- Saturday
- March 7th, 2026
ಸುಬ್ರಹ್ಮಣ್ಯ ಜನವರಿ 6 : ಕನ್ನಡ, ತೆಲುಗು, ತುಳು ಭಾಷೆಗಳಲ್ಲಿ ನಟಿಸಿರುವ ಖ್ಯಾತ ಹಿರಿಯ ಚಲನಚಿತ್ರ ನಟ ಸುಮನ್ ತಲ್ವಾರ್, ಪತ್ನಿ ಸಿರಿಶಾ ಹಾಗೂ ಮಗಳು ಅತೀಶ್ವರೊಂದಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಇಂದು ಭೇಟಿ ನೀಡಿದರು. ದೇವಸ್ಥಾನದಲ್ಲಿ ನಾಗ ಪ್ರತಿಷ್ಠೆ, ಆಶ್ಲೇಷ ಬಲಿ ಮತ್ತು ಪಂಚಾಮೃತ ಮಹಾಭಿಷೇಕ ಪೂಜೆಯಲ್ಲಿ ಪಾಲ್ಗೊಂಡರು.ಶ್ರೀ ದೇವಳದ ಆಡಳಿತ ಕಚೇರಿಗೆ...
“ವಿದ್ಯಾರ್ಥಿಗಳ ನೈಜ ಸಮಸ್ಯೆಗಳ ಕುರಿತು ಧ್ವನಿ ಎತ್ತಿದಾಗ ಅದಕ್ಕೆ ಧನಿಗೂಡಿಸುವ ಬದಲು ಆಡಳಿತದ ಚೇಲಾಗಳಂತೆ ವರ್ತಿಸಿರುವ ಎನ್.ಎಸ್.ಯು.ಐ ನಾಯಕರ ಹೇಳಿಕೆ ಬಾಲಿಷವಾಗಿದ್ದು, ಅದು ಅವರ ಸ್ವಂತ ಆಲೋಚನೆಯಲ್ಲ, ಯಾರೋ ಬರೆದು ಕೊಟ್ಟ ಹೇಳಿಕೆಯಂತೆಯೇ ಕಾಣುತ್ತದೆ. ವಿದ್ಯಾರ್ಥಿಗಳ ಸಂಕಷ್ಟವನ್ನು ಅರಿಯದೇ, ಹೋರಾಟದ ಉದ್ದೇಶವನ್ನೇ ಮರೆತಿದ್ದು, ಇಂತಹ ಪ್ರತಿಕ್ರಿಯೆ ದೌರ್ಭಾಗ್ಯಕರವಾಗಿದೆ. ಇಂತಹ ಹೇಳಿಕೆಗಳಿಂದ ಆ ವಿದ್ಯಾರ್ಥಿ ನಾಯಕರು ಅಥವಾ...
ಪಿ.ಎಂ ಪೋಷಣ್ ಯೋಜನೆಯ ಅಡಿಯಲ್ಲಿ ಸುಳ್ಯ ತಾಲೂಕು ಪಂಚಾಯತ್ ನಲ್ಲಿ ಜ.04ರಂದು ನಡೆದ ಸುಳ್ಯ ತಾಲೂಕು ಮಟ್ಟದ ಅಕ್ಷರ ದಾಸೋಹ ಅಡುಗೆ ಸಿಬ್ಬಂದಿಗಳ ಅಡುಗೆ ಸ್ಪರ್ಧೆಯಲ್ಲಿ ಹರಿಹರ ಪಳ್ಳತ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆ ಸಿಬ್ಬಂದಿಗಳಾದ ಶ್ರೀಮತಿ ಕುಸುಮಾ ಹಾಗೂ ಶ್ರೀಮತಿ ಅನುಪಮಾ ರವರು ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.(ವರದಿ : ಉಲ್ಲಾಸ್ ಕಜ್ಜೋಡಿ)
ಬೆಳ್ಳಾರೆ ಗ್ರಾಮದ ಗೌರಿಹೊಳೆಯ ಹತ್ತಿರ ಇರುವ ಹಿಂದೂ ರುದ್ರಭೂಮಿ ಬೆಳ್ಳಾರೆ ಗ್ರಾಮ ಪಂಚಾಯತ್ ವತಿಯಿಂದ ಜ.05 ರಂದು ಲೋಕಾರ್ಪಣೆಗೊಂಡಿತು.ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ನಮಿತ ಎಲ್.ರೈ ರಿಬ್ಬನ್ ಕಟ್ ಮಾಡುವ ಮೂಲಕ ರುದ್ರಭೂಮಿಯನ್ನು ಲೋಕಾರ್ಪಣೆಗೊಳಿಸಿದರು.ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಉದಯಕುಮಾರ್ ಕೆ.ಟಿ ಶಿವಪೂಜೆ ನೆರವೇರಿಸಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ವೀಣಾ...
ಸುಬ್ರಹ್ಮಣ್ಯ ಜನವರಿ 5 : ಸುಳ್ಯ ತಾಲೂಕು ಮಟ್ಟದ ಅಕ್ಷರ ದಾಸೋಹ ವಿವಿಧ ಶಾಲೆಗಳ ಅಡುಗೆ ತಯಾರಿಕರಿಗೆ ಏರ್ಪಡಿಸಲಾದ ಅಡುಗೆ ಸ್ಪರ್ಧೆಯಲ್ಲಿ ಪಂಜ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಅಡುಗೆ ತಯಾರಕರು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ವೀಣಾವರು ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ಸಿ.ಆರ್.ಪಿ ಗಳಾದ ಜಯಂತ ಹಾಗೂ ಮಮತ...
ಗ್ರಾಮೀಣ ಪ್ರದೇಶದಲ್ಲಿ ಅಂಬ್ಯುಲೆನ್ಸ್ ಸೇವೆ, ರಕ್ತದಾನ ಶಿಬಿರ, ತುರ್ತು ಸಂದರ್ಭದಲ್ಲಿ ರಕ್ತದ ಪೂರೈಕೆ, ಯೋಗ ತರಬೇತಿ ಕೇಂದ್ರ, ನೃತ್ಯ ತರಬೇತಿ ಕೇಂದ್ರ, ಚೆಸ್ ತರಬೇತಿ ಕೇಂದ್ರ ಹಾಗೂ ಕರಾಟೆ ತರಬೇತಿ ಕೇಂದ್ರ ಸೇರಿದಂತೆ ವಿವಿಧ ರೀತಿಯ ಸೇವಾ ಕಾರ್ಯಗಳನ್ನು ದಾನಿಗಳ ಸಹಕಾರದಿಂದ ನಡೆಸುತ್ತಾ ಬಂದಿರುವ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ತನ್ನ 5ನೇ ವರ್ಷದ...
ಅನೇಕ ವರುಷಗಳ ಹಿಂದೆ ಸುಳ್ಯದಿಂದ ಸಂಜೆ 6:30ಕ್ಕೆ ಚೊಕ್ಕಾಡಿ ಮೂಲಕ ರಾತ್ರಿ 7:30ಕ್ಕೆ ಬೆಳ್ಳಾರೆಗೆ ತಲುಪಿ ತಂಗುವ ಬಸ್ಸು ಮರುದಿನ ಬೆಳಿಗ್ಗೆ 6:30ಕ್ಕೆ ಬೆಳ್ಳಾರೆಯಿಂದ ಹೊರಡುತ್ತಿತ್ತು. ಇದು ಜನರಿಗೆ ತುಂಬಾ ಪ್ರಯೋಜನ ಆಗುತ್ತಿತ್ತು. ಆದರೆ ಇದನ್ನು ಸುಳ್ಯ ಡಿಪೋ ಆದ ನಂತರ ನಿಲ್ಲಿಸಲಾಯಿತು. ಆದ್ದರಿಂದ ಕೂಡಲೇ ಈ ಬಸ್ಸನ್ನು ಪುನರಾರಂಭಿಸುವ ವಿಚಾರವಾಗಿ ಸುಳ್ಯ ತಾಲೂಕು ಗ್ಯಾರಂಟಿ...
ಹರಿಹರ ಪಳ್ಳತ್ತಡ್ಕ ಗ್ರಾಮದ ಕೆರೆಕ್ಕೋಡಿ ಸೋಮಶೇಖರ ಎಂಬುವವರು ಜ.05 ರಂದು ಮದ್ಯಾಹ್ನ 2:00 ಗಂಟೆಗೆ ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ನಿನ್ನೆ(ಜ.04) ರಾತ್ರಿ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು(ಜ.05) ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.ಮೃತರಿಗೆ 56 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಶ್ರೀಮತಿ ಬೇಬಿ, ಪುತ್ರಿಯರಾದ...
ಐವತ್ತೊಕ್ಲು ಗ್ರಾಮದ ಕರಿಕ್ಕಳ ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದ ಪುನರ್ ನಿರ್ಮಾಣ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಎ.24ರಿಂದ ಮೇ.02 ರವರೆಗೆ ಬ್ರಹ್ಮಕಲಶೋತ್ಸವವು ವಿಜೃಂಭಣೆಯಿಂದ ನಡೆಯಲಿದ್ದು, ಎ.29ರಂದು ಶ್ರೀ ದೇವರ ಪ್ರತಿಷ್ಠೆ ನಡೆಯಲಿದೆ. ಆ ಪ್ರಯುಕ್ತ ಜ.04ರಂದು ಬ್ರಹ್ಮಕಲಶೋತ್ಸವ ಸಮಿತಿ ರಚನೆ ಹಾಗೂ ಸಭೆ ನಡೆಯಿತು.ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಜಯಪ್ರಕಾಶ್ ಕಂಬಳ, ಪಂಜ...
ಕಲ್ಮಕಾರು ಹಿರಿಯ ಪ್ರಾಥಮಿಕ ಶಾಲೆಗೆ ಯುವ ಉದ್ಯಮಿ ಪ್ರವೀಣ್ ಕೊಪ್ಪಡ್ಕ ಅವರು ಸುಮಾರು ಮೂವತ್ತು ಸಾವಿರ ಮೌಲ್ಯದ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಿದ್ದು, ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯ ಧರ್ಮದರ್ಶಿಯವರಾದ ಹರೀಶ್ ಆರಿಕೋಡಿಯವರು ದೀಪ ಬೆಳಗಿ ಉದ್ಘಾಟಿಸಿ ಶಾಲೆಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಧರ್ಮದರ್ಶಿಯವರು ಶಾಲಾ ಮಕ್ಕಳು ಹಾಗೂ...
Loading posts...
All posts loaded
No more posts
