Ad Widget

ಬೆಳ್ಳಾರೆ ಗ್ರಾಮ ಪಂಚಾಯತ್ ನಲ್ಲಿ ಗ್ರಾಮಸಭೆ

ಬೆಳ್ಳಾರೆ ಗ್ರಾಮ ಪಂಚಾಯತ್ ನ 2025-26ನೇ ಸಾಲಿನ ದ್ವಿತೀಯ ಹಂತದ ಗ್ರಾಮಸಭೆಯು
ಜ.30 ರಂದು ಬೆಳ್ಳಾರೆಯ ರಾಜೀವ ಗಾಂಧಿ ಸೇವಾ ಕಟ್ಟಡದಲ್ಲಿ ಜರುಗಿತು.
ನಾಡಗೀತೆಯೊಂದಿಗೆ ಗ್ರಾಮಸಭೆಯು ಆರಂಭವಾಯಿತು.
ಪಂಚಾಯತ್ ಪಿ.ಡಿ.ಒ ಪ್ರವೀಣ್ ಕುಮಾರ್ ಸಿ.ವಿ ಸ್ವಾಗತಿಸಿ ಜಮಾ ಖರ್ಚುಗಳ‌ ವರದಿ ಮಂಡಿಸಿದರು.
ಸುಳ್ಯ ತೋಟಗಾರಿಕಾ ಇಲಾಖೆಯ ಸಹಾಯಕ ತೋಟಗಾರಿಕಾ ಅಧಿಕಾರಿ ಅರಬಣ್ಣ ಪುಜೇರಿ ನೋಡಲ್ ಅಧಿಕಾರಿಯಾಗಿದ್ದರು.
ಈ ಮಧ್ಯೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದ ಹೋರಾಟಗಾರರಿಗೆ ಎರಡು ನಿಮಿಷಗಳ ಮೌನಾಚರಣೆ ಮಾಡಲಾಯಿತು.
ಗ್ರಾಮಾಭಿವೃದ್ಧಿಯ ಬಗ್ಗೆ ಗ್ರಾಮಸ್ಥರಾದ ಆನಂದ ಬೆಳ್ಳಾರೆ, ಆರ್.ಕೆ.ಭಟ್ ಕುರುಂಬುಡೇಲು, ಸಂಜಯ್ ನೆಟ್ಟಾರು, ಇಬ್ರಾಹಿಂ ಬೀಡು ಮೊದಲಾದವರು ಪ್ರಶ್ನೆಗಳನ್ನು ಕೇಳಿ ಸಂಬಂಧಪಟ್ಟ ಅಧಿಕಾರಿಗಳಿಂದ ತಕ್ಕ ಉತ್ತರಗಳನ್ನು ಪಡೆದುಕೊಂಡರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ನಮಿತಾ ಎಲ್ ರೈ, ಉಪಾಧ್ಯಕ್ಷೆ ವೀಣಾ ಮೂಡಾಯಿತೋಟ, ಸದಸ್ಯರಾದ ಎನ್.ಎಸ್.ಡಿ ವಿಠಲ್ ದಾಸ್, ಅನಿಲ್ ರೈ ಚಾವಡಿಬಾಗಿಲು, ಚಂದ್ರಶೇಖರ ಪನ್ನೆ, ಅನಿಲ್ ರೈ ಪುಡ್ಕಜೆ, ಎಸ್.ಮಣಿಕಂಠ, ಭವ್ಯ ಆರ್, ಜಯಶ್ರೀ ಜಿ, ಮೋಹಿನಿ ಕೆ.ಟಿ ಗೌರಿ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ದೇವರಾಜ್ ಮುತ್ಲಾಜೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಉಷಾ ಪ್ರಸಾದ್ ರೈ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ದಿಲೀಪ್ ಕೆ, ಬೆಳ್ಳಾರೆ ಮೆಸ್ಕಾಂ ಪ್ರಭಾರ ಜೆ.ಇ ಮಹೇಶ್ ಕೆ, ಬೆಳ್ಳಾರೆ ಗ್ರಾಮ ಆಡಳಿತಾಧಿಕಾರಿ ಅಜಯ್, ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.  ಕಿರಣ್ ಉಪಸ್ಥಿತರಿದ್ದರು‌.
ಗ್ರಾಮ ಪಂಚಾಯತ್ ಅಧ್ಯಕ್ಷೆ ನಮಿತಾ ಎಲ್ ರೈ ಮಾತನಾಡಿ “ನಮ್ಮ ಆಡಳಿತದ ಐದು ವರುಷದ ಅವಧಿಯಲ್ಲಿ ಬೆಳ್ಳಾರೆ ಗ್ರಾ.ಪಂ ನ ಎಲ್ಲಾ ಐದು ವಾರ್ಡ್ ಗಳಿಗೂ ಸಮಾನವಾಗಿ ಅನುದಾನವನ್ನು ಒದಗಿಸಿಕೊಟ್ಟು 100 ರಲ್ಲಿ 90 ಶೇಕಡಾದಷ್ಟು ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ. ಉಳಿದ 10 ಶೇಕಡಾದಷ್ಟು ಕಾಮಗಾರಿಯನ್ನು ಮುಂದಿನ ದಿನಗಳಲ್ಲಿ ಪೂರ್ತಿಗೊಳಿಸಲಾಗುವುದು. ನಮ್ಮ ಆಡಳಿತದ ಅವಧಿಯಲ್ಲಿ ಬೆಳ್ಳಾರೆಯ ಗೌರಿಹೊಳೆಯ ಹತ್ತಿರ ಸುಸಜ್ಜಿತ ಸ್ಮಶಾನವನ್ನು ಲೋಕಾರ್ಪಣೆಗೊಳಿಸಲಾಗಿದೆ. ಕೆಲವೇ ದಿನಗಳಲ್ಲಿ ಗ್ರಾಮ ಪಂಚಾಯತ್ ನ ಐದು ವರುಷಗಳ ಅವಧಿ ಕೊನೆಗೊಳ್ಳುತಿದ್ದು,  ಸಹಕರಿಸಿದ ಗ್ರಾಮಸ್ಥರಿಗೆ, ಬೆಳ್ಳಾರೆ ಗ್ರಾ.ಪಂ ವ್ಯಾಪ್ತಿಯ ಸಂಘ ಸಂಸ್ಥೆಯವರಿಗೆ, ವಿವಿಧ ಇಲಾಖೆಗಳ ಅಧಿಕಾರಿ ವರ್ಗದವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ” ಎಂದರು.
ಬೆಳ್ಳಾರೆ ಗ್ರಾ.ಪಂ ವತಿಯಿಂದ ಬೆಳ್ಳಾರೆಯ  ಸ್ನೇಹಿತರ ಕಲಾ ಸಂಘಕ್ಕೆ ನೀಡಿದ ಸಹಕಾರಕ್ಕಾಗಿ ಈ ಸಂಘದ ಪದಾಧಿಕಾರಿ ಸಂಜಯ್ ನೆಟ್ಟಾರು ರವರು ಕೃತಜ್ಞತೆ ಸಲ್ಲಿಸಿದರು. ರಾಷ್ಟ್ರಗೀತೆಯೊಂದಿಗೆ ಗ್ರಾಮಸಭೆಯು ಮುಕ್ತಾಯಗೊಂಡಿತು. ಪಿ.ಡಿ.ಒ ಪ್ರವೀಣ್ ಕುಮಾರ್ ಸಿ.ವಿ ಧನ್ಯವಾದ ಸಲ್ಲಿಸಿದರು.

ವರದಿ-ಎಂ.ಎ.ಮುಸ್ತಫಾ ಬೆಳ್ಳಾರೆ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading