- Saturday
- March 7th, 2026
ಹರಿಹರ ಪಳ್ಳತ್ತಡ್ಕ ಗ್ರಾಮದ ಎಲ್ಲಪಡ್ಕ ಶ್ರೀ ಗುಳಿಗರಾಜ ದೈವಸ್ಥಾನದಲ್ಲಿ ಜ.31ನೇ ಶನಿವಾರದಂದು ಶ್ರೀ ಗುಳಿಗರಾಜ ದೈವದ ವಾರ್ಷಿಕ ನೇಮೋತ್ಸವವು ನಡೆಯಲಿದ್ದು, ಬೆಳಿಗ್ಗೆ 7:00 ಗಂಟೆಗೆ ಗಣಹೋಮ, ಬೆಳಿಗ್ಗೆ 9:00 ಗಂಟೆಗೆ ಭಂಡಾರ ಹೊರಡುವುದು, ಬೆಳಿಗ್ಗೆ 9:30ಕ್ಕೆ ಶಿವಪೂಜೆ, ಬೆಳಿಗ್ಗೆ 10:00 ಗಂಟೆಗೆ ಬ್ರಹ್ಮ ರಾಕ್ಷಸ ಪೂಜೆ ಹಾಗೂ ಕಲಶಪೂಜೆ, ಮದ್ಯಾಹ್ನ 12:00 ಗಂಟೆಗೆ ಮಹಾಪೂಜೆ ಹಾಗೂ...
ನಾಲ್ಕೂರು ಗ್ರಾಮದ ಪಂಜಿಪಳ್ಳ ನಿವಾಸಿ ದಿವ್ಯ ಚಿದ್ಗಲ್ಲು ಎಂಬುವವರ ಚಿನ್ನದ ಸರ ಜ.20ರಂದು ಕಳೆದು ಹೋಗಿತ್ತು. ಕಳೆದು ಸರ ಪತ್ತೆ ಮಾಡಿಕೊಡುವಂತೆ ಉಜಿರಡ್ಕ ಕೊರಗಜ್ಜ ದೈವದಲ್ಲಿ ಪ್ರಾರ್ಥಿಸಿದ ಕೂಡಲೇ ಕಳೆದು ಹೋದ ಚಿನ್ನದ ಸರ ಪತ್ತೆಯಾಗಿದ್ದು, ನಂಬಿದವರಿಗೆ ಕೊರಗಜ್ಜ ದೈವ ತನ್ನ ಕಾರ್ಣಿಕವನ್ನು ತೋರಿಸಿಕೊಟ್ಟಿದೆ.
ಸುಳ್ಯದ ಸೈಂಟ್ ಬ್ರಿಜಿಡ್ಸ್ ಶಾಲೆಯ ಅಮೃತ ಮಹೋತ್ಸವದಲ್ಲಿ ಭಾಗವಹಿಸಲು ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ಡಾ. ಪೀಟರ್ ಪೌಲ್ ಸಾಲ್ದಾನಾ ರವರು ಸುಳ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುಳ್ಯ ನಗರ ಯೋಜನಾ ಪ್ರಾಧಿಕಾರ(ಸೂಡ) ಅಧ್ಯಕ್ಷರಾದ ಕೆ.ಎಂ. ಮುಸ್ತಫ ಹಾಗೂ ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ಎಂ.ವೆಂಕಪ್ಪ ಗೌಡ ರವರು ಹೂಗುಚ್ಛ ನೀಡಿ ಸ್ವಾಗತಿಸಿದರು.
ಬೆಳ್ಳಾರೆ ಗ್ರಾಮದ ದರ್ಖಾಸ್ತು ನಿವಾಸಿ ಪಾಂಡೇಲು ಗುತ್ತು ಸಂಜೀವ ಶೆಟ್ಟಿಯವರುಜ 20ರಂದು ನಿಧನರಾದರು.ಅವರಿಗೆ 76 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ದಿನೇಶ್ ದರ್ಖಾಸ್ತು, ಪುತ್ರಿಯರಾದ ಶ್ರೀಮತಿ ದೀಪ, ದಿವ್ಯ ಚಂದ್ರಶೇಖರ ನಂಜೆ, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.
ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ ಗುತ್ತು ಮನೆಯ ಹಿರಿಯರಾದ ಲೀಲಾವತಿ ರೈ ಬೆಳ್ಳಿಪ್ಪಾಡಿ ಅವರು ಜ.20ರಂದು ಸಂಜೆ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.ಅವರಿಗೆ 90 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಚಂದ್ರಹಾಸ ರೈ, ಸದಾನಂದ ರೈ, ಜಗದೀಶ ರೈ, ರಾಮಕೃಷ್ಣ ರೈ ಹಾಗೂ ಪುತ್ರಿಯರಾದ ನಳಿನಿ ರೈ, ಜಯಂತಿ ರೈ, ಪವಿತ್ರ ರೈ ಹಾಗೂ ಸೊಸೆಯಂದಿರು, ಬಂಧುಮಿತ್ರರು...
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ನಗರ ಇದರ ಪದಾಧಿಕಾರಿಗಳು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ರವರಿಗೆ ಗ್ರಾಮೀಣ ಭಾಗದ ಬಸ್ ಸಮಸ್ಯೆ ಬಗ್ಗೆ ಸಲ್ಲಿಸಿದ ಮನವಿಗೆ ಯಶಸ್ಸು ದೊರಕಿದ್ದು, ಸುಳ್ಯ - ಬಾಳುಗೋಡು ಮಾರ್ಗದಲ್ಲಿ ನೂತನ ಬಸ್ ಸಂಪರ್ಕ ಆರಂಭಗೊಂಡಿದೆ. ಬೆಳಿಗ್ಗೆ 7.05ಕ್ಕೆ ಬಾಳುಗೋಡು - ಸುಳ್ಯ, ಸಂಜೆ 5.20ಕ್ಕೆ...
ಗುತ್ತಿಗಾರು ಗ್ರಾಮದ ಪೈಕ ದೇರಣ್ಣ ಗೌಡ ಕನ್ನಡ್ಕ ರವರು ಅಲ್ಪಕಾಲದ ಅಸೌಖ್ಯದಿಂದ ಜ.18 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಬಾಲಕಿ, ಪುತ್ರರಾದ ಚಿದಾನಂದ ಕನ್ನಡ್ಕ, ದಯಾನಂದ ಕನ್ನಡ್ಕ, ಪುತ್ರಿ ಶ್ರೀಮತಿ ನೇತ್ರಾವತಿ ಪುರುಷೋತ್ತಮ ಸೋಣಂಗೇರಿ ಕಲ್ಲಾಜೆ, ಸೊಸೆಯಂದಿರು ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.
ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ಸದಸ್ಯ ಅನಿಲ್ ಬಳ್ಳಡ್ಕ ಜ.20 ರಂದು ನಿಧನರಾದರು. ಅನಾರೋಗ್ಯಕ್ಕೆ ಒಳಗಾದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ 35 ವರ್ಷ ವಯಸ್ಸಾಗಿತ್ತು. ಮೃತರು ತಾಯಿ ಇಂದಿರಾ ದುಗ್ಗಪ್ಪ ಗೌಡ, ಪತ್ನಿ ಕಾವ್ಯ, ಮಕ್ಕಳಾದ ಅನ್ವಿತ್ ಮತ್ತು ದ್ವೀಜಾಶ್ರೀ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಜಾತ್ರೋತ್ಸವವು ನಡೆಯುತ್ತಿದ್ದು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕ ಪಕ್ಕಳ ರವರು ಜ.18 ರಂದು ಭೇಟಿ ನೀಡಿದರು.ಕಾರ್ತಿಕ್ ತಂತ್ರಿಗಳು ವಿಶೇಷ ಪೂಜೆಯ ಪ್ರಸಾದ ನೀಡಿದರು. ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ ಪ್ರವೀಣ್ ಕುಮಾರ್ ಸಿ.ವಿ, ಸುನಿಲ್ ರೈ ಪೆರುವಾಜೆ, ದೀಪಕ್ ಶೆಟ್ಟಿ ಪೆರುವಾಜೆ, ಪದ್ಮನಾಭ ಶೆಟ್ಟಿ ಪೆರುವಾಜೆ, ದೇವಸ್ಥಾನದ ಕಚೇರಿ ನಿರ್ವಾಹಕ...
Loading posts...
All posts loaded
No more posts
