಗಳಲ್ಲಿನ ಎಲ್ಲಾ ಜನರ ಆರ್ಥಿಕ ಪರಿಸ್ಥಿತಿಯು ತುಂಬಾ ಕಳಪೆಯಾಗಿರುತ್ತದೆ. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ,
ಪರಿಹಾರ:- ಮಾತೇ ಮಹಾಲಕ್ಷ್ಮಿಯನ್ನು ಪ್ರಾರ್ಥಿಸಿ,
04,🦀ಕರ್ಕ ರಾಶಿ🦀
📖,ವೃತ್ತಿ ವ್ಯವಹಾರದಲ್ಲಿ ಲಾಭ ದೊರೆಯುತ್ತದೆ. ಆರ್ಥಿಕ ಪರಿಸ್ಥಿತಿಗಳು ಉತ್ತಮವಾಗಿರುತ್ತದೆ ಮತ್ತು ಭೂಮಿ ಮಾರಾಟದಲ್ಲಿ ಲಾಭವನ್ನು ಪಡೆಯಲಾಗುತ್ತದೆ. ಅಧಿಕಾರಿಗಳ ಕೃಪಾಶೀರ್ವಾದದಿಂದ ಉದ್ಯೋಗಲ್ಲಿ ಬಡ್ತಿ ಹೆಚ್ಚಾಗುತ್ತದೆ. ನಿರುದ್ಯೋಗ ಪ್ರಯತ್ನಗಳು ಲಾಭದಾಯಕವಾಗಿರುತ್ತದೆ. ವ್ಯಾಪಾರಗಳು ಲಾಭದಾಯಕವಾಗಿರುತ್ತವೆ,
ಪರಿಹಾರ:- ಶ್ರೀ ಶ್ರೀ ಸಿದ್ದಲಿಂಗೇಶ್ವರರನ್ನು ಪ್ರಾರ್ಥಿಸಿ,
05,🦁ಸಿಂಹ ರಾಶಿ🦁
📖,ಕೈಗೊಂಡ ಕಾರ್ಯಗಳಲ್ಲಿ ಯಶಸ್ವಿಯಾಗುತ್ತೀರಿ. ಆಪ್ತ ಸ್ನೇಹಿತರಿಂದ ಮಹತ್ವದ ಮಾಹಿತಿ ಸಿಗುತ್ತದೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶಗಳು ದೊರೆಯುತ್ತವೆ. ಇತರರಿಗೆ ಸಹಾಯ ನೀಡುತ್ತೀರಿ,
ಪರಿಹಾರ:- ದುರ್ಗಾದೇವಿಯ ಪ್ರಾರ್ಥನೆ ಮಾಡಿ,
06,👩‍🦰ಕನ್ಯಾ ರಾಶಿ👩‍🦰
📖,ಸಮಾಜದ ಪ್ರಮುಖ ವ್ಯಕ್ತಿಗಳಿಂದ ಅಪರೂಪದ ಆಹ್ವಾನಗಳು ಸಿಗುತ್ತವೆ. ನಿಗದಿತ ಸಮಯಕ್ಕೆ ಕೆಲಸಗಳು ಪೂರ್ಣಗೊಳ್ಳುತ್ತವೆ. ನಿರ್ಣಾಯಕ ಸಮಯದಲ್ಲಿ ನಿಕಟ ಸ್ನೇಹಿತರು ನಿಮಗೆ ಸಹಾಯ ಮಾಡುತ್ತಾರೆ. ಬೆಲೆಬಾಳುವ ವಸ್ತ್ರ, ಆಭರಣ ಖರೀದಿಸಲಾಗುತ್ತದೆ,
ಪರಿಹಾರ:- ಗೋಸಲ ಶ್ರೀ ಗುರು ಚನ್ನಬಸವೇಶ್ವರರನ್ನು ಪ್ರಾರ್ಥಿಸಿ,
7,⚖️ತುಲಾ ರಾಶಿ⚖️
📖,ಹಿರಿಯರ ಆರೋಗ್ಯದ ಶುಭ ಸುದ್ದಿ ದೊರೆಯುತ್ತದೆ. ಕುಟುಂಬ ವ್ಯವಹಾರಗಳಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ ಮತ್ತು ದೀರ್ಘಾವಧಿಯ ಸಾಲಗಳು ಇತ್ಯರ್ಥವಾಗುತ್ತವೆ. ಹಳೆಯ ಸ್ನೇಹಿತರೊಂದಿಗೆ ಮನೆಯಲ್ಲಿ ಸಂತೋಷದಿಂದ ಕಳೆಯುತ್ತೀರಿ. ಆರ್ಥಿಕ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ,
ಪರಿಹಾರ:- ಗ್ರಾಮ ದೇವತೆಯನ್ನು ಪೂಜಿಸಿ,
08,🦂ವೃಶ್ಚಿಕ ರಾಶಿ🦂
📖,ಮಕ್ಕಳು ಶಿಕ್ಷಣ ವಿಷಯಗಳತ್ತ ಗಮನ ಹರಿಸಬೇಕು. ದೇವರ ದಯೆಯಿಂದ ಕೆಲವು ಕಾರ್ಯಗಳು ಪೂರ್ಣಗೊಳ್ಳುತ್ತವೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಆರಂಭಿಸಿದ ಕೆಲಸ ನಿಗದಿತ ಸಮಯದಲ್ಲಿ ಪೂರ್ಣಗೊಳ್ಳುತ್ತದೆ. ವ್ಯರ್ಥ ಪ್ರಯಾಣಗಳನ್ನು ಮಾಡಬೇಕಾಗುತ್ತದೆ,
ಪರಿಹಾರ:- ಈ ದಿನ ವೆಂಕಟೇಶ್ವರನ ದರ್ಶನ ಮಾಡಿ,
09,🏹ಧನು ರಾಶಿ🏹
📖,ವೃತ್ತಿ ವ್ಯವಹಾರದಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ. ಕುಟುಂಬದ ಸದಸ್ಯರ ವರ್ತನೆಯಿಂದ ಮಾನಸಿಕ ಚಿಂತನೆ ಉಂಟಾಗುತ್ತದೆ,
ಪರಿಹಾರ:- ಮಾತೇ ಚಾಮುಂಡೇಶ್ವರಿಯನ್ನು ಪ್ರಾರ್ಥಿಸಿ,
10,🐊ಮಕರ ರಾಶಿ🐊
📖,ಮಿತ್ರರೊಂದಿಗಿನ ವಿವಾದಗಳು ಬಗೆಹರಿಯುತ್ತವೆ. ಕೈಗೊಂಡ ಕಾರ್ಯಗಳಲ್ಲಿ ಅಡೆತಡೆಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ ದೈವಿಕ ಸೇವಾ ಕಾರ್ಯಕ್ರಮಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಬಂಧುಮಿತ್ರರೊಡನೆ ಭೋಜನ ಮತ್ತು ಮನರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ,
ಪರಿಹಾರ :- ಆಂಜನೇಯನ ಪ್ರಾರ್ಥನೆ ಮಾಡಿ,
11,⚱️ಕುಂಭ ರಾಶಿ⚱️
📖,ಆರ್ಥಿಕ ಪರಿಸ್ಥಿತಿ ಸೀಮಿತವಾಗಿರುತ್ತದೆ. ವ್ಯರ್ಥ ಪ್ರಯಾಣವನ್ನು ಮಾಡುತ್ತೀರಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸ , ಎಲ್ಲಾ ವರ್ಗದವರಿಗೂ ಇದು ಸೂಕ್ತ ಅವಧಿಯಾಗಿದೆ. ಹೊಸ ಕಾರ್ಯಕ್ರಮಗಳನ್ನು ಆರಂಭಿಸಲಾಗುತ್ತದೆ. ಸಂಬಂಧಿಕರೊಂದಿಗಿನ ವಿವಾದಗಳು ಬಗೆಹರಿಯುತ್ತವೆ,
ಪರಿಹಾರ:- ಉಕ್ಕಡದ ದುರ್ಗಿಯನ್ನು ನೆನೆಯಿರಿ,
12,🐬ಮೀನ ರಾಶಿ🐬
📖,ಹಣಕಾಸಿನ ವ್ಯವಹಾರಗಳು ಹೆಚ್ಚು ಅನುಕೂಲಕರವಾಗಿರುತ್ತದೆ. ಕುಟುಂಬ ಸದಸ್ಯರೊಂದಿಗೆ ಸಂತೋಷದಿಂದ ಕಳೆಯುತ್ತೀರಿ. ಹೊಸ ವ್ಯವಹಾರಗಳಲ್ಲಿ ಹೂಡಿಕೆ ಮಾಡುತ್ತೀರಿ ಮತ್ತು ಆಧ್ಯಾತ್ಮಿಕ ಸೇವಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ,
ಪರಿಹಾರ:- ನಿಮಗೆ ಪಾಠ ಮಾಡಿದ ಗುರುಗಳನ್ನು ನೆನೆಯಿರಿ.

📝ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197

🕉️ ಧಾರ್ಮಿಕ ವಿಚಾರ – ದಿನದ ವಿಶೇಷ 🕉️
📖 ತಾರೀಕು #01:02:2026 ರಂದು ಭಾನುವಾರ ಹುಣ್ಣಿಮೆ. ಈ ಹುಣ್ಣಿಮೆಯನ್ನು ಭಾರತ ಹುಣ್ಣಿಮೆ ಎಂದು ಕರೆಯಲಾಗುತ್ತದೆ. ಇದು ಅತ್ಯಂತ ಶ್ರೇಷ್ಠ ಹುಣ್ಣಿಮೆಯಾಗಿರುವುದರಿಂದ ಈ ವಸ್ತುಗಳನ್ನು ಮನೆಗೆ ತಂದರೆ. ಉತ್ತಮ ಫಲಿತಾಂಶ ದೊರೆಯುತ್ತದೆ ಹಾಗೂ ನಿಮ್ಮ ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ,
🌕. ಈ ದಿನದಂದು 01= ಹರಿಶಿಣ.02= ಏಲಕ್ಕಿ.03= ಸಾಸಿವೆ.04= ಪೂಜೆಯಲ್ಲಿ ಬಳಸಲು ಡಮರುಗ. ಈ ವಸ್ತುಗಳನ್ನು ಮನೆಗೆ ತರುವುದರಿಂದ. ನಿಮ್ಮ ಜಾತಕದಲ್ಲಿನ ದೋಷಗಳು ದೂರವಾಗಿ. ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ಎಂದು ಹೇಳಲಾಗುತ್ತದೆ,
🌕, ಈ ದಿನದಂದು ಒಂದು ತಾಮ್ರದ ಚೆಂಬಿನಲ್ಲಿ. ಚಿಟಿಕೆ ಅರಿಶಿಣವನ್ನು ಬೆರೆಸಿ ನಿಮ್ಮ ಮನೆಯ ಹತ್ತಿರವಿರುವ ಅರಳಿ ಮರದ ಬುಡಕ್ಕೆ ಅರ್ಪಿಸಿ. ಹಾಗೂ ಮೂರು ಪ್ರದರ್ಶನೆಯನ್ನು ಹಾಕಿ. ಇದರಿಂದ ಹೆಣ್ಣು ಮಕ್ಕಳಿಗೆ ಸೌಭಾಗ್ಯ ದೊರೆಯುವುದಲ್ಲದೆ ಮಾತೇ ಮಹಾಲಕ್ಷ್ಮಿಯ ಆಶೀರ್ವಾದ ದೊರೆಯುತ್ತದೆ, ಹಾಗೂ ವರ್ಷಪೂರ್ತಿ ಧನಪ್ರಾಪ್ತಿಯಾಗುತ್ತದೆ. ಎಂದು ಹೇಳಲಾಗುತ್ತದೆ,
🌕, ಈ ದಿನದಂದು ಪೂಜಾ ಸಮಯದಲ್ಲಿ ಅರಿಶಿಣ ಏಲಕ್ಕಿ ಸಾಸಿವೆ ಡಮರುಗ. ಪೂಜಿಸುವುದರ ಜೊತೆಗೆ. ಪೂಜೆಗೆ ಡಮರುಗವನ್ನು ಬಳಸಿದರೆ ಉತ್ತಮ. ಇದರಿಂದ ನಿಮ್ಮ ಮನೆಯ ವಾಸ್ತು ದೋಷ ನಿವಾರಣೆಯಾಗುತ್ತದೆ. ಹಾಗೂ ಶಿವನ ಆಶೀರ್ವಾದ ದೊರೆಯಲಿದೆ. ನಿಮಗೆ ಧನ ಲಾಭ ದೊರೆಯಲಿದ್ದು ನಿಮ್ಮ ಸಾಲದ ಸಮಸ್ಯೆಗಳಿದ್ದರೆ ಅದರಿಂದ ಮುಕ್ತಿಯನ್ನು ಹೊಂದಬಹುದು ಎಂದು ಹೇಳಲಾಗುತ್ತದೆ,
🌕, ಈ ಹುಣ್ಣಿಮೆಯ ದಿನದಂದು ನೀವು ಮನೆಯಲ್ಲಿ ಭಕ್ತಿಯಿಂದ ಪೂಜಿಸುವುದರಿಂದ. ನಿಮ್ಮ ಮನೆಯಲ್ಲಿ ಮಂಗಳ ಕಾರ್ಯ ನಡೆಯುತ್ತದೆ. ಹಾಗೂ ಪೂಜಿಸಿರುವ ಏಲಕ್ಕಿಯನ್ನು ಒಂದನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯದ ಸಮಸ್ಯೆಗಳು ಬಗೆಹರಿಯುತ್ತವೆ. ಹಾಗೂ ನಿಮಗೆ ಉತ್ತಮ ಆರೋಗ್ಯ ಲಭಿಸುತ್ತದೆ, ಎಂದು ಹೇಳಲಾಗುತ್ತದೆ,


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading