Ad Widget

ಕುಲ್ಕುಂದ – ಬಿಸಿಲೆ ಗಡಿ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯಕ್ರಮ

ಸುಬ್ರಹ್ಮಣ್ಯ ಫೆಬ್ರವರಿ 01 : ನಾಗರಾಧನೆಯ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ದೇಶದಾದ್ಯಂತ ವಿವಿಧ ಭಾಗಗಳಿಂದ ಸಾವಿರಾರು ಜನರು ದಿನಂಪ್ರತಿ ಆಗಮಿಸುತ್ತಿದ್ದಾರೆ‌. ಅದರೊಂದಿಗೆ ರಸ್ತೆಗಳ ಇಕ್ಕೆಲೆಗಳಲ್ಲಿ, ನಿರ್ಜನ ಪ್ರದೇಶಗಳಲ್ಲಿ ವಿವಿಧ ವಾಹನಗಳಲ್ಲಿ ಬರತಕ್ಕಂತಹ ಪ್ರಯಾಣಿಕರು ಎಲ್ಲಿಂದರಲ್ಲಿ ಕಸ, ಪ್ಲಾಸ್ಟಿಕ್ ಬಾಟಲ್, ಪ್ಲಾಸ್ಟಿಕ್ ತಟ್ಟೆಗಳನ್ನು ಹಾಗೂ ಇನ್ನಿತರ ಕಚ್ಚಾ ವಸ್ತುಗಳನ್ನು ಹಾಕಿ ಪರಿಸರವನ್ನ ಮಲಿನ ಮಾಡುವಂತದ್ದು ಸರ್ವೇಸಾಮಾನ್ಯವಾಗಿದೆ. ಹಾಗೆಯೇ ಕುಲ್ಕುಂದ ಗಡಿ ಚಾಮುಂಡೇಶ್ವರಿ ಸನ್ನಿಧಿಯ ಪರಿಸರದಲ್ಲಿ ವಾಹನಗಳಲ್ಲಿ ಬರುವ ಪ್ರಯಾಣಿಕರು ಹಾಗೂ ಮೋಜು ಮಸ್ತಿ ಮಾಡತಕ್ಕಂಥ ಜನರು ಇಡೀ ಪರಿಸರವನ್ನು ಮಲಿನ ಗೊಳಿಸಿರುತ್ತಾರೆ. ಇದನ್ನು ಮನಗಂಡ ಸುಬ್ರಹ್ಮಣ್ಯದ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ನ ಸಂಸ್ಥಾಪಕರಾದ ಡಾ. ರವಿ ಕಕ್ಕೆಪದವು ಹಾಗೂ ಅವರ ತಂಡದವರು ರವಿವಾರ ಇಡೀ ಪ್ರದೇಶವನ್ನ ಸ್ವಚ್ಛಗೊಳಿಸುವ ಕಾರ್ಯಕ್ಕೆ ತೊಡಗಿದ್ದಾರೆ.
ಇವರೊಂದಿಗೆ ಬಿಳಿನಲೆ-ಕೈಕಂಬ ಭಜನಾ ಮಂಡಳಿಯ ಮುಖ್ಯಸ್ಥರಾದ ಪದ್ಮನಾಭ ಪಳ್ಳಿಗದ್ದೆ, ಇವರೊಂದಿಗೆ ಕಡಬ ಯುವ ವಾಣಿ ಸಮಿತಿ ಅಧ್ಯಕ್ಷರಾದ ಉಮೇಶ್ ಹಾಗೂ ಅವರ ತಂಡದವರು ಕೂಡ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವರು.
ಈ ಸಂದರ್ಭದಲ್ಲಿ ಅವರು ಸಮಾಜಕ್ಕೆ ಸಂದೇಶವನ್ನು ನೀಡುತ್ತಾ, “ಯಾರೊಬ್ಬರೂ ಪರಿಸರವನ್ನ ಹಾಳು ಕೆಡವಲು  ಹೋಗಬಾರದು, ಅಲ್ಲದೆ ತಮ್ಮಲ್ಲಿ ಇರುವ ಪ್ಲಾಸ್ಟಿಕ್ ಬಾಟಲ್, ಚೀಲ, ಪ್ಲೇಟ್  ಮುಂತಾದವುಗಳನ್ನು ತಾವುಗಳು ತಮ್ಮ ವಾಹನದಲ್ಲಿ ವಾಪಸ್ ತಮ್ಮ ಊರಿಗೆ ಕೊಂಡುಹೋಗಬೇಕು ಅಥವಾ ಎಲ್ಲಿ ಡಸ್ಟ್ ಬಿನ್ ಇರುತ್ತದೆ ಅಲ್ಲಿ ಹಾಕಬೇಕು” ಎಂದು ಹೇಳಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading