Ad Widget

“ಇನ್ನೊಬ್ಬರಿಗೆ ಅವಮಾನ ಮಾಡುವ ಮನೋರೋಗಿಗಳು ಸಮಾಜದ ನಡುವೆ ಇರಲು ಯೋಗ್ಯರಲ್ಲ”  – ಎನ್.ಎ ರಾಮಚಂದ್ರ

“ಕಡುಬಡತನದ ನಡುವೆ ತನ್ನ ಕಠಿಣ ಪರಿಶ್ರಮದ ಮೂಲಕ ಓರ್ವ ಕಾರ್ಯಕರ್ತೆಯಾಗಿ ಪ್ರಾರಂಭಿಸಿ, ಗ್ರಾಮ ಪಂಚಾಯತ್ ,ಜಿಲ್ಲಾ ಪಂಚಾಯತ್ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿ ಇಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ,  ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುತ್ತಿರುವ ನಮ್ಮ ನೆಚ್ಚಿನ ಶಾಸಕಿ ಕು. ಭಾಗೀರಥಿ ಮುರುಳ್ಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಾಲಗೆ ಹರಿಬಿಟ್ಟ ಕಿಡಿಗೇಡಿಗಳ ವಿರುದ್ಧ...

ಶಾಸಕಿ ಭಾಗೀರಥಿ ಮುರುಳ್ಯರಿಗೆ ಜಾಲತಾಣದಲ್ಲಿ ಅವಹೇಳನ – ಸುಳ್ಯ ತಾಲೂಕು ಗ್ರಾ.ಪಂ ಸದಸ್ಯರ ಒಕ್ಕೂಟ ಖಂಡನೆ

“ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಬಗ್ಗೆ ಫೇಸ್ ಬುಕ್ ನಲ್ಲಿ ಅವಮಾನ ಮಾಡಿದ್ದನ್ನು ನಾವು ತೀವ್ರ ವಾಗಿ ಖಂಡಿಸುತ್ತೇವೆ. ಶಾಸಕರಾದ ಬಳಿಕ ಸುಳ್ಯ ತಾಲೂಕಿನಲ್ಲಿ ಉತ್ತಮ ಕೆಲಸ ನಿರ್ವಹಿಸಿ,  ರಾಜಕೀಯ, ಜಾತಿ ಭೇಧ ಇಲ್ಲದೆ ಸುಳ್ಯ ತಾಲೂಕಿಗೆ ಸರ್ಕಾರದಿಂದ ಹಲವಾರು ಅನುದಾನಗಳನ್ನು ತಂದು ಜನಮೆಚ್ಚುಗೆ ಪಡೆದಿದ್ದಾರೆ.  ಅಂತಹ ದಲಿತ ಶಾಸಕರ ಬಗ್ಗೆ ಅವಮಾನ ಮಾಡಿದಾತನ...
Ad Widget

ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವಾರ್ಷಿಕ ಕ್ರೀಡಾಕೂಟ ಅಪರಾಜಿತ-2026

ಕೆವಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವಾರ್ಷಿಕ ಕ್ರೀಡಾಕೂಟವು ಜನವರಿ 8ರಂದು ಎನ್‌ಎಂಸಿ ಕ್ರೀಡಾಂಗಣದಲ್ಲಿ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಒಎಲ್‌ಇ(ರಿ.) ಸುಳ್ಯ ಅಧ್ಯಕ್ಷರು ಹಾಗೂ ಕೆವಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಕೆ.ವಿ. ಚಿದಾನಂದ ವಹಿಸಿ ಉದ್ಘಾಟನೆಯನ್ನು ನೆರವೇರಿಸಿದರು.ಮುಖ್ಯ ಅತಿಥಿಗಳಾಗಿ ಕೆವಿಜಿ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸಂಸ್ಥೆಯ ಪ್ರಾಂಶುಪಾಲರಾದ ಚಂದ್ರಾವತಿ ಕೆ.ಎಸ್....

ಶಾಸಕರಿಗೆ ಅವಮಾನ ಖಂಡಿಸಿ ಸುಳ್ಯದಲ್ಲಿ ಬಿಜೆಪಿ ಪ್ರತಿಭಟನೆ ; “ಪ್ರಕರಣದ ಗಂಭೀರತೆ ಅರಿತು ಪೋಲಿಸರು ಕ್ರಮ ಕೈಗೊಳ್ಳಬೇಕಿತ್ತು” – ಕಂದಡ್ಕ – “ಶಾಸಕರ ಜನಪ್ರಿಯತೆ ಸಹಿಸದೇ ಈ ರೀತಿ ಮಾಡಿದ್ದಾರೆ” – ಕಂಜಿಪಿಲಿ – “ಸಾಮಾಜಿಕ ನ್ಯಾಯ ಕೊಡಲು ಸರಕಾರ ವಿಫಲ” – ವಳಲಂಬೆ

ಶಾಸಕಿ ಕು. ಭಾಗೀರಥಿ ಮುರುಳ್ಯ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಬರೆದ ಅಘಾತಕಾರಿ ಘಟನೆಯ ವಿರುದ್ಧ ಬಿಜೆಪಿ ಸುಳ್ಯ ಮಂಡಲದ ವತಿಯಿಂದ ಜ.09 ರಂದು ಬೆಳಿಗ್ಗೆ ಸುಳ್ಯದ ಖಾಸಗಿ ಬಸ್ ನಿಲ್ದಾಣದ ಬಳಿ ಬೃಹತ್  ಪ್ರತಿಭಟನೆ ನಡೆಯಿತು. ಪ್ರತಿಭಟನಾ ಸಭೆಯನ್ನುದ್ದೇಶಿಸಿ ಬಿಜೆಪಿ ಸುಳ್ಯ ಮಂಡಲದ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರ.ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ, ಮಹಿಳಾ...

ಸುಳ್ಯ ಜಾತ್ರೋತ್ಸವಕ್ಕೆ ಮೆರುಗು ನೀಡಿದ “ಚೆನ್ನಕೇಶವ ಅಮ್ಯೂಸ್‌ಮೆಂಟ್ ಪಾರ್ಕ್” – ಜಾತ್ರೆಗೆ ಆಗಮಿಸುವ ಜನರನ್ನು ಆಕರ್ಷಿಸುತ್ತಿವೆ ವಿವಿಧ ರೀತಿಯ ವಿನೂತನ ಮನೋರಂಜನಾ ಆಕರ್ಷಣೆಗಳು

ಸುಳ್ಯ ಸೀಮೆಯ ಪುರದೊಡೆಯ ಚೆನ್ನಕೇಶವ ದೇವರಿಗೆ ಜಾತ್ರೋತ್ಸವದ ಸಂಭ್ರಮ ಕಳೆಗಟ್ಟಿದ್ದು, ಈ ಬಾರಿ ರವಿಚಂದ್ರ ಕೊಡಿಯಾಲ್‌ಬೈಲ್ ಸಾರಥ್ಯದಲ್ಲಿ ಜಾತ್ರೋತ್ಸವಕ್ಕೆ ಮೆರುಗು ನೀಡಿದಂತೆ ಶ್ರೀ ಚೆನ್ನಕೇಶವ “ಅಮ್ಯೂಸ್‌ಮೆಂಟ್ ಪಾರ್ಕ್” ರೂಪುಗೊಂಡಿದ್ದು, ವಿನೂತನ ಶೈಲಿಯ ಮನೋರಂಜನಾತ್ಮಕ ಆಕರ್ಷಣೆಗಳು ಜಾತ್ರೋತ್ಸವಕ್ಕೆ ಆಗಮಿಸುವ ಜನರನ್ನು ಆಕರ್ಷಿಸಿ ಅದ್ಭುತ ಮನರಂಜನೆ ನೀಡಲು ಸಜ್ಜಾಗಿದ್ದು, ಕೃಪಾಶಂಕರ ತುದಿಯಡ್ಕ ಉದ್ಘಾಟನೆ ನೆರವೇರಿಸಿ ಶುಭಹಾರೈಸಿದರು.ಈ ಸಂದರ್ಭದಲ್ಲಿ ಗೋಕುಲ್...

ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿ ಕಾಂಕ್ರಿಟೀಕರಣ ಉದ್ಘಾಟನೆ ಹಾಗೂ ಸನ್ಮಾನ ಕಾರ್ಯಕ್ರಮ

ಸುಳ್ಯ ನಗರದ ಹೃದಯ ಭಾಗವಾದ ಖಾಸಗಿ ಬಸ್ ನಿಲ್ದಾಣ ಮತ್ತು ಆಟೋ ಪಾರ್ಕಿಂಗ್ ಮಧ್ಯ ನಿಲ್ದಾಣದ ಪ್ರವೇಶ ರಸ್ತೆ ಭಾಗದಲ್ಲಿರುವ ಪ್ರದೇಶವು ತೀರಾ ಹಾಳಾಗಿರುವುದನ್ನು ಮನಗಂಡು ನಗರ ಪಂಚಾಯತ್ ವತಿಯಿಂದ ರೂ. 5 ಲಕ್ಷ ವೆಚ್ಚದಲ್ಲಿ ನಿರ್ಮಾಣ ಗೊಂಡ ಕಾಂಕ್ರೀಟೀಕರಣ ವನ್ನು ಇಂದು ಲೋಕಾರ್ಪಣೆ ಮಾಡಲಾಯಿತು. ಬಳಿಕ ಮಾತನಾಡಿದ ನಗರ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷೆ...

ಜಿಲ್ಲಾ ಮಟ್ಟದ “ಮರೆತು ಹೋದ ಪಾಕ ಸ್ಪರ್ಧೆ”ಯಲ್ಲಿ ಶಶ್ಮಿ ಭಟ್ ಪ್ರಥಮ

ಅಂತಾರಾಷ್ಟ್ರೀಯ ಮಟ್ಟದ ವಾಣಿಜ್ಯ ಮೇಳ-2026ರ ಪೂರ್ವಭಾವಿಯಾಗಿ ರಾಜ್ಯಾದ್ಯಂತ ವ್ಯಾಪಕವಾಗಿ ಸಿರಿಧಾನ್ಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳಲ್ಲಿ ಒಂದಾದ “ಜಿಲ್ಲಾ ಮಟ್ಟದ ಮರೆತು ಹೋದ ಪಾಕ ಸ್ಪರ್ಧೆ” ಜಂಟಿ ಕೃಷಿ ನಿರ್ದೇಶಕರ ಕಛೇರಿ, ಮಂಗಳೂರು ಕಛೇರಿ ಆವರಣದಲ್ಲಿ ನಡೆಯಿತು.ಮರೆತು ಹೋದ ಪಾಕ ಸ್ಪರ್ಧೆಯಲ್ಲಿ ಶ್ರೀಮತಿ ಶಶ್ಮಿ ಭಟ್ ಅಜ್ಜಾವರ ಪ್ರಥಮ ಸ್ಥಾನ ಗಳಿಸಿರುತ್ತಾರೆ. ಪಾಲಿಶ್ ಮಾಡದ ಕೆಂಪಕ್ಕಿ...

ಶಾಸಕಿ ಭಾಗೀರಥಿ ಮುರುಳ್ಯ ವಿರುದ್ಧ ಜಾಲತಾಣದಲ್ಲಿ ಅವಹೇಳನ – ಪೈಕ ಬೂತ್ ಸಮಿತಿ ಖಂಡನೆ

ಜನಪ್ರಿಯ ಶಾಸಕಿ ಕು.‌ಭಾಗೀರಥಿ ಮುರುಳ್ಯ ಇವರ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ  ಅಸಭ್ಯವಾದ ಪೋಸ್ಟ್ ಗಳನ್ನು ಹಾಕಿರುವುದನ್ನು ಗುತ್ತಿಗಾರು-ಪೈಕ 124 ನೇ ಬೂತ್ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ಇದು ಒಬ್ಬ ಜನಪ್ರತಿನಿಧಿಯ ವೈಯಕ್ತಿಕ ನಿಂದನೆಯಲ್ಲಿ ಪ್ರಜಾಪ್ರಭುತ್ವದ ಮೌಲ್ಯಕ್ಕೆ ಮಾಡಿರುವ ದ್ರೋಹ ಆಗಿರುತ್ತದೆ. ಹಾಗೂ ತಾಲೂಕಿನ ಎಲ್ಲಾ ಸಮುದಾಯದ ಜನರಿಗೆ ದೊರಕುವ ಹಾಗೂ ಕಷ್ಟಗಳಿಗೆ ಸ್ಪಂದಿಸುವ ಕ್ಷೇತ್ರದ ಅಭಿವೃಧ್ಧಿಗೆ...

ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ; ಸೂಕ್ತ ಕ್ರಮ ಕೈಗೊಳ್ಳುವಂತೆ ಸುಬ್ರಹ್ಮಣ್ಯ ಬಾಜಪಾ ಮಹಾಶಕ್ತಿ ಕೇಂದ್ರದ ವತಿಯಿಂದ ಮನವಿ ಸಲ್ಲಿಕೆ

ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು. ಭಾಗೀರಥಿ ಮುರುಳ್ಯ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿರುವ ಬಂಟ್ವಾಳ ಸಂದೇಶ್ ಬಿಲ್ಲವ ಎಂಬ ವ್ಯಕ್ತಿಯ ವಿರುದ್ಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಯಿತು‌. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಜಾತ, ಧನಂಜಯ ಉಪಾಧ್ಯಕ್ಷರಾದ ರಾಜೇಶ್ ಎನ್.ಎಸ್,...

ಚಲನಚಿತ್ರ ನಟಿ ರಕ್ಷಿತಾ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ

ಸುಬ್ರಹ್ಮಣ್ಯ ಜನವರಿ 8 : ಕನ್ನಡ ಚಲನಚಿತ್ರ ರಂಗದ ಖ್ಯಾತ ನಟಿ ರಕ್ಷಿತಾ ಅವರು ಕುಟುಂಬ ಸಮೇತರಾಗಿ ಇಂದು ಗುರುವಾರ ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು. ಶ್ರೀ ದೇವಳದಲ್ಲಿ ದೇವರ ದರ್ಶನ ಮಾಡಿ ಮಹಾಪ್ರಸಾದ ಸ್ವೀಕರಿಸಿದರು.ತದನಂತರ ಕ್ಷೇತ್ರದ ದೈವ ಹೊಸಳ್ಳಿಗಮ್ಮ ಗುಡಿಯಲ್ಲಿ ದರ್ಶನ ಮಾಡಿ ಅಲ್ಲಿಂದ ಮುಂದೆ ಶ್ರೀ ದೇವಳದ ಆಡಳಿತ ಕಚೇರಿಗೆ ತೆರಳಿದರು....
Loading posts...

All posts loaded

No more posts

error: Content is protected !!