Ad Widget

ಫೆ.1 ಮತ್ತು 2ರಂದು ವಳಲಂಬೆ ಜಾತ್ರೋತ್ಸವ

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ ಹಾಗೂ ದೈವಗಳ ನೇಮೋತ್ಸವ ಫೆ.1 ಮತ್ತು 2 ರಂದು ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ ತಿಳಿಸಿದ್ದಾರೆ.

ಜ.25 ರಂದು ಶ್ರೀ ದೇವರಿಗೆ ಮತ್ತು ದೈವಗಳಿಗೆ ಗೊನೆ ಮುಹೂರ್ತ ನೆರವೇರಿದ್ದು, ಜ.01 ರಂದು ಬೆಳಿಗ್ಗೆ ಗಂಟೆ 8:00ಕ್ಕೆ ಗಣಪತಿ ಹೋಮ, ಮಧ್ಯಾಹ್ನ ಗಂಟೆ 12:00ಕ್ಕೆ ನವ ಕಲಾಶಾಭಿಷೇಕ, ಮಹಾಪೂಜೆ ಮತ್ತು ಅನ್ನಸಂತರ್ಪಣೆ, ಸಂಜೆ 6:00 ರಿಂದ 7:00 ರವರೆಗೆ ದೈವಗಳ ಭಂಡಾರ ತೆಗೆಯುವುದು ಮತ್ತು ಚೆಂಡೆವಾದನ, ರಾತ್ರಿ ಗಂಟೆ 7:30ಕ್ಕೆ ಮಹಾಪೂಜೆ ಮತ್ತು ಅನ್ನಸಂತರ್ಪಣೆ, ರಾತ್ರಿ ಗಂಟೆ 8:00ಕ್ಕೆ ದೇವರ ಉತ್ಸವ ಬಲಿ ಹೊರಡುವುದು, ವಸಂತ ಕಟ್ಟೆ ಪೂಜೆ ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಲಿದೆ.

ಫೆ.02 ರಂದು ಬೆಳಗ್ಗಿನ ಜಾವ 5:00ಕ್ಕೆ ಉಳ್ಳಾಕ್ಲು – ಉಳ್ಳಾಲ್ತಿ ನೇಮ, ಬೆಳಿಗ್ಗೆ ಗಂಟೆ 7:00ಕ್ಕೆ ಕುಮಾರ ದೈವದ ನೇಮ, ಬೆಳಿಗ್ಗೆ ಗಂಟೆ 8:00ಕ್ಕೆ ಶ್ರೀ ದೇವರಿಗೆ ಪೂಜೆ, ಬೆಳಿಗ್ಗೆ ಗಂಟೆ 8:30ಕ್ಕೆ ರಕ್ತೇಶ್ವರಿ ದೈವದ ನೇಮ, ಬೆಳಿಗ್ಗೆ ಗಂಟೆ 9:30ಕ್ಕೆ ಧೂಮಾವತಿ ದೈವದ ನೇಮ, ಮಧ್ಯಾಹ್ನ ಗಂಟೆ 12:00ಕ್ಕೆ ಮಹಾಪೂಜೆ, ಮಧ್ಯಾಹ್ನ ಗಂಟೆ 12:30ಕ್ಕೆ ದೈವಗಳ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ, ಸಂಜೆ 5:00 ಕ್ಕೆ ಗುಳಿಗ ಕೋಲ, ಪ್ರಸಾದ ವಿತರಣೆ ನಡೆಯಲಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading